ರಾಷ್ಟ್ರೀಯ

ಶೇ.60.4 ಭಾರತೀಯರಿಗೆ ಶೌಚಾಲಯಗಳೇ ಇಲ್ಲ!

Pinterest LinkedIn Tumblr

Toiletಕೊಚ್ಚಿ, ನ.19: ಶೇ.60.4 ಭಾರತೀಯರು ಸುರಕ್ಷಿತ ಮತ್ತು ಖಾಸಗಿ ಶೌಚಾಲಯ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದು ಹೊಸ ಅಧ್ಯಯನವೊಂದು ಹೇಳಿದೆ.

ತಮ್ಮ ಮನೆಗಳಲ್ಲಿ ಶೌಚಾಲಯಗಳ ನಿರ್ಮಾಣಕ್ಕಾಗಿ ಕಾಯುತ್ತಿರುವ ಎಲ್ಲ 77.40 ಕೋಟಿ ಭಾರತೀಯರನ್ನು ಸಾಲಾಗಿ ನಿಲ್ಲಿಸಿದರೆ ಅದು ಭೂಮಿಯಿಂದ ಚಂದ್ರನವರೆಗೆ ಮತ್ತು ಅದರಾಚೆಗೂ ಬೆಳೆಯುತ್ತದೆ ಎಂದು ವಾಟರ್ ಏಡ್ಸ್ ಸಂಸ್ಥೆ ತನ್ನ ಅಧ್ಯಯನ ವರದಿಯಲ್ಲಿ ಬೆಟ್ಟು ಮಾಡಿದೆ. ಸಂಸ್ಥೆಯು ಗುರುವಾರ ಇಲ್ಲಿ ವಿಶ್ವ ಶೌಚಾಲಯ ದಿನಾಚರಣೆ ಸಂದರ್ಭದಲ್ಲಿ ತನ್ನ ವರದಿಯನ್ನು ಬಿಡುಗಡೆಗೊಳಿಸಿತು.

1990ರಿಂದೀಚಿಗೆ ಭಾರತದಲ್ಲಿ ಜನತೆಗೆ ಶೌಚಾಲಯಗಳ ಸೌಲಭ್ಯ ಒದಗಿಸುವಲ್ಲಿ ಶೇ.22.8ರಷ್ಟು ಪ್ರಗತಿಯಾಗಿದ್ದು, ಸುಧಾರಣೆಯನ್ನು ಕಾಣಬೇಕಾಗಿರುವ ದಕ್ಷಿಣ ಏಷ್ಯಾದ ಎಂಟು ರಾಷ್ಟ್ರಗಳ ಪೈಕಿ ಏಳನೆ ಸ್ಥಾನದಲ್ಲಿದೆ. ದ.ಏಷ್ಯಾದಲ್ಲಿ ಅತ್ಯಂತ ಹೆಚ್ಚಿನ ಸುಧಾರಣೆ ನೇಪಾಳದಲ್ಲಿ ಕಂಡು ಬಂದಿದ್ದು, ನಂತರದ ಸ್ಥಾನಗಳಲ್ಲಿ ಪಾಕಿಸ್ತಾನ ಮತ್ತು ಭೂತಾನ್ ಇವೆ ಎಂದು ವರದಿಯು ಹೇಳಿದೆ. ಶೌಚಾಲಯಗಳ ಕೊರತೆಯಿಂದ ಆರೋಗ್ಯ ಬಿಕ್ಕಟ್ಟು ಗಂಭೀರ ವಿಷಯವಾಗಿದೆ ಎಂದು ಒತ್ತಿ ಹೇಳಿರುವ ವರದಿಯು, ಭಾರತದಲ್ಲಿ ಪ್ರತಿ ವರ್ಷ 1,40,000ಕ್ಕೂ ಅಧಿಕ ಮಕ್ಕಳು ಡಯರಿಯಾದಿಂದ ಸಾವನ್ನಪ್ಪುತ್ತಿದ್ದಾರೆ.

ಸುಮಾರು 40 ಶೇಕಡಾ ಮಕ್ಕಳ ಬೆಳವಣಿಗೆ ಕುಂಠಿತಗೊಂಡಿದ್ದು, ಇದು ಅವರ ಅವರ ಜೀವಿತಾವಕಾಶ ಮತ್ತು ಭಾರತದ ಭವಿಷ್ಯದ ಏಳಿಗೆಯ ಮೇಲೆ ದುಷ್ಪರಿಣಾಮ ಬೀರಲಿದೆ. ಭಾರತದಲ್ಲಿ ನಂಜಿನಿಂದಾಗಿ ಬಾಣಂತಿಯರು ಮತ್ತು ನವಜಾತ ಶಿಶುಗಳ ಸಾವುಗಳ ಪ್ರಮಾಣವೂ ಅಧಿಕವಾಗಿದೆ ಎಂದಿದೆ.

Write A Comment