ಅಂತರಾಷ್ಟ್ರೀಯ

ಬಾಲಕನೊಂದಿಗೆ ಬಲತ್ಕಾರದ ಸೆಕ್ಸ್‌ :ಮಹಿಳೆ ಅರೆಸ್ಟ್‌ , ಪತಿ ವಿಚ್ಛೇಧನ

Pinterest LinkedIn Tumblr

rapeee

ಟೆಕ್ಸಾಸ್‌ : ಅಮೆರಿಕದ ಮಹಿಳೆಯೊಬ್ಬಳು ಸೋದರಳಿಯನೊಂದಿಗೆ ನೂರಾರು ಬಾರಿ ಬಲವಂತದ ಸೆಕ್ಸ್‌ ನಲ್ಲಿ ಪಾಲ್ಗೊಂಡು ಲೈಂಗಿಕ ದೌರ್ಜನ್ಯ ಎಸಗಿರುವ ತಪ್ಪಿಗಾಗಿ ಇದೀಗ ಕಂಬಿ ಎಣಿಸಬೇಕಾಗಿದೆ.

ಪೆಗ್ಗಿ ಪಿಲಿಪ್ಸ್‌ ಎನ್ನುವ ಮಹಿಳೆ ತನ್ನ ಪತಿಯ ಸಂಬಂಧಿ ಬಾಲಕನನ್ನು 7 ವರ್ಷಗಳ ಕಾಲ ಲೈಂಗಿಕವಾಗಿ ಬಳಸಿಕೊಂಡಿದ್ದು, ನೂರಾರು ಬಾರಿ ಆತನೊಂದಿಗೆ ಬಲವಂತವಾಗಿ ಲೈಂಕಿಕ ಕ್ರಿಯೆ ನಡೆಸಿದ್ದಾಳೆ.

ನಾನು  15 ವರ್ಷದವನಿದ್ದಾಗ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಮಲಗಿದ್ದಾಗ ಮೊದಲ ಬಾರಿ ಲೈಂಗಿಕ ದೌರ್ಜನ್ಯ ನಡೆಸಲಾಗಿತ್ತು. ನಂತರ ನಾವಿಬ್ಬರು ಮನೆಯಲ್ಲಿ ಏಕಾಂತದಲ್ಲಿದ್ದ ವೇಳೆ ನೂರಾರು ಬಾರಿ ನನ್ನೊಂದಿಗೆ ಸೆಕ್ಸ್‌ ಗಾಗಿ ಪೆಗ್ಗಿ ಹಾತೊರೆದು ನನ್ನ ಮೇಲೆರಗುತ್ತಿದ್ದರು ಎಂದು ದೌರ್ಜನ್ಯಕ್ಕೊಳಗಾದ ಇದೀಗ 22 ರ ಹರೆಯದಲ್ಲಿರುವ ಯುವಕ ಪೊಲೀಸರಿಗೆ ದೂರು ನೀಡಿದ್ದಾನೆ.

ಹೀನ ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ಪೆಗ್ಗಿಗೆ ಪತಿ ವಿಚ್ಛೇಧನ ನೀಡಿದ್ದಾನೆ.

ಯುವಕನ ದೂರಿನನ್ವಯ ಪೆಗ್ಗಿಯನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
-ಉದಯವಾಣಿ

Write A Comment