ಅಂತರಾಷ್ಟ್ರೀಯ

ಇಲ್ಲೊಬ್ಬ ಯುವಕ ಸತತ 3 ವರ್ಷಗಳಿಂದ ನೀರನ್ನೇ ಕುಡಿದಿಲ್ಲ !

Pinterest LinkedIn Tumblr

WATERMAN

ನ್ಯೂಯಾರ್ಕ್: ಊಟವಿಲ್ಲದೆ ಹಲವು ತಿಂಗಳು ಬದುಕಿರುವವರನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ಸತತ 3 ವರ್ಷಗಳಿಂದ ನೀರನ್ನೇ ಕುಡಿಯದೆ ಬದುಕಿದ್ದಾನೆ.

ಹೌದು, ನ್ಯೂಯಾರ್ಕ್ ನಗರದ ನಿವಾಸಿಯಾದ ಪೀಟರ್ ಆಶ್ಚರ್ಯವೆಂಬಂತೆ 3 ವರ್ಷಗಳಿಂದ ನೀರನ್ನೇ ಕುಡಿಯದೆ ಬದುಕಿದ್ದಾನೆ. ಈತ ಕೊನೆಯ ಬಾರಿಗೆ ನೀರು ಕುಡಿದದ್ದು 2012 ರ ಮೇ ತಿಂಗಳಿನಲ್ಲಂತೆ.

ವೃತ್ತಿಯಲ್ಲಿ ನರ್ಸ್ ಹಾಗೂ ವೆಬ್‍ಕ್ಯಾಂ ಮಾಡೇಲ್ ಆಗಿರುವ ಪೀಟರ್, ನೀರನ್ನು ಸಂಪೂರ್ಣವಾಗಿ ತ್ಯಜಿಸಲು ನಿರ್ಧರಿಸಿದ್ದ. ಮೊದಮೊದಲು ಬಾಯಾರಿಕೆಯಾದಾಗ ನೀರಿನ ಬದಲಾಗಿ ಮಿಲ್ಕ್‍ಶೇಕ್ ಕುಡಿಯುತ್ತಿದ್ದನಂತೆ. ಆದರೆ ದಿನಗಳು ಕಳೆದಂತೆ ಈತ ಅದನ್ನೂ ತ್ಯಜಿಸಿದ್ದಾನೆ. ಆದರೆ ಬಾಯರಿಕೆ ತೀರಿಸಿಕೊಳ್ಳುವುದಕ್ಕಾಗಿ ಹಣ್ಣು ಮತ್ತು ತರಕಾರಿ ಸೇವನೆ ಮಾಡುತ್ತಾನೆ.

Write A Comment