ಮಧುಮೇಹ ರೋಗ ಎಂದೊಡನೆ ಭಯ. ಆ ಭಯವನ್ನು ನಿವಾರಿಸಲು ಸತತ ವ್ಯಾಯಾಮ ಮತ್ತು ನಮ್ಮ ಆಹಾರ ಪದ್ಧತಿಯಲ್ಲಿ ಕೆಲವೊಂದು ಬದಲಾವಣೆಗಳಾಗಬೇಕು. ಇದು ಅಕ್ಷರಶಃ ನಿಜ. ಮಧುಮೇಹಿಗಳು ಧೂಮಪಾನದಿಂದ ದೂರವಿರಬೇಕು ಎಂಬ ಬಗ್ಗೆ ಈಗಾಗಲೇ ಅನೇಕರು ಸಂಶೋಧನೆಗಳಿಂದ ತಿಳಿಸಿಕೊಟ್ಟಿದ್ದಾರೆ. ಧೂಮಪಾನದಿಂದ ಬ್ಲಡ್ಶುಗರ್ ಜಾಸ್ತಿಯಾಗುತ್ತದಲ್ಲದೆ ಇದರಿಂದ ಹೃದಯ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆಗಳಿವೆ. ಮೇಲಾಗಿ ಇದು ಕಿಡ್ನಿ ವೈಫಲ್ಯಕ್ಕೂ ಕಾರಣವೆಂದರೆ ತಪ್ಪಾಗಲಾರದು. ನರಗಳೂ ಸಹ ದುರ್ಬಲಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ದೇಶದಲ್ಲಿನ ಶೇ.20ರಷ್ಟು ಸಾವುಗಳು ಹೃದಯ ಸಂಬಂಧಿ ಕಾಯಿಲೆಗಳಿಂದಲೆ ಬರುತ್ತವೆ. ಇದರಲ್ಲಿ ಸಂಶಯವೇ ಇಲ್ಲ. ಅದರಲ್ಲೂ ಮಧುಮೇಹಿ ರೋಗಿಗಳಿದ್ದರೆ ಮುಗಿಯಿತು.
ನಿರಂತರ ಸಿಗರೇಟು-ಬೀಡಿ ಸೇದುವುದರಿಂದ ರಕ್ತ ನಾಳಗಳು ಹಾಳಾಗುತ್ತವೆ. ಅವು ಬ್ಲಾಕ್ಆಗಿ ಉಸಿರಾಟ ತೊಂದರೆಯಾಗುವ ಎಲ್ಲಾ ಲಕ್ಷಣಗಳು ಕಾಣಸಿಗುತ್ತವೆ. ದೇಹದಲ್ಲಿನ ಕೊಬ್ಬಿನಾಂಶವು ವೃದ್ಧಿಯಾಗುತ್ತದೆ. ಇದರಿಂದ ರಕ್ತದೊತ್ತಡ ಜಾಸ್ತಿಯಾಗಿ ಪ್ರಾಣಕ್ಕೂ ಅಪಾಯತಂದೊಡ್ಡಲಿದೆ. ಸಿಗರೇಟು -ಬೀಡಿ ಸೇವನೆ ಚಟವನ್ನು ಬಿಡುವುದು ಸುಲಭವಲ್ಲ. ಒಮ್ಮೆ ಅಂಟಿಕೊಂಡ ಚಟವನ್ನು ಸಲಭವಾಗಿ ಬಿಡುವುದು ಯಾರಿಂದಲೂ ಸಾಧ್ಯವಿಲ್ಲ. ಆದರೆ ನಮ್ಮ ಆರೋಗ್ಯದ ದೃಷ್ಟಿಯಿಂದ ಕೆಲವು ಸಲ ತ್ಯಾಗ ಮಾಡಬೇಕಾಗುತ್ತದೆ. ಅದರಿಂದ ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಸಿಗರೇಟ್ ಚಟ ಬಿಟ್ಟವರು ಇಂದು ಯಾವುದೇ ರೋಗಗಳಿಲ್ಲದೆ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಈ ಚಟ ಬಿಡುವುದಾದರೆ ಕೌಟುಂಬಿಕ ವೈದ್ಯರ ಬಳಿ ತೆರಳಿ ಸಲಹೆ ಪಡೆಯಿರಿ. ಈ ಬಗ್ಗೆ ನಿಮ್ಮ ಆತ್ಮೀಯ ಗೆಳೆಯರು ಹಾಗೂ ನೆಚ್ಚಿನವರೊಂದಿಗೆ ಒಂದು ಬಾರಿ ಚರ್ಚೆಮಾಡಿ ನಿರ್ಧಾರ ತೆಗೆದುಕೊಳ್ಳಿ.
ನೀವು ಯಾವಾಗಲು ಒಂದಲ್ಲಾ ಒಂದು ಕೆಲಸದಲ್ಲಿ ತೊಡಗಿಕೊಳ್ಳಿ. ಇಲ್ಲವಾದರೆ ಸೋಮಾರಿಗಳಾಗುತ್ತೀರಿ. ಸೋಮಾರಿಗಳಾದರೆ ಚಟಗಳು ಅಂಟಿಕೊಳ್ಳುತ್ತವೆ. ಬೇಜಾರು ಎನಿಸಿದರೆ ಏಕಾಂತವಾಗಿ ವಾಯುವಿಹಾರ ಮಾಡಿ. ಯಾರು ಇಲ್ಲದ ಸ್ಥಳಕ್ಕೆ ತೆರಳಿ ಒಂದು ಬಾರಿ ಯೋಚಿಸಿ. ಆಗ ನೀವು ತೆಗೆದುಕೊಂಡ ನಿರ್ಧಾರ ಸರಿ ಎನಿಸುತ್ತದೆ. ಇದು ಸತ್ಯದ ಸಂಗತಿ. ಯಾವಾಗಲಾದರು ಒಂದು ದಮ್ಮು ಎಳೆಯಬೇಕು ಎನಿಸಿದಾಗ ನಾನು ಚಟವನ್ನು ಬಿಟ್ಟಿರುವುದು ನನ್ನ ಒಳ್ಳೆಯದಕೋಸ್ಕರ ಎಂಬ ಚಿಂತನೆ ಮಾಡಿ. ಇನ್ನೊಂದು ಮಾತನ್ನು ಹೇಳಲೇಬೇಕಾಗಿದೆ. ಸಿಗರೇಟು ಕುಡಿಯುವುದು ಯಾವಾಗಲು ಒಳ್ಳೆಯದಲ್ಲ. ಅದು ನಮ್ಮನ್ನು ಹಾಳು ಮಾಡುತ್ತದೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಉತ್ತಮ ಸಲಹೆ ಎಂದರೆ ಡಯಾಬಿಟೀಸ್ ಇದ್ದವರು ಸಿಗರೇಟ್ ಸೇದುವುದನ್ನು ಬಿಡುವುದೇ ಉತ್ತಮ.
ಇನ್ನೊಂದು ಆಘಾತಕಾರಿ ಅಂಶವೇನೆಂದರೆ ಪ್ರತಿವರ್ಷ ತಂಬಾಕು ಸೇವನೆಯಿಂದ ಸುಮಾರು ಆರು ಲಕ್ಷ ಮಿಲಿಯನ್ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂಬ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್ಒ) ಸ್ಪಷ್ಟಪಡಿಸಿದೆ.ಸಿಗರೇಟ್ ಸೇವನೆ ದೇಹಕ್ಕೆ ಅಪಾಯ. ಇದರಿಂದ ದೇಹದ ಪ್ರತಿಯೊಂದು ಅಂಗವು ದುರ್ಬಲಗೊಳ್ಳುತ್ತದೆ. ತಂಬಾಕಿನಲ್ಲಿರುವ ನಿಕೋಟಿನ್ ಅಂಶವು ಬ್ಲಡ್ ಪ್ರಶರ್ ಮಟ್ಟವನ್ನು ಜಾಸ್ತಿ ಮಾಡುತ್ತದೆ. ಇದರಿಂದ ಹೃದಯಾಘಾತ, ಪಾಶ್ರ್ವವಾಯು, ಕಿಡ್ನಿ ವೈಫಲ್ಯದಂತಹ ರೋಗಕ್ಕೆ ತುತ್ತಾಗ ಬೇಕಾಗುತ್ತದೆ. ಡಯಾ ಬಿಟಿಸ್ ಇದ್ದವರು ಸಿಗರೇಟ್ ಸೇದು ವುದು ಹಾಗೂ ತಂಬಾಕು ಸೇವನೆಯಿಂದ ದೂರವಿದ್ದಷ್ಟು ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ.