ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವುದಕ್ಕೆ ವಾಹನ ಚಲಾಯಿಸುವುದು ಮಾತ್ರ “ಡ್ರೈವಿಂಗ್’ ಅಂದುಕೊಂಡರೆ ತಪ್ಪು ತಪ್ಪು. ಡ್ರೈವಿಂಗ್ ಅಂದರೆ ಆತ್ಮವಿಶ್ವಾಸ, ಡ್ರೈವಿಂಗ್ ಅಂದರೆ ಉಲ್ಲಾಸ, ಡ್ರೈವಿಂಗ್ ಅಂದರೆ ಸ್ವಾತಂತ್ರ್ಯ, ಮನಸ್ಸಿಗೆ ಅದೇನೋ ಖುಷಿ ಅನ್ನೋದು ನಿಜಕ್ಕೂ ಹೌದು. ಇದು ಸಮೀಕ್ಷೆಯೊಂದರಲ್ಲೂ ಸಾಬೀತಾಗಿದೆ. ವಯಸ್ಸಾದವರು ಡ್ರೈವಿಂಗ್ ಮಾಡೋದನ್ನು ಸಂಪೂರ್ಣ ಬಿಟ್ಟ ಬಳಿಕ ಅವರಲ್ಲಿ ಆರೋಗ್ಯ ಕ್ಷೀಣವಾಗುತ್ತೆ ಎಂದು ಸಮೀಕ್ಷೆಯೊಂದು ಹೇಳಿದೆ. ಅಮೆರಿಕದ ವೃದ್ಧಾರೋಗ್ಯಶಾಸ್ತ್ರದ ಕುರಿತ ನಿಯತಕಾಲಿಕೆ ಈ ಸಮೀಕ್ಷೆ.ಪ್ರಕಟಿಸಿದೆ.
ಕೆಲವು ವಯಸ್ಸಾದವರಲ್ಲಿ ಆರೋಗ್ಯ ಕುಂಠಿತವಾಗಲು ಕಾರಣ ಡ್ರೈವಿಂಗ್ ಸ್ಥಗಿತಗೊಳಿಸಿದ್ದು ಎಂದು ಹೇಳಿದೆ. ವಯಸ್ಸಾದವರಲ್ಲಿ ಮಾನಸಿಕ ಸಂತೋಷಕ್ಕೆ ಅದು ಪ್ರಮುಖ ಕಾರಣವಾಗಿದೆ ಮತ್ತು ನಿರ್ಧಾರ ತೆಗೆದುಕೊಳ್ಳುವುದಲ್ಲಿ ತಾವಿನ್ನೂ ಶಕ್ತರಿದ್ದೇವೆ ಎಂಬ ಭಾವನೆಯನ್ನು ಹೊಂದಲು ಕಾರಣವಾಗಿದೆ. ಖನ್ನತೆಯಂತಹ ಸಮಸ್ಯೆಗಳು ಇನ್ನೂ ಡ್ರೈವಿಂಗ್ ಮಾಡುತ್ತಿದ್ದವರಲ್ಲಿ ಕಡಿಮೆಯಿದೆ ಎಂದು ಸಮೀಕ್ಷೆ ಬೊಟ್ಟು ಮಾಡಿದೆ. ಏಕಾಗ್ರತೆ ಹೆಚ್ಚಲು ಮತ್ತು ಮಾನಸಿಕ ಸಾಮರ್ಥ್ಯ ವೃದ್ಧಿಗೆ ಡ್ರೈವಿಂಗ್ ಪರಿಣಾಮಕಾರಿಯಾಗಿದೆ. ಅದನ್ನು ಸ್ಥಗಿತಗೊಳಿಸಿದ ಕೂಡಲೇ ವಯಸ್ಸಾದವರ ಆರೋಗ್ಯದ ಮೇಲೆ ಪರಿಣಾಮವಾಗುತ್ತದೆ ಎಂದು ಅದು ಹೇಳಿದೆ.
ಫಲಿತಗಳು…
* ಡ್ರೈವಿಂಗ್, ವಯಸ್ಸಾದವರಿಗೆ ಮಾನಸಿಕ ಸಂತೋಷ, ನಿರ್ಧಾರ ತೆಗೆದುಕೊಳ್ಳಲು ಶಕ್ತರಿದ್ದೇವೆ ಎಂಬ ಭಾವನೆ ಬೆಳೆಸುತ್ತದೆ.
*ಖಿನ್ನತೆಯಂತಹ ಸಮಸ್ಯೆಗಳು ನಿಯಮಿತವಾಗಿ ಡ್ರೈವಿಂಗ್ ಮಾಡುತ್ತಿದ್ದವರಲ್ಲಿ ಕಡಿಮೆ
*ಏಕಾಗ್ರತೆ ಹೆಚ್ಚಲು ಮತ್ತು ಮಾನಸಿಕ ಸಾಮರ್ಥ್ಯ ವೃದ್ಧಿಗೆ ಡ್ರೈವಿಂಗ್ ಪರಿಣಾಮಕಾರಿ: ಸಮೀಕ್ಷೆ
-ಉದಯವಾಣಿ