
ತೈಪೆ: ತೈವಾನ್‌ನ ದಕ್ಷಿಣ ಭಾಗದಲ್ಲಿ ಸಂಭವಿಸಿರುವ ಭೂಕಂಪದಲ್ಲಿ ಈವರೆಗೆ ಮೂರು ಮಂದಿ ಮೃತಪಟ್ಟಿದ್ದು ನೂರಾರು ಜನ ಗಾಯಗೊಂಡಿದ್ದಾರೆ.
ಕಟ್ಟಡ ಅವಶೇಷಗಳ ಅಡಿಯಿಂದ ಈವರೆಗೆ 221 ಮಂದಿಯನ್ನು ರಕ್ಷಿಸಲಾಗಿದೆ. ಪರಿಹಾರ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯ ಕಾಲಮಾನ ಬೆಳಿಗ್ಗೆ 4 ಗಂಟೆಗೆ ಭೂಮಿ ಕಂಪಿಸಿದೆ ಎಂದು ವರದಿಯಾಗಿದೆ.
ಭೂಕಂಪದಿಂದಾಗಿ ತೈನಾನ್ ನಗರದ ಬಹುತೇಕ ಕಟ್ಟಡಗಳು ಕುಸಿದಿವೆ. ಬಹುಮಹಡಿ ಕಟ್ಟಡಗಳು ಒಂದರ ಮೇಲೊಂದು ಬಿದ್ದಿವೆ.