ಅಂತರಾಷ್ಟ್ರೀಯ

ಯಾಹೂ 1,700 ಉದ್ಯೋಗ ಕಡಿತ; ಸಿಇಓ ವಜಾಕ್ಕೆ ಶೇರುದಾರರ ಆಗ್ರಹ

Pinterest LinkedIn Tumblr

Yahoo-700ಸ್ಯಾನ್‌ಫ್ರಾನ್ಸಿಸ್ಕೋ : ವಿಶ್ವ ಪ್ರಸಿದ್ಧ ಐಟಿ ಸಂಸ್ಥೆ ಯಾಹೂ, ತನ್ನ ಸುಮಾರು 1,700 ನೌಕರರನ್ನು ಕೈಬಿಡಲಿದೆ. ಶೇ.15ರಷ್ಟು ಉದ್ಯೋಗಿಗಳನ್ನು ತೆಗೆದು ಹಾಕುವ ಈ ಪ್ರಕ್ರಿಯೆಯಲ್ಲಿ ಯಾಹೂ ಸಿಇಓ ಮ್ಯಾರಿಸಾ ಮ್ಯಾಯೆರ್‌ ಅವರು ತಮ್ಮ ಹುದ್ದೆಯನ್ನು ಉಳಿಸಿಕೊಳ್ಳುವರೇ ಎಂಬುದು ನಿಗೂಢವೂ ಕುತೂಹಲಕಾರಿಯೂ ಆಗಿದೆ. ಆದರೆ ಯಾಹೂ ಶೇರುದಾರರು ಸಿಇಓ ಮ್ಯಾರಿಸಾ ಅವರನ್ನು ಕಿತ್ತು ಹಾಕಲು ಒತ್ತಾಯಿಸಿದ್ದಾರೆ.

ಶೇ.15ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ಮೂಲಕ ಯೂಹೂ ವರ್ಷಕ್ಕೆ ಸುಮಾರು 40 ಕೋಟಿ ಡಾಲರ್‌ ಉಳಿಸಲಿದೆ. ಇದರೊಂದಿಗೆ ಯಾಹೂ ಈ ವರ್ಷ ತೀವ್ರವಾಗಿ ಇಳಿದು ಹೋಗಿರುವ ತನ್ನ ನಿವ್ವಳ ಆದಾಯವನ್ನು ತಕ್ಕಮಟ್ಟಿಗೆ ನಿಭಾಯಿಸಲು ಸಾಧ್ಯವಾಗಲಿದೆ.

ಯಾಹೂ ನಷ್ಟವನ್ನು ತಕ್ಕ ಮಟ್ಟಿಗೆ ಭರಿಸುವ ಯತ್ನದಲ್ಲಿ ಸಿಇಓ ಮ್ಯಾಯೆರ್‌ ಅವರು ಯಾಹೂವಿನ ಕೆಲವೊಂದು ಪೇಟೆಂಟ್‌ಗಳನ್ನು, ರಿಯಲ್‌ ಎಸ್ಟೇಟ್‌ ಆಸ್ತಿಯನ್ನು ಮತ್ತು ಇತರ ಕೆಲವು ಸೊತ್ತುಗಳನ್ನು ಮಾರುವ ಆಲೋಚನೆ ಹೊಂದಿದ್ದಾರೆ. ಈ ಮೂಲಕ ಯಾಹೂ ಸುಮಾರು 1ರಿಂದ 3 ಬಿಲಿಯ ಡಾಲರ್‌ ಗಳಿಸಲಿದೆ ಎಂದು ಮೂಲಗಳು ತಿಳಿಸಿವೆ.
-ಉದಯವಾಣಿ

Write A Comment