ಅಂತರಾಷ್ಟ್ರೀಯ

ಡಿಸ್ನಿ ಲ್ಯಾಂಡ್ ಪ್ಯಾರಿಸ್ ಹೊಟೇಲ್‌ನಲ್ಲಿ ಶಸ್ತ್ರಾಸ್ತ್ರ ಸಹಿತ ಉಗ್ರ ಹಾಗೂ ಆತನ ಪ್ರೇಯಸಿ ಸೆರೆ

Pinterest LinkedIn Tumblr

sidniಪ್ಯಾರಿಸ್, ಜ.29-ಕಳೆದ ನವೆಂಬರ್‌ನಲ್ಲಿ ನಡೆದ ವಿಧ್ವಂಸಕ ಕೃತ್ಯದ ನೆನಪು ಹಸಿರಾಗಿರುವಾಗಲೇ, ಸಮೀಪದ ಡಿಸ್ನಿ ಲ್ಯಾಂಡ್ ಪ್ಯಾರಿಸ್ ಹೊಟೇಲ್‌ನಲ್ಲಿ ಪೊಲೀಸರು 2 ಹ್ಯಾಂಡ್‌ಗನ್‌ಗಳು, ಇತರ ಸ್ಫೋಟಕ ವಸ್ತುಗಳು ಹಾಗೂ ಒಂದು ಖುರಾನ್ ಪ್ರತಿ ಹೊಂದಿದ್ದ  ಅಪರಿಚಿತ ವ್ಯಕ್ತಿ ಹಾಗೂ ಅವನ ಪ್ರಿಯತಮೆಯನ್ನು ಬಂಧಿಸಿದ್ದಾರೆ. ವ್ಯಕ್ತಿ ಹೊಟೇಲ್ ಪ್ರವೇಶಿಸುತ್ತಿದ್ದಂಥೆ ಲೋಹ ಪತ್ತೆ ಯಂತ್ರ ಸೈರನ್ ಮೊಳಗಿಸಿತು. ಇದನ್ನು ಕಂಡ ಪೊಲೀಸರು ವ್ಯಕ್ತಿಯನ್ನು ಸುತ್ತುವರೆದು ತಪಾಸಣೆ  ನಡೆಸಿದರು. ಈ ವೇಳೆ ಅವನ ಬಳಿ ಎರಡು ಹ್ಯಾಂಡ್‌ಗನ್‌ಗಳು, ಬೇರೆ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಇರುವುದು ಪತ್ತೆಯಾಯಿತು. ಅವನನ್ನು ಬಂಧಿಸಿದ ಪೊಲೀಸರು ನಂತರ ಅವನ ಪ್ರೇಯಸಿ (ಗರ್ಲ್‌ಫ್ರೆಂಡ್) ಹಾಗೂ ವಾಹನ ವಶಪಡಿಸಿಕೊಂಡರು.

ನವೆಂಬರ್ ಹತ್ಯಾಕಾಂಡದ ನಂತರ ಪ್ಯಾರಿಸ್‌ನಲ್ಲಿ ಮತ್ತು ಸುತ್ತಮುತ್ತಲ ನಗರಗಳಲ್ಲಿ ಬಿಗಿಭದ್ರತೆ ಏರ್ಪಡಿಸಲಾಗಿದ್ದು ಪೊಲೀಸರು ಸರ್ಪಗಾವಲು ಕಾಯುತ್ತಿದ್ದಾರೆ. ಅವನ ಬಳಿಯಿದ್ದ ದಾಖಲೆಗಳ ಪರಿಶೀಲನೆಯಿಂದ  ಆ ವ್ಯಕ್ತಿ ಪ್ಯಾರಿಸ್‌ನಲ್ಲೇ ವಾಸ್ತವ್ಯವಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಅವನ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ.

ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಿಂದ 35 ಕಿ.ಮೀ. ದೂರದಲ್ಲಿರುವ ಡಿಸ್ನಿ ಲ್ಯಾಂಡ್ ಪ್ಯಾರಿಸ್ ಹೊಟೇಲ್ ವಿಶ್ವದ ಅತ್ಯಾಕರ್ಷಕ ಪ್ರವಾಸಿ ತಾನವಾಗಿದ್ದು, 2014ರಲ್ಲಿ 10 ದಶಲಕ್ಷ ವಿದೇಶಿಯರು ಇಲ್ಲಿಗೆ ಭೇಟಿ ನೀಡಿದ್ದಾರೆ.
ನವೆಂಬರ್ ದಾಳಿಯಲ್ಲಿ 130 ಜನ ಅಮಾಯಕರ ನರಮೇಧ ನಡೆಸಿದ್ದ ಐಎಸ್ ಉಗ್ರರು, ಒಂದು ವರ್ಷದಲ್ಲಿ (2014) ಇದಕ್ಕಿಂತಲೂ ದೊಡ್ಡ ಪ್ರಮಾಣದ  ಭಯೋತ್ಪಾದಕ ಕೃತ್ಯ ನಡೆಸುವುದಾಗಿ ಹೇಳಿರುವ ಹಿನ್ನೆಲೆಯಲ್ಲಿ ಫ್ರಾನ್ಸ್ ಕಟ್ಟೆಚ್ಚರ ವಹಿಸಿದೆ. ಪ್ರಮುಖ ನಗರಎಗ್ಝಳಖಿ ಏಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಸೇನಾಪಡೆಗಳನ್ನು ನಿಯೋಜಿಸಲಾಗಿದೆ. ದೇಶಾದ್ಯಂತ ಹೈ ಅಲರ್ಟ್ ಘೋಷಿಸಿದ್ದು, ಎಂಥದೇ ಸಂದರ್ಭ ನಿಭಾಯಿಸಲು ಸಿದ್ಧ ವಿರುವಂತೆ ಮಿಲಿಟರಿ ಹಾಗೂ ಪೊಲೀಸ್ ಸಿಬ್ಬಂದಿಗೆ ಸರ್ಕಾರ ಸೂಚನೆ ನೀಡಿದೆ.

2015ರ ಉದ್ದಕ್ಕೂ ಪ್ಯಾರಿಸ್‌ನಲ್ಲಿ ಒಂದಲ್ಲ ಒಂದು ಉಗ್ರ ದಾಳಿಗಳು ನಡೆಯುತ್ತಲೇ ಇದ್ದವು . 2015ರ ಜನವರಿಯಲ್ಲಿ 17 ಮಂದಿ ಸೇರಿದಂತೆ ಹಲವರು ಬಲಿಯಾಗಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ ಭಾರತ ಭೇಟಿಯ ನಂತರ ಇಂದಿನ ಈ ಘಟನೆ ಮಹತ್ವ ಪಡೆದುಕೊಂಡಿದೆ.

Write A Comment