ಅಂತರಾಷ್ಟ್ರೀಯ

ಹಿರಿಯ ಪುರುಷರತ್ತ ಆಕರ್ಷಿತರಾಗುವ ಲಲನೆಯರು… ಏನಿದರ ರಹಸ್ಯ !

Pinterest LinkedIn Tumblr

1sexಎಲ್ಲಾ ಸಮಯದಲ್ಲೂ ಕೇವಲ ಪುರುಷರು ಮಾತ್ರ ತಮಗಿಂತ ಹಿರಿಯ ಮಹಿಳೆಯರೆಡೆಗೆ ಅಥವಾ ವಿವಾಹಿತ ಮಹಿಳೆಯರೆಡೆಗೆ ಆಕರ್ಷಿತರಾಗುವುದಿಲ್ಲ. ಬದಲಾಗಿ ಮಹಿಳೆಯರು ಸಹ ಇದೇ ರೀತಿ ಮಾಡುತ್ತಾರೆ. ಈ ಪ್ರೀತಿ ಆಕರ್ಷಣೆ ವಿಷಯ ಬಂದಾಗ ಮಹಿಳೆಯರು ತಮಗಿಂತ ತುಂಬಾ ಹಿರಿಯ ಪುರುಷರೆಡೆಗೆ ಆಕರ್ಷಿತರಾಗುತ್ತಾರೆ. ಅದಕ್ಕೆ ಕಾರಣವೂ ಇದೆ.

ಹಾಗಾದರೆ ಮಹಿಳೆಯರು ತುಂಬಾ ಹಿರಿಯ ವಯಸ್ಸಿನ ಪುರುಷನೆಡೆಗೆ ಆಕರ್ಷಿತರಾಗೋದು ಯಾಕೆ ಇಲ್ಲಿ ನೋಡಿ..

ಅವರು ನಿಮ್ಮನ್ನು ಯಾವತ್ತೂ ಕೀಳಾಗಿ ಕಾಣೋದಿಲ್ಲ : ಹಿರಿಯ ಪುರುಷರು ತುಂಬಾ ಮೆಚ್ಯೂರಿಟಿ ಹೊಂದಿರುವುದರಿಂದ ಅವರು ಯಾವತ್ತೂ ನಿಮ್ಮನ್ನು ಕೀಳಾಗಿ ಕಾಣುವುದಿಲ್ಲ. ನಿಮ್ಮ ಎಲ್ಲಾ ಮಾತಿಗೂ ಅವರು ಬೆಂಬಲ ಸೂಚಿಸುತ್ತಾರೆ, ಅವಶ್ಯಕತೆ ಇದ್ದಾಗ ನಿಮ್ಮ ಬೆನ್ನೆಲುಬಾಗಿ ನಿಂತು ನಿಮಗೆ ಸಹಾಯ ಮಾಡುತ್ತಾರೆ.

ಓಲ್ಡ್‌ ವೈನ್‌ ಇನ್‌ ನ್ಯೂ ಬಾಟಲ್‌ : ಯೆಸ್‌ ವೈನ್‌ ಓಲ್ಡ್ ಆದಷ್ಟು ಹೆಚ್ಚು ಟೇಸ್ಟ್‌ ಹೊಂದಿರುತ್ತದೆ. ಅದೇ ರೀತಿ ಹಿರಿಯ ಪುರುಷರು ಓಲ್ಡ್‌ ವೈನ್‌ನಂತೆ. ಎಲ್ಲಾ ಗುಣಗಳು, ಅಭಿರುಚಿ ಎಲ್ಲವೂ ಉತ್ತಮವಾಗಿರುತ್ತದೆ. ಅವರ ಯಾವ ಗುಣಗಳು ಸಹ ನಿಮಗೆ ಕೆಟ್ಟದಾಗಿ ಕಾಣಲು ಸಾಧ್ಯವೇ ಇಲ್ಲ.

ಸೆಕ್ಸುವಲಿ ಪರ್‌ಫೆಕ್ಟ್‌ ಆಗಿರುತ್ತಾರೆ : ಹಿರಿಯ ಪುರುಷರು ಸೆಕ್ಸ್‌ ವಿಷಯದಲ್ಲಿ ಪರ್‌ಫೆಕ್ಟ್‌ ಆಗಿರುತ್ತಾರೆ. ಆ ಬಗ್ಗೆ ಅವರಿಗೆ ಹೊಸದಾಗಿ ಪಾಠ ಮಾಡುವ ಅವಶ್ಯಕತೆ ಇಲ್ಲ. ಬೆಡ್‌ ಮೇಲೆ ನಿಮ್ಮನ್ನು ಯಾವ ರೀತಿ ಖುಶಿಯಾಗಿ, ಬೆಸ್ಟ್‌ ಸುಖ ಕೊಡಬಹುದು ಎಂಬುದು ಅವರಿಗೆ ತಿಳಿದಿರುತ್ತದೆ.

ಅವರಿಗೆ ಇನ್ಯಾರ ಮೇಲೂ ಪ್ರೀತಿ ಆಗಲ್ಲ : ಹಿರಿಯ ಪುರುಷ ಎಂದ ಮೇಲೆ ಅವರ ಪ್ರೀತಿ ಪ್ರೇಮದ ವಯಸ್ಸೆಲ್ಲಾ ಮುಗಿದು ಹೋಗಿರುತ್ತದೆ. ಆದುದರಿಂದ ಅವರನ್ನು ನೀವು ನಿಮ್ಮ ಹಿಡಿತದಲ್ಲೇ ಇಟ್ಟುಕೊಳ್ಳೋದು ತುಂಬಾ ಸುಲಭ. ಯಾಕೆಂದರೆ ಅವರು ಇನ್ಯಾರನ್ನೋ ಪ್ರೀತಿಸಿದರೆ ಎಂಬ ಭಯ ನಿಮ್ಮ ಮನಸಿನಲ್ಲಿ ಮೂಡಲು ಅಥವಾ ಅದು ನಡೆಯಲು ಸಾಧ್ಯವೇ ಇಲ್ಲ.

ಅವರು ಕೋಪ ಮಾಡಿಕೊಂಡರೂ ಹಿತವಿರುತ್ತದೆ : ಹಿರಿಯ ಪುರುಷರು ಎಂದರೆ ಪ್ರೌಢತೆಯ ಸಂಕೇತವಾಗಿರುತ್ತಾರೆ. ಅವರು ನಿಮ್ಮ ಮೇಲೆ ಕೋಪ ಮಾಡಿಕೊಂಡಾಗಲೂ ನಿಮಗೆ ಏನೂ ಅನಿಸುವುದಿಲ್ಲ. ಯಾಕೆಂದರೆ ಅವರು ಬೈದರೆ ನಿಮಗೆ ನಿಮ್ಮ ತಂದೆ ನಿಮ್ಮ ಮೇಲೆ ಕೋಪ ಮಾಡಿಕೊಂಡಂತೆ ಭಾಸವಾಗುತ್ತದೆ.

ಮಾತನಾಡಲು ಖುಶಿಯಾಗುತ್ತದೆ : ಇವರು ಅನುಭವಗಳ ಖಜಾನೆಯಾಗಿರುತ್ತಾರೆ. ಇವರ ಬಳಿ ಹಲವಾರು ಕುತೂಹಲ ಭರಿತ ಸಂಗತಿಗಳು ಇರುತ್ತದೆ. ಸೋ ಇಡೀ ದಿನ ಬೇಕಾದರೆ ನೀವು ಇವರ ಜೊತೆ ಮಾತುಕತೆ ನಡೆಸಬಹುದು. ಇದರಿಂದ ನಿಮ್ಮ ಜ್ಞಾನದ ಭಂಡಾರ ಸಹ ಬೆಳೆಯುತ್ತದೆ.

ಲೈಫ್‌ನಲ್ಲಿ ಸೆಟಲ್‌ ಆಗಿರುತ್ತಾರೆ : ನೀವು ಲವ್‌ ಮಾಡಿರೋದು ಸಣ್ಣ ವಯಸ್ಸಿನ ಹುಡುಗ ಆಗಿದ್ದರೆ ಲೈಫ್‌ ಬಗ್ಗೆ ತುಂಬಾ ಚಿಂತೆ ನಿಮ್ಮನ್ನು ಕಾಡುತ್ತದೆ. ಆದರೆ ಹಿರಿಯ ಪುರುಷನನ್ನು ಇಷ್ಟಪಟ್ಟರೆ ಇದ್ಯಾವುದೇ ಟೆನ್ಶನ್‌ ನಿಮ್ಮ ಬಳಿ ಸುಳಿಯುವುದಿಲ್ಲ. ಯಾಕೆಂದರೆ ಅವರು ಲೈಫ್‌ನಲ್ಲಿ ಸೆಟಲ್‌ ಆಗಿರುತ್ತಾರೆ.

Write A Comment