ಬೀಜಿಂಗ್: ಒಂದು ವೇಳೆ ಗಡಿ ಹೊಸದಾಗಿ ರಚಿಸಲು ದೇವರಿಗೆ ಮತ್ತೆ ಅವಕಾಶ ಸಿಕ್ಕರೆ ಭಾರತ, ಜಪಾನ್ ನಮ್ಮ ಪಕ್ಕದಲ್ಲಿರುವುದು ಬೇಡವೇ ಬೇಡ. ಪಾಕಿಸ್ಥಾನ, ನೇಪಾಳ ಮಾತ್ರ ನೆರೆರಾಷ್ಟ್ರಗಳಾಗಿರಲಿ ಎಂದು ಚೀನಿಯರು ಅಭಿಪ್ರಾಯ ಹೊರಹಾಕಿದ್ದಾರೆ. ಚೀನದ ‘ಗ್ಲೋಬಲ್ ಟೈಮ್ಸ್’ ಎಂಬ ಹೆಸರಿನ ಟ್ಯಾಬ್ಲಾಯ್ಡ 2,00,000ಕ್ಕೂ ಹೆಚ್ಚು ಜನರಿಂದ ಆನ್‌ಲೈನ್ ಮೂಲಕ ನೆರೆಯ ರಾಷ್ಟ್ರಗಳ ಆಯ್ಕೆಯ ಬಗ್ಗೆ ಅಭಿಪಾಯ ಸಂಗ್ರಹಿಸಿದೆ. ಆ ಪೈಕಿ 13, 196 ಮಂದಿ ಜಪಾನ್ ಅನ್ನು ದೂರವಿಡಬೇಕು ಅಂದರೆ, ಭಾರತವನ್ನು ಚೀನದಿಂದ ದೂರ ಮಾಡಬೇಕು ಎಂದು 10,416 ಮಂದಿ ಹೇಳಿದ್ದಾರೆ.
ಅಲ್ಲದೇ, ಫಿಲಿಪ್ಪೀನ್ಸ್, ವಿಯೆಟ್ನಾಂ, ಉತ್ತರ ಕೊರಿಯಾ, ಅಫ್ಘಾನಿಸ್ಥಾನ ಮತ್ತು ಇಂಡೋನೇಷ್ಯಾಗಳು ಕೂಡ ಚೀನದ ನೆರೆಯ ರಾಷ್ಟ್ರವಾಗುವುದು ತಮಗೆ ಇಷ್ಟವಿಲ್ಲ ಎಂದು ಜನರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ, ಪಾಕಿಸ್ಥಾನ ಮತ್ತು ನೇಪಾಳಗಳು ಚೀನದ ನೆರೆಯ ರಾಷ್ಟ್ರಗಳಾಗುವುದಕ್ಕೆ ಯೋಗ್ಯವಾಗಿವೆ ಎಂದು ಹೇಳಿದ್ದಾರೆ. ಭಾರತ- ಚೀನ ನಡುವೆ ದಶಕಗಳಿಂದ ಗಡಿ ವಿವಾದವಿದೆ.
-ಉದಯವಾಣಿ