ಅಂತರಾಷ್ಟ್ರೀಯ

ನ್ಯೂಜಿಲೆಂಡ್‌ನಲ್ಲಿ ಭೂಕಂಪ: ಸಾವು ನೋವಿನ ವರದಿ ಅಲಭ್ಯ

Pinterest LinkedIn Tumblr

newಕ್ರೈಸ್ಟ್ ಚರ್ಚ್, (ನ್ಯೂಜಿಲೆಂಡ್): ನ್ಯೂಜಿಲೆಂಡ್‌ನ ಕ್ರೈಸ್ಟ್ ಚರ್ಚ್ ನಗರದಲ್ಲಿ ಭಾನುವಾರ ರಾತ್ರಿ ೫.೮ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದ್ದು, ಸದ್ಯ ಯಾವುದೇ ಹಾನಿಯ ಬಗ್ಗೆ ವರದಿಯಾಗಿಲ್ಲ.

ಕಳೆದ ಐದು ವರ್ಷಗಳ ಹಿಂದೆ ಸಂಭವಿಸಿದ್ದ ಪ್ರಬಲ ಭೂಕಂಪದಲ್ಲಿ ನಗರ ಬಹುತೇಕ ನಾಶವಾಗಿ ನೂರಾರು ಜನ ಸಾವನ್ನಪ್ಪಿದ್ದು. ಈ ಬಾರಿಯ ಕಂಪನವೂ ಸಾಕಷ್ಟು ಪ್ರಬಲವಾಗಿದ್ದು, ಅನೇಕ ನಿವಾಸಿಗಳನ್ನು ತೆರವುಗೊಳಿಸಲಾಗಿದೆ. ಮನೆಗಳು, ಕಂಪಿಸಿ ವಸ್ತುಗಳು ಚೆಲ್ಲಾ ಪಿಲ್ಲಿಯಾಗಿವೆ.

ನಗರದ ಪೂರ್ವಕ್ಕಿರುವ ಸ್ಕಾರ್‌ಬರೊ ಗುಡ್ಡದಮೇಲಿನಿಂದ ಭಾರೀ ಕಲ್ಲು ಬಂಡೆಗಳು ಕೆಳಗುರುಳಿಬಿದ್ದಿವೆ. ಕಂಪನದ ಪ್ರದೇಶದಿಂದ ದೂರ ಹೋಗುವಂತೆ ನಗರಾಡಳಿತ ಸಾರ್ವಜನಿಕರಿಗೆ ಸೂಚಿಸಿದೆ. ಮತ್ತೆ ಭೂಮಿ ಕಂಪಿಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Write A Comment