ಅದೇನ್, ಫೆ.13-ಯೇಮೇನ್ ದಕ್ಷಿಣನಗರ ಅದೇನ್‌ನಲ್ಲಿ ಅಪರಿಚಿತ ಬಂದೂಕುಧಾರಿಗಳು ಐವರು ಪೊಲೀಸರುನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಅಲ್-ಖೈದಾ ಭಯೋತ್ಪಾದಕರೆಂದು ಶಂಕಿಸಲಾದ ಕೆಲವು ಮಂದಿ ಬಂದೂಕುಧಾರಿಗಳು ಅದೇನ್‌ನ ದಾರ್‌ಸಾದ್‌ನಲ್ಲಿರುವ ಪೊಲೀಸ್ ಠಾಣೆಗೆ ನುಗ್ಗಿ ಯುದ್ವಾ ತದ್ವ ಗುಂಡು ಹಾರಿಸಿ ಐವರು ಪೊಲೀಸರನ್ನು ಹತ್ಯೆ ಮಾಡಿ, ಇತರ ಐವರನ್ನು ಗಾಯಗೊಳಿಸಿದ್ದಾರೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದವಾರವಷ್ಟೇ ಆಲ್ ಖೈದಾ ಉಗ್ರರು ಅದೇನ್‌ನಲ್ಲಿ ಮಾರಕ ದಾಳಿ ನಡೆಸಿ ಅತೇನ್‌ನ ಮಾಜಿ ಗವರ್ನರ್ ಹಲವು ಮಂದಿ ಉನ್ನತ ದರ್ಜೆ ಸೇನಾಧಿಕಾರಿಗಳು ಹಾಗೂ ನ್ಯಾಯಾಧೀಶರನ್ನು ಹತ್ಯೆ ಮಾಡಿದ್ದರು. ಅರಬ್ ದೇಶಗಳ ಭಾಗವಾಗಿರುವ ಯೆಮೆನ್ ಮೇಲೆ ಅಲ್ ಖೈದಾ ಉಗ್ರರು ಸದಾ ದಾಳಿ ನಡೆಸುತ್ತಲೇ ಇರುತ್ತಾರೆ.