ರಾಷ್ಟ್ರೀಯ

ಅಸಹಿಷ್ಣುತೆಗೆ ಪ್ರತಿಭಟನೆ: ಕವಿ ಮಹಾಪಾತ್ರರಿಂದ ಪದ್ಮಶ್ರೀ ವಾಪಸ್

Pinterest LinkedIn Tumblr

JayantaMahapatra1ಭುವನೇಶ್ವರ, ನ.22: ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿರುವುದನ್ನು ಪ್ರತಿಭಟಿಸಿ ಖ್ಯಾತ ಕವಿ ಡಾ.ಜಯಂತ್ ಮಹಾಪಾತ್ರ ಅವರು ತನ್ನ ಪದ್ಮಶ್ರೀ ಪ್ರಶಸ್ತಿಯನ್ನು ರವಿವಾರ ಹಿಂದಿರುಗಿಸಿದ್ದಾರೆ.

ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರಿಗೆ ಬರೆದಿರುವ ಪತ್ರದಲ್ಲಿ ಅವರು ‘‘ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ಮಾಡುವುದು ಒಂದು ಸಣ್ಣ ಹೆಜ್ಜೆಯಾಗಿದೆ. ಆದರೆ ದೇಶದಲ್ಲಿ ‘ನೈತಿಕ ವಿಷಮತೆ ’ ಹೆಚ್ಚುತ್ತಿರುವ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಲು ನನಗಿದೊಂದೇ ದಾರಿಯಾಗಿದೆ. ನಾನು ಪ್ರಶಸ್ತಿಯನ್ನು ವಾಪಸ್ ಮಾಡಲು ಇಚ್ಛಿಸುತ್ತೇನೆ. ನನ್ನ ಈ ಕ್ರಮವು ದೇಶಕ್ಕೆ ಯಾವುದೇ ರೀತಿಯ ಅಗೌರವವನ್ನುಂಟು ಮಾಡುವುದೆಂದು ಪರಿಗಣಿಸಬಾರದು’’ ಎಂದು ಹೇಳಿದ್ದಾರೆ.
88 ವರ್ಷದ ಜಯಂತ್ ಮಹಾಪಾತ್ರ ಅವರು ಇಂಗ್ಲಿಷ್ ಭಾಷೆಯ ಕವಿಯಾಗಿದ್ದು, ಒಡಿಯಾದಲ್ಲೂ ಕೆಲವು ಕವನಗಳನ್ನು ರಚಿಸಿದ್ದಾರೆ. ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಅಸಾಧಾರಣ ಕೊಡುಗೆಗಾಗಿ ಅವರಿಗೆ 2009ರಲ್ಲಿ ಪದ್ಮಶ್ರೀ ಪ್ರಶಸ್ತಿ ದೊರೆತಿತ್ತು.
ಾರತಿ  ೀಯ ಇಂಗ್ಲೀಷ್ ಕವನ ಸಾಹಿತ್ಯದ ಸಂಸ್ಥಾಪಕರಲ್ಲೊಬ್ಬರೆಂದು ಪರಿಗಣಿಸಲ್ಪಟ್ಟಿರುವ ಮಹಾಪಾತ್ರ ಅವರು ದೇಶದ ಪ್ರಮುಖ ಸಮಕಾಲೀನ ಸಾಹಿತಿಗಳಲ್ಲೊಬ್ಬರಾಗಿದ್ದಾರೆ. ಒಡಿಯಾ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಅವರು ಒಟ್ಟು 27 ಕೃತಿಗಳನ್ನು ರಚಿಸಿದ್ದಾರೆ.

Write A Comment