ರಾಷ್ಟ್ರೀಯ

ಭಾರತೀಯರು ಹೋರಾಟಕ್ಕೆ ಅಸಮರ್ಥರು ಎಂದ ಐಎಸ್

Pinterest LinkedIn Tumblr

7isis_fightನವದೆಹಲಿ: “ಭಾರತೀಯರು ಸೇರಿದಂತೆ ದಕ್ಷಿಣ ಏಷ್ಯಾದ ಮುಸ್ಲಿಮರು ಇರಾಕ್ ಮತ್ತು ಸಿರಿಯಾದಂತಹ ಸಂಘರ್ಷಪೀಡಿತ ಪ್ರದೇಶಗಳಲ್ಲಿ ಹೋರಾಡಲು ಅಸಮರ್ಥರು ಎಂದು ಐಎಸ್ ಉಗ್ರ ಸಂಘಟನೆ ಪರಿಗಣಿಸಿದೆ. ಅಲ್ಲದೆ, ಅರಬ್ ಹೋರಾಟಗಾರರಿಗೆ ಹೋಲಿಸಿದರೆ ದಕ್ಷಿಣ ಏಷ್ಯಾದವರು ತುಂಬಾ ಕೆಳದರ್ಜೆಯವರು ಎಂದು ಹೇಳಿರುವ ಐಎಸ್, ಇವರನ್ನು ಸುಲಭವಾಗಿ ಮರುಳುಗೊಳಿಸಿ, ಆತ್ಮಾಹುತಿ ದಾಳಿಗೆ ಬಳಸಲಾಗುತ್ತಿದೆ” ಎಂದಿದೆ.ವಿದೇಶಿ ಏಜೆನ್ಸಿಗಳು ಸಿದ್ಧಪಡಿಸಿದ ಗುಪ್ತಚರ ವರದಿಯೊಂದು ಈ ವಿಚಾರವನ್ನು ಬಹಿರಂಗಪಡಿಸಿದೆ. ಜತೆಗೆ, ಈ ವರದಿಯನ್ನು ಭಾರತದ ಭದ್ರತಾ ಸಂಸ್ಥೆಗಳಿಗೆ ಒದಗಿಸಲಾಗಿದೆ. ಭಾರತ, ಪಾಕಿಸ್ತಾನ, ಬಾಂಗ್ಲಾ, ನೈಜೀರಿಯಾ  ಹಾಗೂ ಸುಡಾನ್‍ನಿಂದ ಹೋದವರನ್ನು ಐಎಸ್ ಕೀಳಾಗಿ ಕಾಣುತ್ತಿದೆ. ಉಗ್ರ ಸಂಘಟನೆಯಲ್ಲಿ ಶ್ರೇಣಿ ವ್ಯವಸ್ಥೆ ಗಾಢವಾಗಿದೆ. ಅರಬ್ ಉಗ್ರರಿಗೆ

ಅಧಿಕಾರಿ ವರ್ಗದಂತಹ ಉನ್ನತ ಹುದ್ದೆ  ನೀಡಲಾಗುತ್ತಿದೆ. ಜತೆಗೆ, ಅವರಿಗೆ ಅತ್ಯುತ್ತಮ ಶಸ್ತ್ರಾಸ್ತ್ರಗಳು, ಸಲಕರಣೆಗಳು, ವಸತಿ ವ್ಯವಸ್ಥೆ ಮತ್ತು ವೇತನ ನೀಡಲಾಗುತ್ತಿದೆ. ಆದರೆ, ದಕ್ಷಿಣ ಏಷ್ಯಾದವರಿಗೆ ಕಳಪೆ ಶಸ್ತ್ರಾಸ್ತ್ರಗಳನ್ನು ಒದಗಿಸಿ, ಕಡಿಮೆ ವೇತನ ನೀಡಲಾಗುತ್ತದೆ. ಅಲ್ಲದೆ, ಇಂಥವರನ್ನು ಹೆಚ್ಚಾಗಿ ಆತ್ಮಾಹುತಿ ದಾಳಿಗಳಿಗೆ ಬಳಸಲಾಗುತ್ತದೆ. ಸ್ಫೋಟಕ ತುಂಬಿದ ವಾಹನದಲ್ಲಿ ಇವರನ್ನು ಕಳುಹಿಸಿ, ತಾವು ಹೇಳಿದಪ್ರದೇಶ ತಲುಪಿದ ಬಳಿಕ ಇಂಥ ಸಂಖ್ಯೆಗೆ ಕರೆ ಮಾಡಿ ಎಂದು ಸೂಚಿಸಲಾಗುತ್ತದೆ. ಅವರುಅಲ್ಲಿ ತಲುಪಿ, ದೂರವಾಣಿಯಲ್ಲಿ ಆ ಸಂಖ್ಯೆ ಒತ್ತಿದೊಡನೆ ವಾಹನ ಸ್ಫೋಟಗೊಳ್ಳುತ್ತದೆ ನ ಎಂದೂ ವರದಿಯಲ್ಲಿ ಹೇಳಲಾಗಿದೆ.  ಬೆಂಗಳೂರಿನ ಮೊಹಮ್ಮದ್ ಉಮರ್ ಸುಭಾನ್, ಫೈಜ್ ಮಸೂದ್, ಭಟ್ಕಳದ ಮೌಲಾ ನಾ ಅಬ್ದುಲ್ ಖಾದಿರ್ ಸುಲ್ತಾನ್ ಅಮ್ರಾರ್
ಸೇರಿ ಒಟ್ಟು 23 ಭಾರತೀಯರು ಐಎಸ್‍ಸೇರಿದ್ದಾರೆ. ಈ ಪೈಕಿ 6 ಮಂದಿ ಮೃತಪಟ್ಟದ್ದಾರೆ.

Write A Comment