ಕರ್ನಾಟಕ

ಇನ್ನು ಮದುವೆ ಮಂಟಪದ ಪಕ್ಕದಲ್ಲೇ “ರಸಂ’ ಇಡಲು ವಧು ಕಡೆಯವರ ನಿರ್ಧಾರ!

Pinterest LinkedIn Tumblr

TomatoRasamಬೆಂಗಳೂರು: ಕುಣಿಗಲ್‌ನ ವಿವಾಹವೊಂದರಲ್ಲಿ ರಸಂ ನೀಡದ್ದಕ್ಕೆ ತಾಳಿ ಕಟ್ಟದೆ ವರ ಎದ್ದುಹೋದ ಪ್ರಕರಣ ವರದಿಯಾದ ಬೆನ್ನಲ್ಲೇ ಮುಂದಿನ ವಿವಾಹಗಳಲ್ಲಿ ಇಂತಹ ಅವಾಂತರ ತಡೆಗಟ್ಟಲು ಹೆಣ್ಮಕ್ಕಳ ಕುಟುಂಬದವರು ಒಮ್ಮತದ ನಿರ್ಧಾರಕ್ಕೆ ಬಂದಿದ್ದಾರೆ.

ಈ ನಿರ್ಧಾರದಂತೆಮದುವೆ ದಿನ ವಧುವಿನ ಕಡೆಯವರು ಮಂಟಪದ ಪಕ್ಕದಲ್ಲೇ ದೊಡ್ಡ ಪಾತ್ರೆಯಲ್ಲಿ ರಸಂ ತೆಗೆದಿಡಲಿದ್ದು, ಅದನ್ನು ತಾಳಿಕಟ್ಟುವ ಮುನ್ನ ಪುರೋಹಿತರು, ಊರವರು- ಹಿರಿಯರ ಸಮ್ಮುಖ ವರನಿಗೆ ಮತ್ತು ಅವರ ಕಡೆಯವರಿಗೆ ತೋರಿಸಲಿದ್ದಾರೆ.

ಆ ಬಳಿಕವೇ ವಿವಾಹ ಶಾಸ್ತ್ರ ಮುಗಿಸಲು ನಿರ್ಧರಿಸಲಾಗಿದೆ. ರಸಂ ತೋರಿಸಿದ ಬಗ್ಗೆ ಮತ್ತು ಪಾತ್ರೆಯಲ್ಲಿ ರಸಂ ಇರುವ ಬಗ್ಗೆ ಈ ವೇಳೆ ಫೋಟೋ, ವಿಡಿಯೋ ತೆಗೆಯಲಾಗುವುದು. ಜೊತೆಗೆ ರಸಂ ಸುವಾಸನೆ ಸುತ್ತಲೂ ಹರಡಿಸಲು ಮತ್ತು ಅದನ್ನು ನೆನಪಿಸುವಂತೆ ಆಗಾಗ್ಗೆ ಪಾತ್ರೆ ಮುಚ್ಚಳ ತೆಗೆದು ತೋರಿಸಲು ನಿರ್ಧರಿಸಿರುವುದಾಗಿ ವಧುವಿನ ಕಡೆಯವರು ತಿಳಿಸಿದ್ದಾರೆ.
-ಉದಯವಾಣಿ

Write A Comment