ಲಂಡನ್: ನಾಯಿಗಳಿಗೆ ಅಪಾರ ಪ್ರಮಾಣದ ಬುದ್ಧಿಶಕ್ತಿ ಇದೆ ಎನ್ನುವುದನ್ನು ನೀವು ತಿಳಿದಿರಬಹುದು. ಈಗ ನಾಯಿ ಬುದ್ಧಿ ಶಕ್ತಿಯನ್ನು ಉಪಯೋಗಿಸಿಕೊಂಡು ಇಂಗ್ಲೆಂಡಿನ ಪ್ರೈಮರಿ ಶಾಲಾ ಮಕ್ಕಳಿಗೆ ಶಿಕ್ಷಣ ಹೇಳಿಕೊಡಲಾಗುತ್ತಿದೆ.
ಹೌದು. ಲ್ಯಾಬ್ರಡರ್ ನಾಯಿಗೆ ಇಂಗ್ಲಿಷ್ ಪದಗಳ ಪಾಠಗಳನ್ನು ಹೇಳಿಕೊಡಲಾಗಿದ್ದು, ಈ ಪದಗಳಲ್ಲಿರುವಂತೆ ತನ್ನ ವರ್ತನೆ ತೋರಿಸುತ್ತದೆ. ಸ್ಲೀಪ್ ಎಂದು ಬರೆದಿರುವ ಬೋರ್ಡ್ ತೋರಿಸಿದರೆ ನಾಯಿ ಮಲಗುತ್ತದೆ. ರೋಲ್ ಓವರ್ ಎಂದರೆ ಉರುಳಾಡುತ್ತದೆ.
ಸೋಮರ್‍ಸೆಟ್‍ನ ಶಾಲೆಯಲ್ಲಿ ಈ ವಿಶಿಷ್ಟ ಪ್ರಯೋಗ ನಡೆಯುತ್ತಿದ್ದು, ಮಕ್ಕಳಿಗೆ ಪಾಠಗಳನ್ನು ಓದಲು ಪ್ರೇರಣೆ ನೀಡಲು ಈ ತಂತ್ರ ಅಳವಡಿಸಿಕೊಂಡಿದ್ದೇವೆ ಎಂದು ಶಾಲೆ ತಿಳಿಸಿದೆ.