ಅಂತರಾಷ್ಟ್ರೀಯ

ಇರಾಕ್ ವಿರುದ್ಧ ಯುದ್ಧ ಸಾರಿದ್ದು ಪ್ರಮಾದ: ಟೋನಿ ಬ್ಲೇರ್ ವಿಷಾದ

Pinterest LinkedIn Tumblr

Dow0041367. Daily Telegraph. Tony Blair for DT Features. Picture shows former prime minister Tony Blair, picture for an interview by Charles Moore. Picture taken at the Blair Foundation office in Grosvenor Square, London. Picture date 23/07/2012

ಲಂಡನ್: ಇರಾಕ್ ವಿರುದ್ಧ ಸಮರ ಸಾರಿದ್ದುದಕ್ಕೆ ಇದೇ ಮೊದಲ ಬಾರಿಗೆ ಪಶ್ಚಾತ್ತಾಪ ವ್ಯಕ್ತಪಡಿಸಿರುವ ಬ್ರಿಟನ್‌ನ ಮಾಜಿ ಪ್ರಧಾನಿ ಟೋನಿ ಬ್ಲೇರ್, ಈ ಯುದ್ಧದಿಂದಲೇ ಜಗತ್ತಿನಲ್ಲಿ ಐಸಿಸ್ ಉಪಟಳ ಹೆಚ್ಚುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘‘2003ರಲ್ಲಿ ಸದ್ದಾಂ ಹುಸೈನ್ ಆಡಳಿತವಿದ್ದ ಇರಾಕ್ ವಿರುದ್ಧ ಯುದ್ಧ ಸಾರಿದ್ದು ಬುದ್ಧಿವಂತಿಕೆಯಲ್ಲ. ಮಾತ್ರವಲ್ಲದೆ, ಯುದ್ಧವನ್ನು ವ್ಯವಸ್ಥಿತವಾಗಿ ಕಾರ್ಯಗತಗೊಳಿಸುವಲ್ಲಿಯೂ ವಿಫಲವಾಗಿದ್ದೇವೆ’’ ಎಂದವರು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಿಎನ್‌ಎನ್ ಯುರೋಪ್‌ನಲ್ಲಿ ಮಂಗಳವಾರ ಪ್ರಸಾರವಾಗುವ ಸಾಕ್ಷಚಿತ್ರ ‘ಲಾಂಗ್ ರೋಡ್ ಟು ಹೆಲ್: ಅಮೆರಿಕ ಇನ್ ಇರಾಕ್’ನ ಭಾಗವಾದ ಬ್ಲೇರ್ ಸಂದರ್ಶನ ಬಿತ್ತರಗೊಳ್ಳಲಿದ್ದು, ಅವರನ್ನು ಅಮೆರಿಕನ್ ಪತ್ರಕರ್ತ ಫರೀದ್ ಝಕರಿಯಾ ಸಂದರ್ಶಿಸಿದ್ದಾರೆ.

ಸಮೂಹ ಹತ್ಯೆಗೆ ಬಳಸಿದ್ದ ಶಸತ್ಸಾಸ್ತ್ರಗಳ ಬಗ್ಗೆ ವಿವರ ವಿವರ ಕೇಳಿದಾಗ ಪ್ರತಿಕ್ರಿಯಿಸಿರುವ ಬ್ಲೇರ್, ಇರಾಕ್ ಯುದ್ಧದ ಬಗ್ಗೆ ತನ್ನ ವೈಯಕ್ತಿಕ ಅಭಿಪ್ರಾಯವನ್ನು ಬಿಚ್ಚಿಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

‘‘ಸದ್ದಾಂನ ನಿರಂಕುಶ ಆಡಳಿತವನ್ನು ಕೊನೆಗಾಣಿಸಿದರೆ ಭವಿಷ್ಯದಲ್ಲಿ ಸೃಷ್ಟಿಯಾಗಬಹುದಾದ ಪರಿಸ್ಥಿತಿ ಬಗ್ಗೆ ಯಾವುದೇ ಮಾಹಿತಿಗಳಿರಲಿಲ್ಲ. ಆ ಸಂದರ್ಭವನ್ನು ಅರ್ಥೈಸಿಕೊಳ್ಳುವುದರಲ್ಲಿ ನಾವು ಸಂಪೂರ್ಣ ವಿಫಲರಾದೆವು. ಸದ್ದಾಂ ವಿಷಯವಾಗಿ ಕ್ಷಮೆ ಕೋರುವುದು ಕಷ್ಟ’’ ಎಂದವರು ಹೇಳಿದ್ದಾರೆ.

‘‘ನಾವು ಬೇಹುಗಾರಿಕೆ ಮಾಹಿತಿಯನ್ನು ತಪ್ಪಾಗಿ ಗ್ರಹಿಸಿರುವ ಬಗ್ಗೆ ಕ್ಷಮೆಯಾಚಿಸುತ್ತೇನೆ. ನಾವು ಕೈಗೊಂಡಿರುವ ಯೋಜನೆಗಳಲ್ಲಿಯೂ ಕೆಲವೊಂದು ಪ್ರಮಾದಗಳಿದ್ದವು.ಮಾತ್ರವಲ್ಲದೆ, ಸದ್ದಾಂ ಆಡಳಿತವನ್ನು ಕಿತ್ತೊಗೆದಲ್ಲಿ ಮುಂದೆ ಏನು ಸಂಭವಿಸಬಹುದೆಂಬುದರ ಬಗೆಗಿನ ನಮ್ಮ ತಪ್ಪುಗ್ರಹಿಕೆಯ ಬಗ್ಗೆಯೂ ವಿಷಾದವಿದೆ’’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ವೇಳೆ ಅವರು ಹೇಳಿದ್ದಾರೆ.

ಸುಮಾರು 5 ಲಕ್ಷ ಮಂದಿಯನ್ನು ಬಲಿತೆಗೆದು ಕೊಂಡಿರುವ ಇರಾಕ್ ಸಮರಕ್ಕೆ ಮುಂದಾಗಿದ್ದ ಬ್ಲೇರ್ ಅವರನ್ನು ‘ಯುದ್ಧಾಪರಾಧಿ’ ಎಂದೇ ಟೀಕಿಸಲಾಗುತ್ತಿದ್ದು, 2007ರಲ್ಲಿ ಅಧಿಕಾರದಿಂದ ಕೆಳಗಿಳಿದ ಬ್ಲೇರ್ ಮತ್ತೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗಿರಲಿಲ್ಲ. 2003ರ ಘಟನೆಯೇ 2015ರ ಪರಿಸ್ಥಿತಿಗೆ ಕಾರಣವೆಂಬುದನ್ನು ಅವರು ಒಪ್ಪಿಕೊಂಡಿದ್ದಾರೆ.

Write A Comment