ಅಂತರಾಷ್ಟ್ರೀಯ

ಬೀದಿಗೆ ಬಿದ್ದ 10 ಲಕ್ಷ ನೈಜೀರಿಯಾದ ಶಾಲಾ ಮಕ್ಕಳು

Pinterest LinkedIn Tumblr

niವಿಶ್ವಸಂಸ್ಥೆ, ಡಿ.24- ಮಕ್ಕಳ ಮೇಲಿನ ದೌರ್ಜನ್ಯ, ಹಿಂಸೆಗೆ ಹೆಸರಾಗಿರುವ ಬೊಕ ಹರಾಮ್ ಉಗ್ರ ಸಂಘಟನೆ ನೈಜೀರಿಯಾದ ಸುಮಾರು 10 ಲಕ್ಷಕ್ಕೂ ಹೆಚ್ಚು ಮಕ್ಕಳು ಶಾಲೆಯಿಂದ (ಶಿಕ್ಷಣ) ಹೊರಗುಳಿಯುವಂತೆ ಮಾಡಿದ್ದು, ಶಿಕ್ಷಣದ ಕೊರತೆಯಿಂದಾಗಿ ಆ ದೇಶದಲ್ಲಿ ಕೆಲವು ದಿನಗಳ ನಂತರ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಲಿವೆ ಎಂಬ ಆತಂಕವನ್ನು ವಿಶ್ವಸಂಸ್ಥೆ ಮಕ್ಕಳ ಹಿತರಕ್ಷಣಾ ಏಜೆನ್ಸಿ (ಯುನಿಸೆಫ್) ತೀವ್ರ ಕಳವಳ ವ್ಯಕ್ತಪಡಿಸಿದೆ.  ನೈಜೀರಿಯಾ ದೇಶದಾದ್ಯಂತ ಸುಮಾರು 2 ಸಾವಿರಕ್ಕೂ ಹೆಚ್ಚು ಶಾಲೆಗಳನ್ನು ಸಂಪೂರ್ಣವಾಗಿ ಹಾಳು ಬಿಡಲಾಗಿದೆ.   ಕೆಲವನ್ನು ಸುಟ್ಟು ಹಾಕಲಾಗಿದೆ. ಪ್ರಮುಖವಾಗಿ ನೈಜೀರಿಯಾ, ಕೆಮರೋನ್, ಚಾಡ್ ಮತ್ತು ನೈಜಿರ್‌ಗಳಲ್ಲಿ ಹೆಚ್ಚಿನ ಮಕ್ಕಳು ಉಗ್ರರ ಹಿಂಸೆಗೆ ಗುರಿಯಾಗಿವೆ.

ಅನೇಕ ಶಾಲೆಗಳನ್ನು ಲೂಟಿ ಮಾಡಿ, ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿದೆ. ಸ್ವತಂತ್ರ್ಯ ಸಾಮ್ರಾಜ್ಯ ಸ್ಥಾಪನೆ ಗುರಿ ಹೊಂದಿರುವ ಹರಾಮ್ ಜಿಹಾದಿಗಳು ಇಲ್ಲಿ ಅಟ್ಟಹಾಸ ಮೆರೆಯುತ್ತಿದ್ದಾರೆ.

ನೈಜೀರಿಯಾದ ಅಧ್ಯಕ್ಷ ಮೊಹಮ್ಮದ್ ಬುಹಾರಿ ಉಗ್ರರ ದಮನಕ್ಕೆ ಸೇನೆಗೆ ನಿರ್ದೇಶನ ನೀಡಿದ್ದರೂ ಅವರನ್ನು ಮಟ್ಟ ಹಾಕುವಲ್ಲಿ ಸಫಲವಾಗಿಲ್ಲ. ಬೊಕೊ ಹರಾಮ್ ಉಗ್ರರು ಲಕ್ಷಾಂತರ ಶಾಲಾ ಬಾಲಕಿಯರನ್ನು ಒತ್ತೆಯಾಗಿಟ್ಟುಕೊಂಡು ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಹಿಂಸಿಸುತ್ತಾ ಎಳೆಯ ಮಕ್ಕಳ ಜೀವವನ್ನೇ ನರಕವನ್ನಾಗಿ ಮಾಡುತ್ತಿದ್ದಾರೆ. ಇದು ಮುಂದೆ ಇನ್ನೂ ಯಾವ ಹಂತ ತಲುಪಲಿದೆ ಎಂಬುದು ಈಗ ಯುನಿಸೆಫ್ ಸಮಸ್ಯೆಯಾಗಿದೆ.

Write A Comment