ರಾಷ್ಟ್ರೀಯ

ಬಿಹಾರದಲ್ಲಿ ಭೀಕರ ಅಪಘಾತ:12ಸಾವು, 13ಜನಕ್ಕೆ ಗಾಯ

Pinterest LinkedIn Tumblr

accidentಸಸರಾಮ್, ಫೆ.13-ಬಿಹಾರದ ರೋಹಾಟಕ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 2ರಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ 12ಜನ ಮೃತಪಟ್ಟು 13ಜನ ಗಾಯಗೊಂಡಿದ್ದಾರೆ.

25ಜನರನ್ನು ಕರೆದೊಯ್ಯುತ್ತಿದ್ದ ಟ್ರಾಕ್ಟರ್ ಒಂದು ಟ್ರಕ್‌ಗೆ ಡಿಕ್ಕಿ ಹೊಡೆದು ಸಂಭವಿಸಿದ ಈ ದುರಂತದಲ್ಲಿ 6ಮಹಿಳೆಯರು, ಇಬ್ಬರು ಮಕ್ಕಳು ಸೇರಿದಂತೆ 12ಜನ ಸಾವನ್ನಪ್ಪಿದ್ದಾರೆ. ರೊಹ್ಟಾಸ್ ಜಿಲ್ಲೆಯ ಗುಪ್ತಧಾಮ್‌ನಲ್ಲಿ ಪೂಜೆ ಮುಗಿಸಿಕೊಂಡು ತಮ್ಮ ಸ್ವಂತ ಊರು ಕುಸುಮ ಗ್ರಾಮಕ್ಕೆ ಬರುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಗಾಯಾಳುಗಳನ್ನೆಲ್ಲ ಆಸ್ಪತ್ರೆಗೆ ಸಾಗಿಸುತ್ತಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Write A Comment