ಅಂತರಾಷ್ಟ್ರೀಯ

ಗರ್ಭಿಣಿಯರು ಕಾಫಿ ಕುಡಿದರೆ ಹುಟ್ಟುವ ಮಗುವಿಗೆ ತೊಂದರೆಯಿಲ್ಲ .

Pinterest LinkedIn Tumblr

garbiniವಾಷಿಂಗ್ಟ್‌ನ್,ನ.22- ಗರ್ಭಿಣಿ ಮಹಿಳೆಯರು ಕಾಫಿ ಸೇವನೆ ಮಾಡುವುದರಿಂದ ಅದರಲ್ಲಿನ ವಿಷ (ಕೆಫೀನ್) ಹುಟ್ಟುವ ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದು ಸರಿಯಲ್ಲ. ಕಾಫಿ ಸೇವನೆ ಗರ್ಭಿಣಿ ಮಹಿಳೆಯರಿಗೆ ಮಾರಕವಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ.  ಸಾಮಾನ್ಯವಾಗಿ ಗರ್ಭಿಣಿಯರು ಕಾಫಿ ಸೇವನೆ ಮಾಡುವುದರಿಂದ ಅದು ಗರ್ಭದಲ್ಲಿನ ಮಗುವಿನ ಮೇಲೆ ಪರಿಣಾಮ ಬೀರಿ ಆ ಮಗುವಿನ ಐಕ್ಯೂಗೆ ಹಾನಿಯಾಗುತ್ತದೆ ಎಂಬ ನಂಬಿಕೆ ಸುಳ್ಳು.

ಗರ್ಭಿಣಿಯರು ಕಲವು ಸಂಪ್ರದಾಯಗಳು, ಮೂಢನಂಬಿಕೆಗಳಿಂದ ಆತಂಕಕ್ಕೊಳ ಗಾಗು ವುದರಿಂದಾಗಿ ಅದು ಮಗುವಿನ ಮೇಲೆ ಪರಿಣಾಮವಾಗುತ್ತದೆಯೇ  ಹೊರತು ದಿನಕ್ಕೆ 2ರಿಂದ 3ಲೋಟ ಕಾಫಿ ಸೇವನೆಯಿಂದ ಯಾವ ಕೆಟ್ಟ ಪರಿಣಾಮವೂ ಆಗದು ಎಂದು ವಾಷಿಂಗ್ಟ್‌ನ್ ಹಲ್ತ್ ಜರ್ನಲ್‌ನ ವರದಿ ತಿಳಿಸಿದೆ.  ಅಮೇರಿಕದಾದ್ಯಂತ 2,197 ಮಂದಿ ಗರ್ಭಿಣಿ ಮಹಿಳೆಯರು ಹಾಗೂ ಕಾಫೀ ಸೇವಿಸಿದ ತಾಯಂದಿರ ಶಿಶುಗಳ ಸಮೀಕ್ಷೆ ನಡೆಸಿದ  ಸಂಸ್ಥೆ ಈ ಅಂಶವನ್ನು ಸ್ಪಷ್ಟಪಡಿಸಿದೆ.  ಇನ್ನೂ ಹೆಚ್ಚಿನ
ವಿಷಯವೆಂದರೆ ಮಿತವಾದ ಕಾಫಿ ಸೇವನೆಯಿಂದ ಗರ್ಭಿಣಿಯರು ಮತ್ತು ಹುಟ್ಟು ಮಕ್ಕಳಿಗೆ ತೊಂದರೆಯಾಗುವ ಬದಲು ಅವರ ಆರೋಗ್ಯದಲ್ಲೂ ಮತ್ತಷ್ಟೂ ಸುಧಾರಣೆ ಕಂಡುಬರಲಿದೆ ಎಂದು ವರದಿ ತಿಳಿಸಿದೆ.

Write A Comment