ರಾಷ್ಟ್ರೀಯ

ಸುಪ್ರೀಂಕೋರ್ಟ್‌ನ ನ್ಯಾಯಧೀಶರಿಬ್ಬರ ವಿರುದ್ಧ ಎಫ್ಐಆರ್ ದಾಖಲಿಸಲು ಆದೇಶ: ಕರ್ಣನ್

Pinterest LinkedIn Tumblr

Madras-HighCourtಚೆನ್ನೈ: ಎಸ್ ಸಿ/ಎಸ್‌ ಟಿ ದೌರ್ಜನ್ಯ ತಡೆ ಕಾಯಿದೆಯಡಿ ಸುಪ್ರೀಂ ಕೋರ್ಟಿನ ಇಬ್ಬರು ನ್ಯಾಯಧೀಶರ ವಿರುದ್ಧ ಎಫ್ಐಆರ್‌ ದಾಖಲಿಸಲು ತಾನು ಆದೇಶ ಹೊರಡಿಸುವುದಾಗಿ ಮದ್ರಾಸ್‌ ಹೈಕೋರ್ಟ್‌ ನ್ಯಾಯಾಧೀಶ ಜಸ್ಟಿಸ್‌ ಸಿ ಎಸ್‌ ಕರ್ಣನ್‌ ಅವರು ಹೇಳಿದ್ದಾರೆ.
ಸುಪ್ರೀಂ ಕೋರ್ಟಿನ ಇಬ್ಬರು ನ್ಯಾಯಾಧೀಶರ ವಿರುದ್ಧ ಎಫ್ಐಆರ್‌ ದಾಖಲಿಸುವಂತೆ ನಾನು ಚೆನ್ನೈ ಪೊಲೀಸ್‌ ಕಮಿಷನರ್‌ಗೆ ಸ್ವಯಂ ಪ್ರೇರಿತ ನ್ಯಾಯಾಂಗ ಆದೇಶವನ್ನು ಹೊರಡಿಸುತ್ತೇನೆ ಎಂದು ಜಸ್ಟಿಸ್‌ ಕರ್ಣನ್‌ ಗುಡುಗಿದ್ದಾರೆ.
ಜಸ್ಟಿಸ್‌ ಕರ್ಣನ್‌ ಅವರು ಕಲ್ಕತ್ತಾ ಹೈಕೋರ್ಟಿಗೆ ವರ್ಗವಾಗಿದ್ದಾರೆ; ಆದರೆ ಸುಪ್ರೀಂ ಕೋರ್ಟಿನ ಇಬ್ಬರು ನ್ಯಾಯಾಧೀಶರಾದ ಜೆಎಸ್ ಕೆಹಾರ್ ಮತ್ತು ಆರ್ ಭಾನುಮತಿ ಅವರನ್ನೊಳಗೊಂಡ ಪೀಠವು ಕರ್ಣನ್‌ ಅವರಿಗೆ ನ್ಯಾಯಾಂಗ ಕಾರ್ಯ ಕೈಗೊಳ್ಳದಂತೆ ನಿರ್ಬಂಧಿಸಿದೆ. ನನಗೆ ನ್ಯಾಯಾಂಗ ಕಾರ್ಯ ಹಂಚಿಕೆಯನ್ನು ಮಾತ್ರವೇ ನಿಲ್ಲಿಸಲಾಗಿದೆ. ಆದರೆ ನನ್ನ ನ್ಯಾಯಾಂಗ ಅಧಿಕಾರಗಳು ಇನ್ನೂ ನನ್ನ ಬಳಿಯೇ ಇವೆ ಎಂದು ಜಸ್ಟಿಸ್‌ ಕರ್ಣನ್‌ ಹೇಳಿರುವುದಾಗಿ ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ.
ಜಸ್ಟಿಸ್‌ ಕರ್ಣನ್‌ “ಕಲ್ಕತ್ತಾ ಹೈಕೋರ್ಟಿಗೆ ನನ್ನನ್ನು ವರ್ಗಾಯಿಸುವ 2016 ಫೆಬ್ರವರಿ 12ರ ವರಿಷ್ಠ ನ್ಯಾಯಮೂರ್ತಿಗಳ ಆದೇಶಕ್ಕೆ ನಾನು ತಡೆಯಾಜ್ಞೆ ನೀಡುತ್ತಿದ್ದೇನೆ. ಕಾನೂನಿನ ಪ್ರಕಾರ ಕೆಳ ನ್ಯಾಯಾಲಯವು ಸುಪ್ರೀಂ ಕೋರ್ಟ್‌ ಮಾತ್ರವಲ್ಲದೆ ಯಾವುದೇ ಮೇಲಿನ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸುವಂತಿಲ್ಲ.
ಜಸ್ಟಿಸ್‌ ಕರ್ಣನ್‌ ಅವರು ತಮ್ಮ ಸ್ವಯಂ ಪ್ರೇರಿತ ಆದೇಶದಲ್ಲಿ, “ಮಾನ್ಯ ನ್ಯಾಯಮೂರ್ತಿಗಳೇ, ಕಲ್ಕತ್ತ ಹೈಕೋರ್ಟಿಗೆ ನನ್ನನ್ನು ಉತ್ತಮ ಆಡಳಿತೆ ನೀಡುವ ಕಾರಣಕ್ಕಾಗಿ ವರ್ಗಾವಣೆ ಮಾಡುವ ನಿಮ್ಮ ಪ್ರಸ್ತಾವಕ್ಕೆ ನಾನು ಈಗಾಗಲೇ, ನೀವು ಕಳುಹಿಸಿರುವ ಆದೇಶ ಪ್ರತಿಯ ಜೆರಾಕ್ಸ್‌ ಪ್ರತಿಯ ಮೇಲೆ ನಾನು ಉತ್ತರ ನೀಡಿದ್ದೇನೆ’ ಎಂದು ತಿಳಿಸಿದ್ದಾರೆ.

Write A Comment