ಅಂತರಾಷ್ಟ್ರೀಯ

ಐಸಿಸ್​ನಿಂದ ಪ್ಯಾರಿಸ್ ದಾಳಿ ಉಗ್ರರ ವಿಡಿಯೋ ಬಿಡುಗಡೆ

Pinterest LinkedIn Tumblr

25-isisi-video-webಬೀರೂತ್: 2015ರ ನವೆಂಬರ್ ತಿಂಗಳಲ್ಲಿ 130 ಮಂದಿಯನ್ನು ಬಲಿ ಪಡೆದ ಪ್ಯಾರಿಸ್ ದಾಳಿಗಳ ಹಿಂದಿನ 9 ಉಗ್ರಗಾಮಿಗಳನ್ನು ತೋರಿಸುವ ವಿಡಿಯೋವನ್ನು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ (ಐಎಸ್​ಐಎಸ್-ಐಸಿಸ್) ಬಿಡುಗಡೆ ಮಾಡಿದೆ.

ಉಗ್ರಗಾಮಿ ವೆಬ್ ಸೈಟ್​ಗಳಲ್ಲಿ ‘ಕಿಲ್ ವ್ಹೇರ್​ಎವೆರ್ ಯು ಫೈಂಡ್ ದೆಮ್ (ನಿಮಗೆ ಸಿಕ್ಕ ಸಿಕ್ಕಲ್ಲಿ ಅವರನ್ನು ಕೊಲ್ಲಿ) ಶೀರ್ಷಿಕೆಯ ಈ ವಿಡಿಯೋವನ್ನು ಪ್ರಕಟಿಸಲಾಗಿದ್ದು, ಮೂವರು ಫ್ರೆಂಚ್ ಪ್ರಜೆಗಳು, ಇಬ್ಬರು ಇರಾಕಿಗಳು ಈ ದಾಳಿಗಳಿಗೆ ಕಾರಣ’ ಎಂದು ತಿಳಿಸಿದೆ. ಬ್ರಿಟನ್ ಸೇರಿದಂತೆ ಮೈತ್ರಿಕೂಟದ ರಾಷ್ಟ್ರಗಳನ್ನು ಬೆದರಿಸಲು ಈ ವಿಡಿಯೋವನ್ನು ಐಸಿಸ್ ಪ್ರಕಟಿಸಿದೆ ಎಂದು ಹೇಳಲಾಗಿದೆ.

ಫ್ರೆಂಚ್ ಮತ್ತು ಅರಬಿಕ್ ಭಾಷೆಗಳಲ್ಲಿ ಮಾತನಾಡುವ ಉಗ್ರಗಾಮಿಗಳು ‘ಅಮೆರಿಕ ನೇತೃತ್ವದ ಮೈತ್ರಿಕೂಟದ ದಾಳಿಗಳಲ್ಲಿ ಪಾಲ್ಗೊಂಡಿರುವ ಎಲ್ಲಾ ರಾಷ್ಟ್ರಗಳಿಗೂ ಇದು ನಮ್ಮ ಸಂದೇಶ’ ಎಂದು ವಿಡಿಯೊ ಹೇಳಿದೆ. ಐಸಿಸ್​ನ ಅಲ್-ಹಯಾತ್ ನಿರ್ಮಿಸಿರುವ ಈ ವಿಡಿಯೋ 9 ಉಗ್ರಗಾಮಿಗಳುನ್ನು ‘ಸಿಂಹ’ಗಳು ಎಂದು ಬಣ್ಣಿಸಿರುವ ವಿಡಿಯೋ ‘ಅವರು ಫ್ರಾನ್ಸ್ ಮೊಣಕಾಲೂರುವಂತೆ ಮಾಡಿದ್ದಾರೆ’ ಎಂದು ಹೇಳಿದೆ.

Write A Comment