ಅಂತರಾಷ್ಟ್ರೀಯ

ಕಣ್ಣೀರಿಗಾಗಿ ಬರಾಕ್ ಒಬಾಮಾ ಕಚ್ಚಾ ಈರುಳ್ಳಿ ಉಪಯೋಗಿಸಿದ್ದರು

Pinterest LinkedIn Tumblr

download

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಬಂದೂಕು ನಿಯಂತ್ರಣ ಕಾರ್ಯಕ್ರಮದಲ್ಲಿ ಅತ್ತು ಕಣ್ಣೀರು ಬರಿಸಿಕೊಳ್ಳಲು ಈರುಳ್ಳಿ ಉಪಯೋಗಿಸಿದ್ದರು ಎಂದು ಅಮೆರಿಕಾದ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.
ಜನವರಿ 5ರಂದು ಅಮೆರಿಕಾದ ವೈಟ್ ಹೌಸ್ ನಲ್ಲಿ ನಡೆದ ಬಂದೂಕು ನಿಯಂತ್ರಣ ಕ್ರಮಗಳು ಎಂಬ ಕಾರ್ಯಕ್ರಮದಲ್ಲಿ  ಮಾತನಾಡುವಾಗ ಭಾವೋದ್ವೇಗಕ್ಕೊಳಗಾದ ಬರಾಕ್ ಒಬಾಮಾ  ಕೃತಕವಾಗಿ ಅತ್ತರು. ಎಂದು ವರದಿ ಮಾಡಲಾಗಿದೆ.
2012 ರಲ್ಲಿ ಸ್ಯಾಂಡಿ ಹುಕ್ ಶಾಲೆಯಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲಿ 20 ಮಕ್ಕಳು ಸಾವನಪ್ಪಿದ ಘಟನೆ ಸ್ಮರಿಸುತ್ತಾ ಬರಾಕ್ ಒಮಾಬಾ ಕಣ್ಣಿರು ಹಾಕಿದ್ದರು. ಈ ಸಂಬಂಧ ಚಾನೆಲ್ ನಿರೂಪಕಿ ಚರ್ಚಿಸುವಾಗ, ನಾಯಕರು ತೋರಿಸುವ ಕಣ್ಣೀರು ಹಾಗೂ ಭಾವೋದ್ವೇಗವನ್ನು ನಂಬಬಾರದು ಎಂದು ಹೇಳಿದ್ದಾರೆ.
ಕಣ್ಣೀರು ಬರಿಸಿಕೊಳ್ಳಲು ಒಬಾಮಾ ಈರುಳ್ಳಿ ಅಥವಾ ಬೇರೆ ಯಾವ ವಸ್ತುವನ್ನು ಬಳಸಿದ್ದರೇ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ನಿರೂಪಕಿ ಹೇಳಿದ್ದಾರೆ.  

 

Write A Comment