ಅಂತರಾಷ್ಟ್ರೀಯ

ನಿಮ್ಮ ಮಕ್ಕಳಿಗೆ ಏನು ತಿನಿಸುತ್ತಿದ್ದೀರಿ?: ಮಕ್ಕಳ ಊಟದ ಬಗ್ಗೆ ಸಲಹೆಗಳು

Pinterest LinkedIn Tumblr

child_refusing_eatಮಕ್ಕಳಿಗೆ ಸಮತೂಕದ ಆಹಾರವನ್ನು ನೀಡಬೇಕು. ಬೆಳೆಯುತ್ತಿರುವ ಮಕ್ಕಳಿಗೆ ವಿಟಮಿನ್, ಮಿನರಲ್ಸ್ ಹಾಗೂ ಇನ್ನಿತರ ಪೋಷಕಾಂಶಗಳಿರುವ ಆಹಾರಗಳನ್ನು ನೀಡಬೇಕು ಎಂದು ವೈದ್ಯರು ಟೀವಿಯಲ್ಲಿ  ಬಂದು ಹೇಳಿ, ಮಕ್ಕಳಿಗೆ ಹೆಲ್ತ್ ಡ್ರಿಂಕ್ಸ್ ಕುಡಿಸಿ ಎನ್ನುತ್ತಾರೆ. ಹೆಲ್ತ್ ಡ್ರಿಂಕ್ಸ್‌ನ ಕತೆ ಪಕ್ಕಕ್ಕಿಟ್ಟು ಯೋಚಿಸಿ. ಯಾವ ಆಹಾರದಲ್ಲಿ ವಿಟಾಮಿನ್ ಇದೆ? ಯಾವುದರಲ್ಲಿ ಕಬ್ಬಿಣದ ಅಂಶ ಇದೆ? ಮಕ್ಕಳಿಗೆ ಕೊಡುವ ಸಮತೂಕದ ಆಹಾರ ಎಂದರೆ ಯಾವುದು?

ಮಕ್ಕಳ ದೇಹ ಮತ್ತು ಬುದ್ಧಿಶಕ್ತಿ ಬೆಳವಣಿಗೆಗೆ ಸಮತೂಕದ ಆಹಾರವನ್ನೇ ನೀಡಬೇಕು. 10 ವರುಷದವರೆಗೆ ಮಗು ಹೆಣ್ಣಾಗಲೀ ಗಂಡಾಗಲೀ ಒಂದೇ ರೀತಿಯ ಆಹಾರಗಳನ್ನು ಕೊಟ್ಟರೆ ಸಾಕು. ಈ ಹೊತ್ತಿನಲ್ಲಿ ಕ್ಯಾಲ್ಶಿಯಂ ಹೆಚ್ಚು ಇರುವ ಆಹಾರಗಳನ್ನು ನೀಡುವುದೊಳಿತು. ಯಾಕೆಂದರೆ ಬೆಳವಣಿಗೆಯ ಈ ಹಂತದಲ್ಲಿ ಕ್ಯಾಲ್ಶಿಯಂ ಯುಕ್ತ ಆಹಾರಗಳನ್ನು ನೀಡಬೇಕು.

ಕಾಲ್ಶಿಯಂ ಯಾವುದರಲ್ಲಿದೆ?
ಹಸಿರೆಲೆ ತರಕಾರಿಗಳು, ಗಿಣ್ಣು, ಹಾಲು, ಮೊಸರು, ಕ್ಯಾಬೇಜ್, ಸೋಯಾ ಉತ್ಪನ್ನಗಳು, ಬೆಂಡೆಕಾಯಿ, ಬ್ರೊಕೊಲಿ, ಬೀನ್ಸ್, ಬಾದಾಮಿ, ಮೀನು, ಮಾಂಸ, ಮೊಟ್ಟೆ, ಸೇಬು, ಕಿತ್ತಳೆ, ಬಾಳೆಹಣ್ಣು, ಆಪ್ರಿಕೋಟ್, ಬೇಳೆಕಾಳು, ಕ್ಯಾರೆಟ್, ಟೊಮ್ಯಾಟೋ

ಬೆಳಗ್ಗಿನ ಉಪಹಾರ ತಪ್ಪಿಸಬೇಡಿ
ಮಕ್ಕಳ ಮೆದುಳಿನ ಬೆಳವಣಿಗೆಗೆ ಬೆಳಗ್ಗಿನ ಉಪಹಾರ ಸಹಾಯ ಮಾಡುತ್ತದೆ. ಬೆಳಗ್ಗಿನ ಉಪಹಾರವನ್ನು ಬ್ರೈನ್ ಫುಡ್ ಎಂದೇ ಹೇಳಲಾಗುತ್ತದೆ . ಮಕ್ಕಳ ಕಲಿಕೆಗೆ ಮತ್ತು ಏಕಾಗ್ರತೆ ಹೆಚ್ಚಿಸಲು ಬೆಳಗ್ಗಿನ ತಿಂಡಿ ಬೇಕೇ ಬೇಕು.

ಹಾಲು ಕುಡಿಸಿ
ಹಾಲು ಮತ್ತು ಅದರ ಉತ್ಪನ್ನಗಳನ್ನು ತಿನಿಸಿ. ದಿನಾ ಎರಡು ಗ್ಲಾಸ್ ಹಾಲು ಕುಡಿಯುವುದು ಒಳ್ಳೆಯದು. ಮಕ್ಕಳು ದಪ್ಪ ಆಗುತ್ತಾರೆ ಎಂದಾದರೆ ಕೆನೆ ತೆಗೆದು ಹಾಲು ಕೊಡಿ. ತುಪ್ಪ, ಬೆಣ್ಣೆ, ಮೊಸರಿಗಿಂತ ಮಜ್ಜಿಗೆ ಮಾಡಿ ಕೊಡಿ.

ಮಾಂಸಾಹಾರಿಯಾಗಿದ್ದರೆ..
ಒಂದು ಹೊತ್ತು ಮೀನು ಊಟ ತಿನಿಸಿ. ಕೋಳಿ ಮಾಂಸವಾಗಿದ್ದರೆ ವಾರದಲ್ಲಿ ಒಂದು ದಿನ ಸಾಕು.

ಹಣ್ಣು, ತರಕಾರಿಗಳು ಯಥೇಚ್ಛವಿರಲಿ
ದಿನಾ 100 ಗ್ರಾಂನಷ್ಟು ಹಣ್ಣು, 150 ಗ್ರಾಂಗಳಷ್ಟು ಹಸಿರೆಲೆ ತರಕಾರಿಗಳ ಸೇವನೆ ಕಡ್ಡಾಯವಾಗಿ ಇರಲಿ.

ಕುದಿಸಿ ತಣಿಸಿದ ನೀರು
ನೀರು ದೇಹದ ಆರೋಗ್ಯಕ್ಕೆ ಅತ್ಯಾವಶ್ಯಕ. ಕುದಿಸಿ ತಣಿಸಿದ ನೀರನ್ನೇ ಮಕ್ಕಳಿಗೆ ಕುಡಿಯಲು ಕೊಡಿ

ಫಾಸ್ಟ್ ಫುಡ್ ಬೇಡವೇ ಬೇಡ

ಪ್ಯಾಕೆಟ್‌ನಲ್ಲಿ ಬರುವ ತಿಂಡಿಗಳು, ಕೊಬ್ಬಿನಂಶವಿರುವ ವಸ್ತು, ಫಾಸ್ಟ್ ಫುಡ್, ಹೋಟೆಲ್‌ಗಳಿಂದ ತಿನ್ನುವ ಎಣ್ಣೆಯಲ್ಲಿ ಕರಿದ ಮಾಂಸಾಹಾರಗಳಿಂದ ಮಕ್ಕಳನ್ನು ದೂರವಿರಿಸಿ.

Write A Comment