ಅಂತರಾಷ್ಟ್ರೀಯ

ಭಾರತದಲ್ಲಿ ಆಡಲು ಪಿಸಿಬಿಗೆ ಪಾಕ್ ತಡೆ

Pinterest LinkedIn Tumblr

IVPಇಸ್ಲಾಮಾಬಾದ್, ನ.19: ಕ್ರೀಡಾ ಜಗತ್ತಿನ ರೋಮಾಂಚಕ ಹೋರಾಟವೊಂದಕ್ಕೆ ಪುನರುಜ್ಜೀವನ ನೀಡುವ ಅವಕಾಶಗಳಿಗೆ ಗುರುವಾರ ತೆರೆಬಿದ್ದಿದೆ. ಭಾರತದಲ್ಲಿ ಕ್ರಿಕೆಟ್ ಆಡಲು ತನ್ನ ಕ್ರಿಕೆಟ್ ತಂಡಕ್ಕೆ ಭದ್ರತಾ ಕಾರಣಗಳನ್ನು ಒಡ್ಡಿ ಪಾಕಿಸ್ತಾನ ಅನುಮತಿ ನಿರಾಕರಿಸಿದೆ. ಇದರೊಂದಿಗೆ ಡಿಸೆಂಬರ್‌ನಲ್ಲಿ ನಡೆಯಬೇಕಿದ್ದ ಪ್ರಸ್ತಾಪಿತ ದ್ವಿಪಕ್ಷೀಯ ಸರಣಿ ರದ್ದುಗೊಂಡಂತಾಗಿದೆ.

ಉಭಯ ದೇಶಗಳು ಸಂಯುಕ್ತ ಅರಬ್ ಸಂಸ್ಥಾನ (ಯುಎಇ)ದಲ್ಲೂ ಆಡುವ ಸಾಧ್ಯತೆ ಗಳು ಕಡಿಮೆ. ಪಶ್ಚಿಮ ಏಶ್ಯದಲ್ಲಿ ಅಲ್-ಖಾಯಿದ ಮತ್ತು ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರರ ಉಪಸ್ಥಿತಿ ಇರುವುದರಿಂದ ಯುಎಇಯಲ್ಲಿ ಆಡಲು ತನ್ನ ತಂಡಕ್ಕೆ ಭಾರತ ಅನುಮತಿ ನೀಡುವ ಸಾಧ್ಯತೆಯಿಲ್ಲ.

‘‘ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯು ಸರಕಾರದ ಅನುಮತಿಯಿಲ್ಲದೆ ಭಾರತದಲ್ಲಿ ಕ್ರಿಕೆಟ್ ಆಡುವಂತಿಲ್ಲ ಎನ್ನುವುದು ಪಾಕಿಸ್ತಾನ ಸರಕಾರದ ನಿಲುವು. ಈ ಪ್ರವಾಸಕ್ಕೆ ಸರಕಾರ ಅನುಮತಿ ನೀಡಿಲ್ಲ. ಭಾರತದಲ್ಲಿ ಆಡುವುದಕ್ಕೆ ಸಂಬಂಧಿಸಿ ತಂಡದ ಭದ್ರತೆ ಬಗ್ಗೆ ಸರಕಾರ ಆತಂಕ ವ್ಯಕ್ತಪಡಿಸಿದೆ’’ ಎಂದು ಪಿಸಿಬಿಯ ಕಾರ್ಯಕಾರಿ ಮಂಡಳಿಯ ಮುಖ್ಯಸ್ಥ ನಜಾಮ್ ಸೇಠಿ ಹೇಳಿದರು

Write A Comment