ಅಂತರಾಷ್ಟ್ರೀಯ

ಇಲ್ಲಿ 3 ವರ್ಷಕೊಮ್ಮೆ ಸತ್ತವರ ಅಸ್ಥಿಯನ್ನು ತೆಗೆದು ಮೆರವಣಿಗೆ ಮಾಡುತ್ತಾರೆ ! ಏನಿದು ಆಚರಣೆ..ಎಲ್ಲಿ ?

Pinterest LinkedIn Tumblr

indone

ಸುಲವೆಸಿ: ಕುಟುಂಬದ ಹಿರಿಯರು ಸಾವನ್ನಪ್ಪಿದರೆ ಅವರನ್ನು ಮಣ್ಣು ಮಾಡಿ ವರ್ಷಕೊಮ್ಮೆ ತಿಥಿ ಮಾಡುತ್ತಾರೆ. ಆದರೆ ವಿಚಿತ್ರವೆಂಬಂತೆ ಇಂಡೋನೇಷಿಯಾದಲ್ಲಿ 3 ವರ್ಷಕೊಮ್ಮೆ ಸತ್ತವರ ಅಸ್ಥಿಯನ್ನು ತೆಗೆದು ಮೆರವಣಿಗೆ ಮಾಡುತ್ತಾರಂತೆ.

ಹೌದು. ಇಂತಹ ಭಯಾನಕ ಆಚರಣೆಯೊಂದು ಇಂಡೋನೇಷಿಯಾ ಸುಲವೆಸಿ ದ್ವೀಪದ ಬರುಪ್ಪು ಗ್ರಾಮದಲ್ಲಿ ನಡೆದುಕೊಂಡು ಬಂದಿದೆ. ಇಂಡೋನೇಷಿಯಾದಲ್ಲಿ ಆಚರಿಸಿಕೊಂಡು ಬರುತ್ತಿರುವ ಮನೆನೆ ಎಂಬ ಉತ್ಸವದಲ್ಲಿ ಸತ್ತವರ ಅಸ್ಥಿಯನ್ನು ತೆಗೆದು ಸ್ವಚ್ಛಗೊಳಿಸಿ, ಅವರದ್ದೇ ಇಷ್ಟದ ಬಟ್ಟೆಯನ್ನು ತೊಡಿಸಿ ಮೆರವಣಿಗೆ ಮಾಡಲಾಗುತ್ತದೆ.

ಇಂತಹ ಆಚರಣೆ ಯಾಕೆ?: ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಈ ಆಚರಣೆ ಇಲ್ಲಿನ ಜನರ ಪಾಲಿಗೆ ಅದೃಷ್ಟದ ಸಂಖೇತವಂತೆ. ಕುಟುಂಬದವರ ಪ್ರಕಾರ ಸಾವನ್ನಪ್ಪಿದ ವ್ಯಕ್ತಿ ದೇವರ ಕೃಪೆಗೆ ಪಾತ್ರರಾಗಿರುತ್ತಾರಂತೆ. ಹೀಗಾಗಿ ಅದರಿಂದ ಕುಟುಂಬದವರ ರಕ್ಷಣೆಯಾಗುತ್ತದೆಯಂತೆ. ಈ ಉತ್ಸವದ ನಂತರ ಅಸ್ಥಿಗಳನ್ನು ಸುಡಲಾಗುತ್ತದೆ ಕಾರಣ ಅಲ್ಲಿಗೆ ಸಾವನ್ನಪ್ಪಿದ ವ್ಯಕ್ತಿಗೆ ಮುಕ್ತಿ ಸಿಕ್ಕಿಂದಂತಾಗುತ್ತದೆಯಂತೆ.

Write A Comment