ಅಂತರಾಷ್ಟ್ರೀಯ

ಫೋಕ್ಸ್‌ವ್ಯಾಗನ್‌ನಿಂದ ವಂಚನೆ: ತಪ್ಪೊಪ್ಪಿಕೊಂಡ ಎಂಜಿನಿಯರ್‌ಗಳು

Pinterest LinkedIn Tumblr

5Volkswagen_logo_2012ಬರ್ಲಿನ್,ಅ.4: ಮಾಲಿನ್ಯ ಪರೀಕ್ಷೆಗಳನ್ನು ವಂಚಿಸುವ ಸಾಧನವನ್ನು ಕಂಪೆನಿಯ ಕಾರುಗಳಲ್ಲಿ ತಾವು ಅಳವಡಿಸಿದ್ದಾಗಿ ಭಾರೀ ಹಗರಣದಲ್ಲಿ ಸಿಲುಕಿರುವ ಫೋಕ್ಸ್ ವ್ಯಾಗನ್‌ನ ಹಲವಾರು ಎಂಜಿನಿಯರ್‌ಗಳು ಒಪ್ಪಿಕೊಂಡಿದ್ದಾರೆಂದು ಸ್ಥಳೀಯ ದೈನಿಕ ವೊಂದು ರವಿವಾರ ವರದಿ ಮಾಡಿದೆ.

ಕಳೆದ ತಿಂಗಳು ಬೆಳಕಿಗೆ ಬಂದ ಈ ಅವ್ಯವಹಾರ ದಲ್ಲಿ ತಾವು ಭಾಗಿಯಾಗಿದ್ದು, 2008ರಲ್ಲಿ ವಂಚಕ ಸಾಫ್ಟ್‌ವೇರನ್ನು ಅಳವಡಿಸಿದ್ದೇವೆಂದು ಈ ಎಂಜಿನಿಯರ್‌ಗಳು ಆಂತರಿಕ ತನಿಖೆಯ ವೇಳೆ ಒಪ್ಪಿಕೊಂಡಿದ್ದಾರೆನ್ನಲಾಗಿದೆ. ಆದರೆ ದೈನಿಕ ‘ಬಿಲ್ಡ್ ಆ್ಯಮ್ ಸಂಟಾಗ್’ ಈ ಎಂಜಿನಿಯರ್‌ಗಳ ಹೆಸರುಗಳನ್ನು ಅಥವಾ ಎಷ್ಟು ಜನರು ತಪ್ಪೊಪ್ಪಿಕೊಂಡಿದ್ದಾರೆ ಎನ್ನುವುದನ್ನು ಬಹಿರಂಗಗೊಳಿಸಿಲ್ಲ.

ವಿಶ್ವಾದ್ಯಂತ ತನ್ನ ಸುಮಾರು 11 ಮಿಲಿಯ ಡೀಸೆಲ್ ವಾಹನಗಳಲ್ಲಿ ಈ ವಂಚಕ ಸಾಫ್ಟ್‌ವೇರನ್ನು ಅಳವಡಿಸಿರುವುದಾಗಿ ಫೋಕ್ಸ್ ವ್ಯಾಗನ್ ಒಪ್ಪಿಕೊಂಡಿದೆ.

ಆದರೆ ಈವರೆಗಿನ ಅವರ ಹೇಳಿಕೆಗಳು ಹಗರಣದ ರೂವಾರಿ ಯಾರು ಎನ್ನುವುದನ್ನು ಬಯಲಿಗೆಳೆಯುವಲ್ಲಿ ವಿಫಲಗೊಂಡಿವೆ ಎಂದು ಅದು ಹೇಳಿದೆ.

ಈ ವಂಚನೆಯನ್ನು ನಡೆಸದಿದ್ದರೆ ಫೋಕ್ಸ್ ವ್ಯಾಗನ್ 2005ರಲ್ಲಿ ತಯಾರಿಸಿದ್ದ ಇಎ 189 ಎಂಜಿನ್ ಮಾಲಿನ್ಯ ಮಿತಿಯನ್ನು ಪಾಲಿಸಲು ಮತ್ತು ತಯಾರಿಕೆ ವೆಚ್ಚವನ್ನು ನಿಯಂತ್ರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಈ ಎಂಜಿನಿಯರ್‌ಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಸಾಧನವು ಕಾರು ಯಾವಾಗ ತಪಾಸಣೆಗೊಳ ಪಡುತ್ತದೆ ಎನ್ನುವುದನ್ನು ಗ್ರಹಿಸಿ ಎಂಜಿನ್ ಕಡಿಮೆ ಪ್ರಮಾಣದಲ್ಲಿ ಮಾಲಿನ್ಯವನ್ನು ಹೊರ ಸೂಸುವಂತೆ ಮಾಡು ತ್ತದೆ.

ಕಾರು ಪುನಃ ರಸ್ತೆಗಿಳಿದಾಗ ಈ ವ್ಯವಸ್ಥೆಯನ್ನು ಅದು ಸ್ಥಗಿತಗೊಳಿಸುತ್ತದೆ. ವಾಸ್ತವ ಸ್ಥಿತಿಯಲ್ಲಿ ಫೋಕ್ಸ್ ವ್ಯಾಗನ್ ಕಾರು ಮಿತಿಗಿಂತ ತುಂಬ ಹೆಚ್ಚಿನ ಪ್ರಮಾಣದಲ್ಲಿ ಮಾಲಿನ್ಯವನ್ನು ಹೊರಸೂಸುತ್ತದೆ.

ಜಾಗತಿಕ ಮಟ್ಟದ ಈ ಹಗರಣದಿಂದಾಗಿ ಫೋಕ್ಸ್ ವ್ಯಾಗನ್ ತನ್ನ ಶೇ.40ರಷ್ಟು ಮಾರುಕಟ್ಟೆ ಬಂಡವಾಳವನ್ನು ಕಳೆದುಕೊಂಡಿದೆ ಮತ್ತು ಅದರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಾರ್ಟಿನ್ ವಿಂಟರ್‌ಕಾರ್ನ್ ಅವರು ಹುದ್ದೆಯಿಂದ ಕೆಳಗಿಳಿದಿದ್ದಾರೆ.

ಅಮೆರಿಕದ ವಕೀಲರ ತಂಡವೊಂದನ್ನು ತನಿಖೆಗಾಗಿ ನೇಮಿಸಿರುವ ಕಂಪೆನಿಯು ಈ ಹಗರಣದ ಮೂಲವನ್ನು ಬಯಲಿಗೆಳೆಯಲು ಪಣ ತೊಟ್ಟಿದೆ.

Write A Comment