ಮನೋರಂಜನೆ

ಪವರ್ ಸ್ಟಾರ್’ರನ್ನು ಹಿಂದಿಕ್ಕಿ ನಂ-1 ಪಟ್ಟಕ್ಕೇರಿದ ಪ್ರಿನ್ಸ್ ಮಹೇಶ್

Pinterest LinkedIn Tumblr

zzzzಬಾಹುಬಲಿ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ತೆಲುಗಿನಲ್ಲಿ ಬಿಗ್ ಬಜೆಟ್ ಚಿತ್ರಗಳು ಸೆಟ್ಟೇರುತ್ತಿದೆ. ಅದರಲ್ಲೂ ಗ್ರಾಫಿಕ್ಸ್ ಇಲ್ಲದೇ ತೆರೆಕಂಡ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ‘ಶ್ರೀಮಂತುಡು’ ಚಿತ್ರವು ಟಾಲಿವುಡ್ ಬಾಕ್ಸಾಫೀಸ್’ನಲ್ಲಿ ಧೂಳೆಬ್ಬಿಸಿತ್ತು.

ಈಗ ಟಾಲಿವುಡ್ ಮತ್ತೊಂದು 100 ಕೋಟಿ ಬಜೆಟ್ ಚಿತ್ರ ನಿರ್ಮಾಣದ ತಯಾರಿ ನಡೆಸಿದೆ. ಈ ಚಿತ್ರಕ್ಕೆ ಸೂಪರ್ ಸ್ಟಾರ್ ಮಹೇಶ್ ಬಾಬು ನಾಯಕರಾಗಿ ಆಯ್ಕೆಯಾಗಿದ್ದಾರೆ.

ಬಹುಭಾಷೆಯಲ್ಲಿ ನಿರ್ಮಾಣವಾಗಲಿರುವ ಈ ಚಿತ್ರವನ್ನು ಘಜನಿ, ಕತ್ತಿ ಚಿತ್ರಗಳ ಖ್ಯಾತಿಯ ಮುರುಗದಾಸ್ ನಿರ್ದೇಶಿಸಲಿದ್ದಾರೆ.

ವಿಷಯ ಏನಪ್ಪಾ ಅಂದರೆ ಈ ಚಿತ್ರಕ್ಕಾಗಿ ಪ್ರಿನ್ಸ್ ಮಹೇಶ್ ಬರೋಬ್ಬರಿ 25ಕೋಟಿ.ರೂ. ಸಂಭಾವನೆ ಪಡೆದಿದ್ದಾರೆ. ಪೋಕಿರಿ ಚಿತ್ರದ ಮೂಲಕ ಟಾಲಿವುಡ್’ನಲ್ಲಿ ದಾಖಲೆ ಗಳಿಕೆಗೆ ಮುನ್ನುಡಿ ಬರೆದಿದ್ದ ಪ್ರಿನ್ಸ್’ರ ಹೊಸ ಚಿತ್ರವನ್ನು ಎಸ್.ಎನ್ ಪ್ರಸಾದ್ ನಿರ್ಮಿಸಲಿದ್ದಾರೆ.

ಈ ಹಿಂದೆ ಚಿತ್ರವೊಂದಕ್ಕೆ 18 ಕೋಟಿ ಪಡೆದಿದ್ದ ಪವರ್ ಸ್ಟಾರ್ ಪವನ್ ಕಲ್ಯಾಣ್’ರನ್ನು ಹಿಂದಿಕ್ಕಿ ಸೂಪರ್ ಸ್ಟಾರ್ ಮಹೇಶ್ ಬಾಬು 25 ಕೋಟಿ ಸಂಭಾವನೆ ಪಡೆಯುವ ಮೂಲಕ ಟಾಲಿವುಡ್’ನಲ್ಲಿ ನಂ1 ಪಟ್ಟಕ್ಕೇರಿದ್ದಾರೆ.

ಅಷ್ಟೇ ಅಲ್ಲದೇ ಸೌತ್ ಇಂಡಿಯಾದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಕಮಲ್ ಹಾಸನ್’ರೊಂದಿಗೆ ಪ್ರಿನ್ಸ್ ಮಹೇಶ್ ನಂ-2 ಸ್ಥಾನವನ್ನು ಹಂಚಿಕೊಂಡಿದ್ದಾರೆ. ಚಿತ್ರವೊಂದಕ್ಕೆ ಬರೋಬ್ಬರಿ 30ರಿಂದ 40 ಕೋಟಿ ರೂ. ಪಡೆಯುವ ಸೂಪರ್ ಸ್ಟಾರ್ ರಜನಿಕಾಂತ್ ನಂ-1 ಸ್ಥಾನವನ್ನು ಅಲಂಕರಿಸಿದ್ದಾರೆ.
*ಕಪ್ಪು ಮೂಗುತ್ತಿ
-ಉದಯವಾಣಿ

Write A Comment