ಕನ್ನಡ ವಾರ್ತೆಗಳು

ಜಿ.ಪಂ.,ತಾ.ಪಂ. ಚುನಾವಣೆ ಎದುರಿಸಲು ಬಿಜೆಪಿ ಸಜ್ಜು: ಎಲ್ಲೆಡೆ ಗೆಲುವು ನಿಶ್ಚಿತ- ವಿಧಾನಪರಿಷತ್ ಸದಸ್ಯ ಕೋಟ ಹೇಳಿಕೆ

Pinterest LinkedIn Tumblr

ಕುಂದಾಪುರ: ಮುಂಬರುವ ಜಿಲ್ಲಾಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯನ್ನು ಎದುರಿಸಲು ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಕೆಲಸ ಕಾರ್ಯಗಳು ನಡೆಯುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಗಂಗೊಳ್ಳಿ ಸಮೀಪದ ಗುಜ್ಜಾಡಿಯ ಗುಹೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

Kota Shrinivas Poojary_Gangolli_visit (1) Kota Shrinivas Poojary_Gangolli_visit (9) Kota Shrinivas Poojary_Gangolli_visit (5) Kota Shrinivas Poojary_Gangolli_visit (4) Kota Shrinivas Poojary_Gangolli_visit (3) Kota Shrinivas Poojary_Gangolli_visit (7) Kota Shrinivas Poojary_Gangolli_visit (6) Kota Shrinivas Poojary_Gangolli_visit (2) Kota Shrinivas Poojary_Gangolli_visit (8)

ಕರ್ನಾಟಕ ರಾಜ್ಯದಾದ್ಯಂತ ಚುನಾವಣೆಗೆ ಪೂರ್ವಸಿದ್ಧತೆಗಳು ನಡೆಯುತ್ತಿದ್ದು, ಕಾರ್ಯಕರ್ತರ ಜೋಡಣೆ, ಸಂಪರ್ಕ ಹಾಗೂ ಅಭ್ಯರ್ಥಿಗಳ ಆಯ್ಕೆಯನ್ನು ಪ್ರಥಮ ಹಂತದಲ್ಲಿ ಮಾಡುವ ಯೋಜನೆಯಿದೆ, ಈಗಾಗಲೇ ಎಲ್ಲಾ ಪ್ರಮುಖ ಕಾರ್ಯಕರ್ತರ ಭೇಟಿ ನಡೆಸಿ ಅವರ ಅಭ್ಯರ್ಥಿಗಳ ಹೆಸರನ್ನು ಪಾರದರ್ಶಕವಾಗಿ ಪಡೆದಿದ್ದೇವೆ, ಮುಂದಿನ ದಿನಗಳಲ್ಲಿ ಜಿಲ್ಲಾ ಹಾಗೂ ರಾಜ್ಯ ಕೋರ್ ಕಮಿಟಿ ಚರ್ಚಿಸಿ ಸೂಕ್ತ ಸಲಹೆಗಳನ್ನು ನೀಡುತ್ತೇವೆ, ನಿಶ್ಚಯವಾಗಿ ಬಿಜೆಪಿಯಿಂದ ಉತ್ತಮ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಉಡುಪಿ ಜಿಲ್ಲಾ ಪಂಚಾಯತ್ ಸೇರಿದಂತೆ ರಾಜ್ಯದಲ್ಲಿ ಬಹುತೇಕ ಜಿ.ಅಪ್ಂ. ತಾ.ಪಂ. ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭ ಬೈಂದೂರು ಬಿಜೆಪಿ ಅಧ್ಯಕ್ಷ ಬಿ.ಎಂ. ಸುಕುಮಾರ್ ಶೆಟ್ಟಿ ಮೊದಲಾದವರಿದ್ದರು.

ಚಿತ್ರ- ಯೋಗೀಶ್ ಕುಂಭಾಸಿ

Write A Comment