ರಾಷ್ಟ್ರೀಯ

ಪ್ರಧಾನಿ ಮೋದಿಯನ್ನು ವಿರೋಧಿಸುವವರೆಲ್ಲಾ ದೇಶದ್ರೋಹಿಗಳೇ?: ರಾಹುಲ್ ಗಾಂಧಿ

Pinterest LinkedIn Tumblr

6rahulನವದೆಹಲಿ: ಬಾಲಿವುಡ್ ಖ್ಯಾತ ನಟ ಅಮೀರ್ ಖಾನ್ ಅಸಹಿಷ್ಣುತೆ ಬಗ್ಗೆ ನೀಡಿರುವ ಹೇಳಿಕೆ ವಿಪಕ್ಷವಾದ ಕಾಂಗ್ರೆಸ್‌ಗೆ ಪ್ರಧಾನಿ ಮೋದಿ ವಿರುದ್ಧ ಬಳಸಲು ಹೊಸ ಅಸ್ತ್ರ ದೊರೆತಂತಾಗಿದೆ.

ಪ್ರಧಾನಿ ಮೋದಿಯನ್ನು ವಿರೋಧಿಸುವವರೆಲ್ಲರು ದೇಶ ವಿರೋಧಿಗಳು, ದೇಶದ್ರೋಹಿಗಳು ಮತ್ತು ಪ್ರಚೋದನೆಗೊಳಗಾದವರು ಎಂದು ಸರಕಾರ ಬಿಂಬಿಸುತ್ತಿದೆ  ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಕೇಂದ್ರ ಸರಕಾರ ಅಥವಾ ಪ್ರಧಾನಿಯನ್ನು ವಿರೋಧಿಸುವವರನ್ನು ಟೀಕಿಸುವ ಬದಲು ಯಾವ ಕಾರಣಕ್ಕಾಗಿ ಟೀಕಿಸಲಾಗುತ್ತಿದೆ ಎನ್ನುವುದು ಅರಿತು ಕೇಂದ್ರ ಸರಕಾರ ಸೂಕ್ತ ಕ್ರಮಕೈಗೊಂಡಲ್ಲಿ ಉತ್ತರ ನೀಡಿದಂತಾಗುತ್ತದೆ ಎಂದು ಸಲಹೆ ನೀಡಿದ್ದಾರೆ.

ಬಾಲಿವುಡ್ ನಟ ಅಮೀರ್ ಖಾನ್ ಹೇಳಿಕೆಯಲ್ಲಿ ಯಾವುದೇ ರಾಜಕೀಯವಿಲ್ಲ. ಸಾರ್ವಜನಿಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ವ್ಯಕ್ತಿಯ ಅನಿಸಿಕೆಗಳಿಗೆ ಸರಕಾರ ಸ್ಪಂದಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಾಲಿವುಡ್ ನಟ ಅಮೀರ್ ಖಾನ್ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದು, ಅಮೀರ್ ಅವರ ಅಸಹಿಷ್ಣುತೆ ಹೇಳಿಕೆಯಿಂದ ದೇಶದ ಜನತೆಯ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಕಿಡಿಕಾರಿದ್ದಾರೆ.

Write A Comment