ರಾಷ್ಟ್ರೀಯ

ಹರಿಯಾಣದಲ್ಲಿ ಮೇಲುಜಾತಿಯವರಿಂದ ದಲಿತ ಕುಟುಂಬದ ಮಕ್ಕಳಿಬ್ಬರ ಸಜೀವ ದಹನ: ಗ್ರಾಮಸ್ಥರಿಂದ ಮಕ್ಕಳ ಮೃತದೇಹವಿಟ್ಟು ಪ್ರತಿಭಟನೆ

Pinterest LinkedIn Tumblr

dalit

ಫರೀಬಾದಬಾದ್: ಹರಿಯಾಣದಲ್ಲಿ ದಲಿತ ಕುಟುಂಬವೊಂದರ ಅಮಾಯಕ ಮಕ್ಕಳಿಬ್ಬರನ್ನು ಜೀವಂತ ಸುಟ್ಟು ಹಾಕಿದ ಘಟನೆಯನ್ನು ಖಂಡಿಸಿ ಗ್ರಾಮಸ್ಥರು ಬುಧವಾರ ರಸ್ತೆಯಲ್ಲಿ ಮಕ್ಕಳ ಶವವಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ.

ಮಕ್ಕಳ ಶವಸಂಸ್ಕಾರ ಮಾಡಲು ನಿರಾಕರಿಸಿರುವ ಸುನ್‌ಪದ್ ಗ್ರಾಮಸ್ಥರು ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಬಲ್ಲಾಭಾಗ್- ಫರೀದಾಬಾದ್ ಹೆದ್ದಾರಿಯಲ್ಲಿ ಶವವಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ.

ಸೋಮವಾರ ತಡರಾತ್ರಿ ದೆಹಲಿಯ ಹೊರವಲಯದ ಸುನ್‌ಪದ್ ಗ್ರಾಮದಲ್ಲಿ ನೆಲೆಸಿರುವ ಜಿತೇಂದ್ರ-ರೇಖಾ ದಂಪತಿ ಮನೆಗೆ ಹೊರಗಿನಿಂದ ಚಿಲಕ ಹಾಕಿದ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಘಟನೆಯಲ್ಲಿ ಮಕ್ಕಳು ಸಜೀವ ದಹನವಾಗಿದ್ದು, ಪೋಷಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರು. ಮೇಲ್ವರ್ಗದವರೊಂದಿಗೆ ವಾಗ್ವಾದ ನಡೆಸಿದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಲಾಗಿದೆ.

Write A Comment