ಅಂತರಾಷ್ಟ್ರೀಯ

ಎಫ್’ಡಿಐ ಎಂದರೆ ‘ಫಸ್ಟ್ ಡೆವಲಪ್ ಇಂಡಿಯಾ’: ಪ್ರಧಾನಿ ಮೋದಿ

Pinterest LinkedIn Tumblr

8modiಸಿಂಗಾಪುರ: ಎಫ್ ಡಿಐ ಎಂದರೆ ಫಾರಿನ್ ಡೈರೆಕ್ಟ್ ಇನ್ವೆಸ್ಟ್ ಮೆಂಟ್. ಜಗತ್ತಿಗೆ ಎಫ್ ಡಿಐ ಎಂದರೆ ಫಾರಿನ್ ಡೈರೆಕ್ಟ್ ಇನ್ವೆಸ್ಟ್ ಮೆಂಟ್ ಎಂದರ್ಥ. ಆದರೆ ನನಗೆ ಎಫ್ ಡಿಐ ಎಂದರೆ ಫಸ್ಟ್ ಡೆವಲಪ್ ಇಂಡಿಯಾ ಎಂದರ್ಥ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಹೇಳಿದ್ದಾರೆ.

ತಮ್ಮ ಎರಡುದಿನಗಳ ಸಿಂಗಾಪುರ ಪ್ರವಾಸದ ಎರಡನೇ ದಿನವಾದ ಇಂದು ಸಿಂಗಾಪುರದಲ್ಲಿರುವ ಭಾರತೀಯ ಸಮುದಾಯವನ್ನುದ್ದೇಶಿಸಿ ಎಕ್ಸ್ ಪೋ ಸೆಂಟರ್ ನಲ್ಲಿ ಮಾತನಾಡಿರುವ ಅವರು, 5 ಸಾವಿರ ಭಾರತೀಯರನ್ನುದ್ದೇಶಿಸಿ ಮಾತನಾಡಿದ್ದಾರೆ. ಭಾರತೀಯ ಸಂಸ್ಕೃತಿಯ ಪ್ರಕಾರ ನೆರೆದಿದ್ದವರಿಗೆಲ್ಲರಿಗೂ ನಮಸ್ಕಾರ, ವಡ್ಡಕಮ್ ಎಂದು ಹೇಳಿದರು. ನಂತರ ತಮ್ಮ ಭಾಷಣ ಆರಂಭಿಸಿದ ಅವರು, ಈ ಹಿಂದೆಯೂ ನಾನು ಸಿಂಗಾಪುರಕ್ಕೆ ಬಂದಿದ್ದೆ. ಆದರೆ ಇಂದು ಇಲ್ಲಿನ ವಾತಾವರಣ ಬದಲಾದಂತಿದೆ. ಸಿಂಗಾಪುರದಲ್ಲಿ ಈ ರೀತಿಯ ವಾತಾವರಣವಿದೆ ಎಂಬುದನ್ನು ಭಾರತದಲ್ಲಿರುವ ಯಾರೊಬ್ಬರು ಊಹಿಸಲೂ ಸಾಧ್ಯವಿಲ್ಲ. ಸಿಂಗಾಪುರದ ಜನತೆಗೆ ಹೃದಯ ಪೂರ್ವಕವಾಗಿ ವಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಭಾರತವೊಂದು ಅತ್ಯಂತ ದೊಡ್ಡ ರಾಷ್ಟ್ರ ಹಾಗೂ ಶಕ್ತಿಶಾಲಿ ದೇಶ. ನಮ್ಮ ದೇಶದಲ್ಲಿ 1.2 ಬಿಲಿಯನ್ ರಷ್ಟು ಜನರಿದ್ದಾರೆ. ಆದರೂ, ಭಾರತ ಸಿಂಗಾಪುರದಿಂದ ಕಲಿಯುವಂತಹದ್ದು ಸಾಕಷ್ಟಿದೆ. ಹಲವು ವರ್ಷದಿಂದ ಭಾರತೀಯರ ವಿದೇಶದಲ್ಲಿ ನೆಲೆಯೂರಿದ್ದಾರೆ. ವಿದೇಶದಲ್ಲಿರುವ ಭಾರತೀಯರು ಶಾಂತಿ ಹಾಗೂ ಪ್ರೀತಿಯಿಂದ ಜೀವನ ನಡೆಸುತ್ತಿದ್ದಾರೆ. ಇದು ಹಲವು ವರ್ಷಗಳಿಂದಲೂ ನಡೆದುಕೊಂಡು ಬಂದಿದೆ.

ಇಲ್ಲಿನ ದೇಶದೊಂದಿಗೆ ಹಾಲಿನಲ್ಲಿರುವ ಸಕ್ಕರೆಯಂತೆ ಬರೆತಿದ್ದೀರಿ. ಭಾರತ ದೊಡ್ಡ ಹಾಗೂ ಶಕ್ತಿಶಾಲಿಯುತ ರಾಷ್ಟ್ರವಾಗಿದ್ದರೂ ಇಂದಿಗೂ ಸಿಂಗಾಪುರದಿಂದ ಕಲಿಯುವಂತಹದ್ದು ಸಾಕಷ್ಟಿದೆ. ಪ್ರೀತಿ ಹಾಗೂ ನಮ್ಮತನ ಎಂಬುದು ಭಾರತೀಯರ ಮೂಲ ಮಂತ್ರವಾಗಿದೆ. ಸಿಂಗಾಪುರ ಅಭಿವೃದ್ಧಿಗೆ ಭಾರತೀಯರ ಶ್ರಮ ಅಪಾರವಾದದ್ದು. ವಿದೇಶದಲ್ಲಿರುವ ಭಾರತೀಯರಿಂದ ದೇಶದ ಮೇಲಿರುವ ನಂಬಿಕೆ ಹೆಚ್ಚಿದೆ ಎಂದು ಹೇಳಿದ್ದಾರೆ.

ಇಂದು ಇಡೀ ಜಗತ್ತು ಭಾರತವನ್ನು ನೋಡುತ್ತಿರುವ ದೃಷ್ಠಿ ಬದಲಾಗಿದೆ. ಇದಕ್ಕೆ ಪ್ರಮುಖ ಕಾರಣ ವಿದೇಶದಲ್ಲಿ ನೆಲೆಸಿರುವ ಭಾರತೀಯರು. ನೀವು ನಿಮ್ಮ ಕನಸ್ಸನ್ನು ನನಸು ಮಾಡಿಕೊಳ್ಳಬೇಕೆಂದರೆ ಬದ್ಧತೆ ಹಾಗೂ ಸಮರ್ಪಣಾ ಭಾವವನ್ನು ಮೂಡಿಸಿಕೊಳ್ಳಬೇಕು. ಸಮರ್ಪಣಾ ಭಾವವೊಂದಿದ್ದರೆ ಸಾಕು ಯಶಸ್ಸೆಂಬುದು ನಿಮ್ಮ ಪಾದಗಳನ್ನು ಚುಂಬಿಸುತ್ತದೆ.

ನಾವು ಶತಮಾನಗಳಲ್ಲಿ ಬದುಕುತ್ತಿದ್ದೇವೆ. ಆದರೆ, ನಾವು ಪಡೆದದ್ದನ್ನು ಮತ್ತೊಬ್ಬರಿಗೆ ಕೊಡಲು ಬಯಸುವುದಿಲ್ಲ. ರೈಲಿನಲ್ಲಿ ಒಂದು ಸೀಟ್ ಹೆಚ್ಚಾಗಿ ದೊರಕಿದ್ದರೂ ಸಹ ಅದನ್ನು ಮತ್ತೊಬ್ಬರಿಗೆ ಬಿಟ್ಟುಕೊಡುವುದಿಲ್ಲ. ಆದರೆ, ಭಾರತದಲ್ಲಿರುವ ಶ್ರೀಮಂತ ಕುಟುಂಬಗಳು ಗ್ಯಾಸ್ ಸಿಲಿಂಡರ್ ಗಳಿಗೆ ನೀಡಿದ್ದ ಸಬ್ಸಿಡಿಗಳನ್ನು ಬಡಜನರಿಗಾಗಿ ಸರ್ಕಾರಕ್ಕೆ ಹಿಂತಿರುಗಿಸಿದ್ದಾರೆ. ಭಾರತದಲ್ಲಿ ಸುಮಾರು 40 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಗ್ಯಾಸ್ ಸಿಲಿಂಡರ್ ಸಬ್ಸಿಡಿಗಳನ್ನು ಸರ್ಕಾರಕ್ಕೆ ಹಿಂತಿರುಗಿಸಿದ್ದಾರೆ. ಇದು ನಿಜಕ್ಕೂ ಹೆಮ್ಮೆಯ ಸಂಗತಿ.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ 18 ತಿಂಗಳುಗಳಲ್ಲಿ ಪಾರದರ್ಶಕ ಸರ್ಕಾರವನ್ನು ಪ್ರದರ್ಶಿಸಿದೆ. ಸರ್ಕಾರ ತೆಗೆದುಕೊಂಡ ನಿರ್ಧಾರದಲ್ಲಿ ಯಾವುದೇ ಪ್ರಶ್ನೆಗಳು ಎದ್ದಿಲ್ಲ. ಎಫ್ ಡಿಐ ಎಂದರೆ ಫಾರಿನ್ ಡೈರೆಕ್ಟ್ ಇನ್ವೆಸ್ಟ್’ಮೆಂಟ್. ಜಗತ್ತಿಗೆ ಫಾರಿನ್ ಡೈರೆಕ್ಟ್ ಇನ್ವೆಸ್ಟ್ ಮೆಂಟ್ ಆದರೆ, ನನಗೆ ಫಸ್ಟ್ ಡೆವಲಪ್ ಇಂಡಿಯಾ ಎಂದರ್ಥ. ಇದೀಗ ದೇಶದ ಎಫ್ ಡಿಐ ನಲ್ಲಿ ಶೇ.40 ರಷ್ಟು ಹೆಚ್ಚಳವಾಗಿದೆ. ರೈಲ್ವೆ ಕ್ಷೇತ್ರದಲ್ಲಿ ಎಫ್ ಡಿಐಗೆ ಶೇ.100 ಅನುಮತಿ ನೀಡಲಾಗಿದೆ. ರೈಲ್ವೆ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತಿದೆ.

2022ರ ವೇಳೆಗೆ ದೇಶದಲ್ಲಿರುವ ಎಲ್ಲರಿಗೂ 24 ಗಂಟೆಗಳ ಕಾಲ ವಿದ್ಯುತ್ ನೀಡಲಾಗುತ್ತದೆ. ದೇಶದ ಅಭಿವೃದ್ಧಿಯಲ್ಲಿ ಯುವಕ ಶಕ್ತಿ ಅಪಾರವಾದದು. ಅಂತಹ ಶಕ್ತಿಯನ್ನು ಬಳಕೆ ಮಾಡಿಕೊಳ್ಳಬೇಕಿದೆ. ವಿವೇಕಾನಂದರ ಕನಸ್ಸನ್ನು ನನಸು ಮಾಡುತ್ತೇನೆ.

ನಮಗೆ ಸ್ವಾತಂತ್ರ್ಯ ಬಂದು 70 ವರ್ಷಗಳಾಗಿವೆ. ಆದರೂ ವಿದೇಶದಿಂದ ಎಲ್ಲವನ್ನೂ ಏಕೆ ಆಮದು ಮಾಡಿಕೊಳ್ಳಬೇಕು. ನಮಗೆ ವಿದೇಶದಿಂದ ಹಣ ಹಾಗೂ ತಾಂತ್ರಿಕತೆಯ ಅವಶ್ಯಕತೆಯಿದೆ.

ಸ್ವಾತಂತ್ರ್ಯ, ಸ್ವಚ್ಛತೆ ಎಂಬ ಎರಡು ವಿಷಯದಲ್ಲಿ ಯಾವ ಆಯ್ಕೆಯನ್ನು ಆಯ್ದುಕೊಳ್ಳುತ್ತೀರಿ ಎಂಬ ಪ್ರಶ್ನೆಗೆ ಸ್ವತಃ ಮಹಾತ್ಮ ಗಾಂಧಿಯವರೇ ಸ್ವಚ್ಛತೆ ಎಂಬ ಆಯ್ಕೆಯನ್ನು ಆಯ್ದುಕೊಂಡಿದ್ದರು. ಸರ್ಕಾರ ದೇಶವನ್ನು ರಚಿಸುವುದಿಲ್ಲ. ಜನರೇ ದೇಶವನ್ನು ರಚಿಸುತ್ತಾರೆ. ಅದ್ಭುತಗಳೆಂಬುದು ಪ್ರಪಂಚದಲ್ಲಿ ಏನಿದೆಯೋ ಅದು ಭಾರತದಲ್ಲೂ ಇದೆ. ಇಂದು ಭಾರತ ಏನೇ ಇದ್ದರೂ ಪ್ರಪಂಚದಲ್ಲಿ ಒಂದು ಭಾಗವಾಗಿದೆ ಎಂದು ಹೇಳಿದ್ದಾರೆ.

Write A Comment