ಅಂತರಾಷ್ಟ್ರೀಯ

ಪರಾರಿ ಯತ್ನ ನಡೆಸಿದ ಇಪ್ಪತ್ತು ಸಹಚರರ ತಲೆ ಕಡಿದ ಐಸಿಸ್

Pinterest LinkedIn Tumblr

isಕೈರೋ: ಇರಾಕಿನ ಮೊಸುಲ್ ಪಟ್ಟಣದಲ್ಲಿ ಸಮರ ಕ್ಷೇತ್ರದಿಂದ ಪರಾರಿಯಾಗಲು ಯತ್ನಿಸಿದ ತನ್ನ 20 ಮಂದಿ ಯೋಧರನ್ನು ಐಸಿಸ್ (ಇಸ್ಲಾಮಿಕ್ ಸ್ಟೇಟ್) ಬಹಿರಂಗವಾಗಿ ಜನರ ಎದುರು ತಲೆ ಕಡಿದಿದೆ ಎಂದು ವರದಿಗಳು ತಿಳಿಸಿವೆ. ಸಂಘಟನೆಯನ್ನು ಪರಿತ್ಯಜಿಸುವುದರ ವಿರುದ್ಧ ಐಸಿಸ್ ನೀಡಿರುವ ಕಠಿಣ ಎಚ್ಚರಿಕೆ ಇದು ಎಂದು ವರದಿಗಳು ಹೇಳಿವೆ.

ಇರಾಕ್ ಮತ್ತು ಸಿರಿಯಾದಲ್ಲಿ ಐಸಿಸ್ ತನ್ನ ಸಂಘಟನೆಯ ಉಗ್ರಗಾಮಿಗಳು ಗುಂಪನ್ನು ನಿನೆವೇಹ್ ಪ್ರಾಂತ್ಯದ ಮೊಸುಲ್ ನಗರದ ಯುದ್ಧಭೂಮಿಯಿಂದ ಪರಾರಿಯಾಗಲು ಯತ್ನಿಸಿದ ಗುಂಪನ್ನು ಐಸಿಸ್ ಸೆರೆ ಹಿಡಿದಿದ್ದು, ಸಾರ್ವಜನಿಕವಾಗಿ ಅವರ ಶಿರಚ್ಛೇದ ಮಾಡಿದೆ ಎಂದು ಅರಾ ನ್ಯೂಸ್ ವರದಿ ಮಾಡಿದೆ.

ಪರಾರಿಯಾಗಲು ಯತ್ನಿಸಿದ ಭಿನ್ನಮತೀಯರನ್ನು ಮೊಸುಲ್ ಪಟ್ಟಣ ಸಮೀಪದ ತಪಾಸಣಾ ಸ್ಥಳದಲ್ಲಿ ಶುಕ್ರವಾರ ಸಂಜೆ ಪತ್ತೆ ಹಚ್ಚಲಾಯಿತು. ಪಶ್ಚಿಮ ಮೋಸುಲ್ ಪಟ್ಟಣದ ಸಮರಭೂಮಿಯಿಂದ ತಮ್ಮ ಸ್ಥಾನಗಳನ್ನು ಬಿಟ್ಟು ಪರಾರಿಯಾಗಲು ಹೊರಟಿದ್ದವರು ಅವರು ಎಂದು ಗುರುತಿಲಾಯಿತು. ಅವರನ್ನು ಷರಿಯಾ ನ್ಯಾಯಾಲಯದಲ್ಲಿ ವಿಚಾರಣೆಗೆ ಗುರಿ ಪಡಿಸಲಾಯಿತು ಎಂದು ಐಸಿಸ್ ‘ಅಧಿಕಾರಿ’ಯನ್ನು ಉಲ್ಲೇಖಿಸಿ ಸ್ಥಳೀಯ ಸುದ್ದಿ ಮೂಲಗಳು ತಿಳಿಸಿವೆ.

‘ರಾಜದ್ರೋಹದ ಆರೋಪದಲ್ಲಿ ಬಂಧಿತರ ತಲೆ ಕಡಿಯುವಂತೆ ಷರಿಯಾ ನ್ಯಾಯಾಲಯ ಆಜ್ಞಾಪಿಸಿತು. ಸಮರಗ್ರಸ್ಥ ಪ್ರದೇಶಗಳಿಂದ ತಮ್ಮ ಯೋಧರು ಸ್ಥಳಬಿಟ್ಟು ಕದಲದಂತೆ ಮಾಡಲು ಎಚ್ಚರಿಕೆ ನೀಡಲು ಅವರ ತಲೆ ಕಡಿಯಲಾಯಿತು ಎಂದು ವರದಿಗಳು ಹೇಳಿವೆ.

Write A Comment