ಅಂತರಾಷ್ಟ್ರೀಯ

ಮಗಳ ಹೆಸರಲ್ಲಿ 99% ಷೇರು ದಾನ; ಫೇಸ್ಬುಕ್ ಸಿ ಇ ಒ ಮಾರ್ಕ್ ಝುಕರ್‌ಬರ್ಗ್‌ ದಂಪತಿ ನಿರ್ಧಾರ

Pinterest LinkedIn Tumblr

FB-dampati

ವಾಷಿಂಗ್ಟನ್‌: ಫೇಸ್‌ಬುಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರ್ಕ್ ಝುಕರ್‌ಬರ್ಗ್‌ ಮತ್ತವರ ಪತ್ನಿ ಪ್ರಿಸಿಲಾ ಚಾನ್‌ ಅವರು ಫೇಸ್‌ಬುಕ್‌ ಕಂಪೆನಿಯ‌ಲ್ಲಿನ ತಮ್ಮ ಶೇಕಡಾ 99ರಷ್ಟು ಷೇರುಗಳನ್ನು ದಾನ ಮಾಡಲು ಮುಂದಾಗಿದ್ದಾರೆ.

ಹೆಣ್ಣುಮಗುವಿನ ತಂದೆ ತಾಯಿಗಳಾದ ಸಂಭ್ರಮದಲ್ಲಿರುವ ಝುಕರ್‌ಬರ್ಗ್‌ ದಂಪತಿ ಫೇಸ್‌ಬುಕ್‌ ಕಂಪೆನಿಯಲ್ಲಿ ತಮಗೆ ಸೇರಿದ ಒಟ್ಟು ಷೇರುಗಳ ಪೈಕಿ ಶೇಕಡಾ 99 ಷೇರುಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ.

ಈ ಮೂಲಕ ಫೇಸ್‌ಬುಕ್‌ ಕಂಪೆನಿಯಲ್ಲಿ ತಾವು ಹೊಂದಿರುವ ಒಟ್ಟು ಷೇರಿನ ಮೊತ್ತದಲ್ಲಿ 45 ಶತಕೋಟಿ ಅಮೆರಿಕನ್‌ ಡಾಲರ್‌ ದಾನ ಮಾಡಲು ದಂಪತಿ ಮುಂದಾಗಿದ್ದಾರೆ.

‘ಜಗತ್ತಿನ ಎಲ್ಲ ಬಡಮಕ್ಕಳಿಗೆ ನೆರವಾಗುವ ಉದ್ದೇಶದಿಂದ ಷೇರುಗಳನ್ನು ದಾನ ಮಾಡುತ್ತಿದ್ದೇವೆ. ಮ್ಯಾಕ್ಸ್‌ (ಮಗಳು) ಹುಟ್ಟಿದ ಖುಷಿಯಲ್ಲಿ ನಾವು ಈ ನಿರ್ಧಾರಕ್ಕ ಬಂದಿದ್ದೇವೆ’ ಎಂದು ಝುಕರ್‌ಬರ್ಗ್‌ ತಮ್ಮ ಫೇಸ್‌ಬುಕ್‌ ಪುಟದಲ್ಲಿ ಬರೆದುಕೊಂಡಿದ್ದಾರೆ.

Write A Comment