ಅಂತರಾಷ್ಟ್ರೀಯ

ಭಾರತದೊಂದಿಗಿನ ರಾಜತಾಂತ್ರಿಕ ಬಿಕ್ಕಟ್ಟು ಬಗೆಹರಿಸಲು ನೇಪಾಳದಿಂದ ಸಮಿತಿ ರಚನೆ

Pinterest LinkedIn Tumblr

nepalಕಠ್ಮಂಡು: ಭಾರತದೊಂದಿಗಿನ ರಾಜಕೀಯ-ರಾಜತಾಂತ್ರಿಕ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಲು ನೇಪಾಳ ತ್ರಿಸದಸ್ಯ ಸಮಿತಿಯನ್ನು ರಚಿಸಿದೆ.

ಹೊಸ ಸಂವಿಧಾನವನ್ನು ವಿರೋಧಿಸಿ ನೇಪಾಳದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಭಾರತದಿಂದ ಪೂರೈಕೆಯಾಗಬೇಕಿದ್ದ ಸರಕುಗಳು ತುಂಬಿರುವ ಲಾರಿಗಳು ನೇಪಾಳದ ಗಡಿ ಭಾಗದಲ್ಲೇ ಸ್ಥಗಿತಗೊಂಡಿದೆ. ಈ ಬೆಳವಣಿಗೆಯಿಂದ ನೇಪಾಳಕ್ಕೆ ಪೆಟ್ರೋಲಿಯಂ ಉತ್ಪನ್ನಗಳ ಕೊರತೆ ಎದುರಾಗಿದೆ.

ನೇಪಾಳದ ಗಡಿಯಲ್ಲಿ ಉಂಟಾಗಿರುವ ಬಿಕ್ಕಟ್ಟಿನ್ನು ಬಗೆಹರಿಸಿಕೊಳ್ಳಲು ನೇಪಾಳದ ಸರ್ಕಾರ ತ್ರಿಸದಸ್ಯ ಸಮಿತಿಯನ್ನು ರಚಿಸಿದೆ. ನೇಪಾಳದ ವಿದೇಶಾಂಗ ಸಚಿವ ಮಹೇಂದ್ರ ಬಹದ್ದೂರ್ ಪಾಂಡೆ ಸಮಿತಿಯ ನೇತೃತ್ವ ವಹಿಸಿದ್ದು, ಮುಖ್ಯ ಕಾರ್ಯದರ್ಶಿ ಸೋಮ್ ಲಾಲ್ ಸುಬೇಡಿ ವಾಣಿಜ್ಯ ಮತ್ತು ಸರಬರಾಜು ಕಾರ್ಯದರ್ಶಿ ಸಮಿತಿಯ ಸದಸ್ಯರಾಗಿದ್ದಾರೆ.  ತ್ರಿಸದಸ್ಯ ಸಮಿತಿ ಸದಸ್ಯರು ಸದ್ಯದಲ್ಲೇ ಭಾರತಕ್ಕೆ ಭೇಟಿ ನೀಡಲಿದ್ದು, ಕೇಂದ್ರ ಸರ್ಕಾರದ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಉನ್ನತಮಟ್ಟದ ಸಭೆ ನಡೆಸಲಿದ್ದಾರೆ.

Write A Comment