ಅಂತರಾಷ್ಟ್ರೀಯ

20 ಕ್ಕೂ ಹೆಚ್ಚು ಮಕ್ಕಳ ನಗ್ನ ಫೋಟೋ ತೆಗೆದು ಸಾಮಾಜಿಕ ಅಂತರ್ಜಾಲದಲ್ಲಿ ಅಪ್ಲೋಡ್ ಮಾಡಿದ ಅಧ್ಯಾಪಕಿ

Pinterest LinkedIn Tumblr

china

ಬೀಜಿಂಗ್: ಚೈನಾದ ಕಿಂಡರ್ಗಾರ್ಟನ್ ಅಧ್ಯಾಪಕಿಯೊಬ್ಬರು 20 ಕ್ಕೂ ಹೆಚ್ಚು ಮಕ್ಕಳ (ಬಾಲಕರು) ನಗ್ನ ಫೋಟೋ ತೆಗೆದು ಸಾಮಾಜಿಕ ಅಂತರ್ಜಾಲದಲ್ಲಿ ಅಪ್ಲೋಡ್ ಮಾಡಿ, ಅದು ಲೈಂಗಿಕ ಶಿಕ್ಷಣದ ಭಾಗ ಎಂದು ಸಮಜಾಯಿಶಿ ನೀಡಿರುವುದು ಪೋಷಕರ ಕೆಂಗಣ್ಣಿಗೆ ಗುರಿಯಾಗಿದೆ.

ಚೈನಾದ ಹೆನನ್ ಪ್ರಾಂತ್ಯದಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಮ ಎಂಬ ಅಧ್ಯಾಪಕಿ ಜುಲೈನಲ್ಲಿ ಮಕ್ಕಳ ನಗ್ನ ಚಿತ್ರ ಕ್ಲಿಕ್ಕಿಸಿ ಸಾಮಾಜಿಕ ಅಂತರ್ಜಾಲದಲ್ಲಿ ಹಾಕಿದ್ದಾಳೆ. ನಂತರ ಇದು ಒಳ್ಳೆಯ ಕಾರಣಕ್ಕೆ ಮಾಡಿರುವುದಾಗಿ ಕಾರಣ ನೀಡಿದ್ದಾಳೆ ಎಂದು ಚೈನನ್ಯೂಸ್.ಕಾಂ ವರದಿ ಮಾಡಿದೆ.

ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡಿ ಜೀವನದ ಪಾಠ ಹೇಳುತ್ತಿದ್ದೆ ಎಂದು ಮ ತಿಳಿಸಿರುವುದಾಗಿ ವರದಿಯಾಗಿದೆ. ಆದರೆ ಈ ಫೋಟೋಗಳನ್ನು ಕ್ಲಿಕ್ಕಿಸಲು ಅವರ ಪೋಷಕರ ಅನುಮತಿ ಪಡೆದಿಲ್ಲ.

ಮಕ್ಕಳು ಮುದ್ದಾಗಿದ್ದಾರೆ ಎಂಬ ಕಾರಣಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡಿರುವುದಾಗಿ ತಿಳಿಸಿರುವ ಮ, ಈ ಫೋಟೋಗಳನ್ನು ತೆಗೆಯಬೇಕಾದರೆ ಹೆಣ್ಣು ಮಕ್ಕಳನ್ನು ಬೇರೆ ಕೊಠಡಿಗೆ ಕಳಿಸಿರುವುದಾಗಿ ತಿಳಿಸಿದ್ದಾರೆ.

೩೦ ನಗ್ನ ಬಾಲಕರನ್ನು ನಿಲ್ಲಿಸಿ ಅವರ ಖಾಸಗಿ ಭಾಗವನ್ನು ಕೈಯಿಂದ ಮುಚ್ಚಿಕೊಳ್ಳುವಂತೆ ಹೇಳಿ ಫೋಟೊ ತೆಗೆದು ಅಂತರ್ಜಾಲದಲ್ಲಿ ಹಾಕಿದ್ದಾರೆ. ಹಲವು ಪೋಷಕರು ಇದಕ್ಕೆ ಆಕ್ಷೇಪ ಎತ್ತಿದ್ದು ಅಧ್ಯಾಪಕಿ ವಿಕೃತಕಾಮಿ ಇರಬಹುದು ಎಂದು ಕೆಲವರು ದೂರಿದ್ದಾರೆ.

Write A Comment