ಅಂತರಾಷ್ಟ್ರೀಯ

ಸ್ಯಾಮ್ಸಂಗ್‌: ಹೊಸ ತಂತ್ರಜ್ಞಾನದ ಎಂಟು ಉತ್ಪನ್ನಗಳ ಬಿಡುಗಡೆ

Pinterest LinkedIn Tumblr

samfiಕ್ವಾಲಾಲಂಪುರ: ಎರಡು 4ಜಿ ಮೊಬೈಲ್ ಫೋನ್‌ಗಳೂ ಸೇರಿದಂತೆ ನವೀನ ತಂತ್ರಜ್ಞಾನವನ್ನು ಅಳವಡಿಸಿಕೊಂಡಿ ರುವ ಎಂಟು ಉತ್ಪನ್ನಗಳು ಇಲ್ಲಿ ನಡೆಯು ತ್ತಿರುವ ‘ಸ್ಯಾಮ್ಸಂಗ್‌ ‌ ಫೋರಮ್-2016’ರಲ್ಲಿ ಅನಾವರಣಗೊಂಡವು.

ಈ ಸಂದರ್ಭದಲ್ಲಿ ಮಾತನಾಡಿದ ಸ್ಯಾಮ್ಸಂಗ್‌ ನೈರುತ್ಯ ಏಷ್ಯಾ ಘಟಕದ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಸಿ.ಹಾಂಗ್, ‘ಭಾರತಕ್ಕಾಗಿ ತಯಾರಿಸುವ’ ಯೋಜನೆಗೆ ನೀಡಿರುವ ಮಹತ್ವ ಮುಂದುವರಿಯುತ್ತದೆ. ಇದು ನೈರುತ್ಯ ಏಷ್ಯಾದ ನಮ್ಮ ಕಾರ್ಯಾಚರಣೆಯ ಪ್ರಮುಖ ಭಾಗ.

ಭಾರತೀಯ ಗ್ರಾಹಕರು ಮತ್ತು ಭೌಗೋಳಿಕ ವಾತಾವರಣ ದೃಷ್ಟಿಯಲ್ಲಿಟ್ಟುಕೊಂಡು ಹೊಸ ತಾಂತ್ರಿಕ ಆವಿಷ್ಕಾರಗಳನ್ನು ಅಳವಡಿಸಿಕೊಂಡಿರುವ ಮತ್ತಷ್ಟು ಹೊಸ ಉತ್ಪನ್ನಗಳು ಈ ವರ್ಷ ಮಾರುಕಟ್ಟೆಗೆ ಬರಲಿವೆ’ ಎಂದರು.

‘ಜಾಗತಿಕವಾಗಿ ಪ್ರಸ್ತುತವಾಗು ವುದಕ್ಕೆ ಹೆಚ್ಚು ಸ್ಥಳೀಯವಾಗಿರಬೇಕು ಎಂಬ ತತ್ವವನ್ನು ಸ್ಯಾಮ್ಸಂಗ್‌ ಅನುಸರಿಸುತ್ತಿದೆ’ ಎಂದ ಅವರು, ‘ನಮ್ಮ ಉತ್ಪನ್ನಗಳು ಸ್ಥಳೀಯ ಮಾರುಕಟ್ಟೆಯ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಜಾಗತಿಕವಾಗಿ ಅತ್ಯಾಧುನಿಕ ತಂತ್ರಜ್ಞಾನ ವನ್ನು ಪರಿಚಯಿಸುತ್ತಿವೆ’ ಎಂದು ತಿಳಿಸಿದರು.

ಸ್ಮಾರ್ಟ್ ಫೋನ್: ಈಗಾಗಲೇ ಮಾರುಕಟ್ಟೆಯಲ್ಲಿ ಸ್ಯಾಮ್ಸಂಗ್‌ ಗ್ಯಾಲಕ್ಸಿ ಎ ಸರಣಿಯ ಫೋನುಗಳಿಗೆ ‘ಎ5’ ಮತ್ತು ‘ಎ7’ ಎಂಬ ಎರಡು ಹೊಸ ಫೋನು ಗಳು ಸೇರ್ಪಡೆಯಾಗಿವೆ. ಲೋಹ ಮತ್ತು ಗಾಜಿನ ಹೊರ ಆವರಣ ಇರುವ ‘4ಜಿ‘ ತಂತ್ರಜ್ಞಾನದ ಈ ಫೋನುಗಳ ಬೆಲೆ ಕ್ರಮವಾಗಿ ₹ 29,400 ಮತ್ತು ₹33.400. ಫೆ.15ರಿಂದ ಇವು ಭಾರತದಲ್ಲಿ ಖರೀದಿಗೆ ಲಭ್ಯವಿರುತ್ತವೆ.

ಪೂರ್ಣ ಎಚ್‌ಡಿ ವಿಡಿಯೊ ವೀಕ್ಷಣೆ ಸೌಲಭ್ಯವಿರುವ ಈ ಫೋನುಗಳಲ್ಲಿ 13 ಮೆಗಾಪಿಕ್ಸೆಲ್‌ನ ಹಿಂಬದಿ ಕ್ಯಾಮರಾ ಮತ್ತು 5 ಮೆಗಾ ಪಿಕ್ಸಲ್‌ನ ಸೆಲ್ಫೀ ಕ್ಯಾಮೆರಾಗಳಿವೆ. ಎರಡೂ ಫೋನುಗಳು ಆಕ್ಟಾ ಕೋರ್ ಪ್ರೊಸೆಸರ್‌ಗಳನ್ನು ಹೊಂದಿವೆ.

ಈ ಫೋನ್‌ಗಳು ಆನ್‌ಲೈನ್‌ನಲ್ಲಿ ಸ್ನ್ಯಾಪ್‌ಡೀಲ್ ತಾಣ ಮತ್ತು ಎಲ್ಲಾ ಸ್ಯಾಮ್‌ಸಂಗ್ ಡೀಲರ್‌ಗಳ ಬಳಿ ಖರೀದಿಗೆ ಲಭ್ಯವಿರುತ್ತವೆ. ಸ್ಮಾರ್ಟ್ ಟಿವಿ: ಟಿ.ವಿ. ತಯಾರಿಕೆಯ ವಿಶ್ವ ಮಾರುಕಟ್ಟೆಯಲ್ಲಿ ಒಂದನೇ ಸ್ಥಾನವನ್ನು ಕಳೆದ ಹತ್ತು ವರ್ಷಗಳಿಂತ ಉಳಿಸಿಕೊಂಡಿರುವ ಸ್ಯಾಮ್ಸಂಗ್‌ ಹೊಸ ಸ್ಮಾರ್ಟ್ ಟಿ.ವಿ. ಸರಣಿಯೊಂದನ್ನು ಅನಾವರಣಗೊಳಿಸಿದೆ.

ಕ್ವಾಂಟಂ ಡಾಟ್ ಡಿಸ್‌ಪ್ಲೇ ತಂತ್ರಜ್ಞಾನವಿರುವ ಹೊಸ ಟಿ.ವಿ. ಟೈಝನ್ ಎಂಬ ಕಾರ್ಯಾಚರಣ ವ್ಯವಸ್ಥೆಯನ್ನು ಬಳಸುತ್ತದೆ. ಎಲ್ಲಾ ಕೋನಗಳಿಂದಲೂ ಸ್ಪಷ್ಟ ವೀಕ್ಷಣೆಗೆ ಅವಕಾಶ ಕೊಡುವ ಟಿ.ವಿ. ಅಂತರ್ಜಾಲ ಆಧಾರಿತ ಸೇವೆ ಗಳನ್ನು ಸುಲಲಿತವಾಗಿ ಬಳಸು ವಂತೆ ಮತ್ತು ಸ್ಮಾರ್ಟ್‌ಫೋನ್‌ನಂಥ ಗ್ಯಾಜೆಟ್‌ ಗಳ ಜೊತೆ ಸಂಪರ್ಕ ಕಲ್ಪಿಸಲು ಅನುಕೂಲವಾಗುವಂತೆ ವಿನ್ಯಾಸಗೊಂಡಿದೆ.

ಬಹೂಪಯೋಗಿ ಫ್ರಿಜ್: ಸ್ಯಾಮ್ಸಂಗ್‌ ತನ್ನ ಕನ್ವರ್ಟಿಬಲ್ ಫ್ರಿಜ್‌ಗೆ ಹೊಸ ವಿನ್ಯಾಸವನ್ನು ಅಳವಡಿಸಿಕೊಂಡಿದೆ. ಐದು ವಿಧಗಳ ಕೂಲಿಂಗ್ ವ್ಯವಸ್ಥೆ ಲಭ್ಯವಿದ್ದು ಇಡೀ ಫ್ರಿಜ್ ಅನ್ನು ಫ್ರೀಜರ್ ಆಗಿ ಬಳಸುವ ಅನುಕೂಲತೆಯನ್ನು ಹೊಂದಿದೆ.

ವಾಷಿಂಗ್ ಮಷಿನ್: ಫ್ರಂಟ್ ಲೋಡಿಂಗ್ ವಾಷಿಂಗ್ ಮಷಿನ್‌ಗಳಿಗೆ ಒಮ್ಮೆ ಬಟ್ಟೆಯನ್ನು ತುಂಬಿಸಿ ಕಾರ್ಯಾರಂಭಿಸಿದರೆ ಮಧ್ಯೆ ಬಟ್ಟೆಯನ್ನು ಹಾಕಲು ಸಾಧ್ಯವಿಲ್ಲ. ಈ ಪರಿಸ್ಥಿತಿಯನ್ನು ಬದಲಾಯಿಸುವ ಆ್ಯಕ್ಟಿವ್ ವಾಷ್‌ ಸರಣಿಯ ವಾಷಿಂಗ್ ಮಷೀನ್‌ಗಳನ್ನು ಸ್ಯಾಮ್ಸಂಗ್‌ ಪರಿಚಯಿಸಿದೆ. ಇದರ ಜೊತೆಗೆ ಟಾಪ್ ಲೋಡಿಂಗ್ ವಿಭಾಗ ದಲ್ಲಿ ಡಿಟರ್ಜೆಂಟ್‌ ಸರಿಯಾಗಿ ನೀರಿನಲ್ಲಿ ಮಿಶ್ರಣವಾಗಲು ಸಹಕರಿಸುವ ಮ್ಯಾಜಿಕ್ ಡಿಸ್ಪೆನ್ಸರ್ ತಾಂತ್ರಿಕತೆ ಇರುವ ಮಷಿನ್‌ ಗಳನ್ನೂ ಮಾರುಕಟ್ಟೆಗೆ ತರುತ್ತಿದೆ.

ಸ್ಮಾರ್ಟ್ ಓವನ್: ಹಾಟ್ ಬ್ಲಾಸ್ಟ್ ಹೆಸರಿನಲ್ಲಿ ಮಾರುಕಟ್ಟೆಗೆ ಬರುತ್ತಿರುವ ಸ್ಯಾಮ್ಸಂಗ್‌ನ ಹೊಸ ಓವನ್ ಈಗಿರುವ ಓವನ್‌ಗಳಿಗಿಂತ ಹೆಚ್ಚು ಪರಿಣಾಮ ಕಾರಿಯಾಗಿದೆ. ಭಾರತೀಯ ಅಡುಗೆ ಮನೆಗಳಿಗೆ ಅನುಕೂಲವಾಗುವಂತೆ ಕರಿಯುವಿಕೆ ಮತ್ತು ಬೇಯಿಸುವಿಕೆಗಳೆರಡೂ ಒಟ್ಟಿಗೇ ಸಾಧ್ಯವಾಗುವಂತೆ ಇದನ್ನು ರೂಪಿಸಲಾಗಿದೆ.

ಈ ಗೃಹ ಬಳಕೆ ಸಾಮಗ್ರಿಗಳಲ್ಲದೆ ಔದ್ಯಮಿಕ ಹಾಗೂ ಗೃಹ ಬಳಕೆಯ ಹವಾನಿಯಂತ್ರಕಗಳು, ಜಾಹೀರಾತು ಮತ್ತು ಇತರ ಮಾಹಿತಿಗಳನ್ನು ಪ್ರದರ್ಶಿಸುವ ಎಲ್‌ಇಡಿ ಫಲಕಗಳ ಸುಧಾರಿತ ಆವೃತ್ತಿಗಳನ್ನೂ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.

Write A Comment