ಸಾಮಾನ್ಯವಾಗಿ ಮುಖದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ನಗು ತುಂಬಿದ ಮುಖ ಪ್ರಮುಖ ಪಾತ್ರವಹಿಸುತ್ತದೆÉ. ನಿಮ್ಮ ಆ ಆಕರ್ಷಕ ನಗುವನ್ನು ಮತ್ತಷ್ಟು ಆಕರ್ಷಣೀಯವಾಗಿಸುವುದು ನಿಮ್ಮ ಹಲ್ಲುಗಳು. ಹಲ್ಲುಗಳು ಸೌಂದರ್ಯದ ಪ್ರತೀಕ. ಸೌಂದರ್ಯ ಅಡಗಿರುವುದು ಹಲ್ಲುಗಳಲ್ಲೇ. ಬಿಳಿಯಾಗಿ ಹೊಳೆಯುವ ಹಲ್ಲುಗಳು ನಿಮ್ಮ ಆರೊಗ್ಯವನ್ನೂ ಸಹ ಪ್ರತಿಬಿಂಬಿಸುತ್ತವೆ
ಹೀಗೆ ಸೌಂದರ್ಯದ ಕಾಳಜಿ ವಹಿಸುವಾಗ ನೀವು ನಿಮ್ಮ ಹಲ್ಲುಗಳ ಕಡೆ ಮೊದಲು ಗಮನ ಹರಿಸಿ. ಸ್ವಚ್ಛವಾದ ಹಲ್ಲುಗಳು ನಿಮ್ಮದಾಗಿದ್ದರೆ ನಿಮಗೆ ಸದಾ ಎಲ್ಲರೆದುರು ಮುಕ್ತವಾಗಿ ನಗುವ ಸ್ವಾತಂತ್ರ್ಯ ಸಿಕ್ಕಹಾಗೆ.
ಹೌದು, ಹಲ್ಲು ಹಾಗೂ ವಸಡುಗಳು ಆರೋಗ್ಯದಿಂದಿರಲು ದಿನನಿತ್ಯದ ಜೀವನಶೈಲಿಯಲ್ಲಿ ಮಾಡುವ ಕೆಲವು ಎಡವಟ್ಟುಗಳು ಕಾರಣವಾಗುತ್ತವೆ. ಹಲ್ಲು ಮತ್ತು ವಸಡುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು,ಕೆಲವು ಸಲಹೆಗಳು ಇಲ್ಲಿವೆ…
ಹೊಳೆಯುವ ಹಲ್ಲುಗಳು ನಿಮ್ಮದಾಗಬೇಕೆ…?
ಅಗತ್ಯವಾದ ಪೆÇೀಷಕಾಂಶಗಳನ್ನು ಹೊಂದಿರುವ ಆಹಾರವು ನಿಮ್ಮ ಹಲ್ಲು ಮತ್ತು ದವಡೆಗಳ ಆರೋಗ್ಯವನ್ನು ದ್ವಿಗುಣಗೊಳಿಸುತ್ತದೆ. ಮುತ್ತಿನಂತಹ ಬಿಳುಪಿನ ದಂತ ಪಂಕ್ತಿಗಾಗಿ ಸರಳ ಸಲಹೆ ಎಂದರೆ ಆಹಾರ ಸೇವನೆಯಲ್ಲಿ ಎಚ್ಚರವಹಿಸುವುದು. ಕ್ಯಾರಿಯೊಸ್ಟೆಟಿಕ್ ಅಂಶಗಳನ್ನು ಒಳಗೊಂಡಿರುವ ಆಹಾರಗಳನ್ನು ಸುರಕ್ಷಾ ಆಹಾರಗಳು ಎಂದು ಗುರುತಿಸಲಾಗುತ್ತದೆ. ಇವುಗಳಲ್ಲಿ ಕ್ಯಾಲ್ಸಿಯಂ ಮತ್ತು ಫಾಸ್ಫೇಟ್‍ಗಳು ಅಧಿಕವಾಗಿರುತ್ತವೆ. ಉದಾಹರಣೆಗೆ ಕಡಲೆ ಬೀಜ, ಲೆಕ್ಟಿನ್, ಕೋಕೊ, ಪನ್ನೀರ್ ಇತ್ಯಾದಿ. ಇವುಗಳು ಬಾಯಿಯಲ್ಲಿ ಶೇಖರಣೆಗೊಂಡ ಬ್ಯಾಕ್ಟೀರಿಯಾಗಳನ್ನು ಹೋಗಲಾಡಿಸುವ ಶಕ್ತಿಯನ್ನು ಹೊಂದಿರುತ್ತವೆ. ಜೊತೆಗೆ ಇವು ಹಲ್ಲಿನ ಎನಾಮೆಲ್ ಮೇಲೆ ಒಂದು ಸುರಕ್ಷಣಾ ಪದರವನ್ನು ನಿರ್ಮಿಸುತ್ತವೆ. ಹಣ್ಣುಗಳು ಮತ್ತು ತರಕಾರಿಗಳನ್ನು ಅಗಿಯುವ ಮೂಲಕ ನಮ್ಮ ಬಾಯಿಯಲ್ಲಿ ಲಾಲಾ ರಸವು ಅಧಿಕವಾಗಿ ಉತ್ಪಾದನೆಯಾಗುತ್ತದೆ. ಹಸಿರು ಸೊಪ್ಪುಗಳಲ್ಲಿ ವಿಟಮಿನ್ ಎ ಅಧಿಕವಾಗಿರುತ್ತವೆ. ಇವುಗಳು ನಿಮ್ಮ ಹಲ್ಲುಗಳು ಮತ್ತು ಮೂಳೆಗಳ ಉತ್ತಮ ಆಕಾರಕ್ಕೆ ಕೊಡುಗೆ ನೀಡುತ್ತವೆ.
ಹಾಲು ಮತ್ತು ಹಾಲಿನ ಉತ್ಪನ್ನಗಳು ನಿಮ್ಮ ಆಹಾರದ ಅತ್ಯುತ್ತಮ ಕ್ಯಾಲ್ಸಿಯಂ ಆಕರಗಳು. ಪ್ರತಿಯೊಬ್ಬರು ಒಂದು ದಿನಕ್ಕೆ 250-500 ಮಿ.ಲೀ ಹಾಲನ್ನು ಕುಡಿಯಬೇಕು. ಕಡಿಮೆ ಕೊಬ್ಬಿರುವ ಪಾಶ್ಚರೀಕರಿಸಿದ ಹಾಲು ಈ ನಿಟ್ಟಿನಲ್ಲಿ ತುಂಬಾ ಒಳ್ಳೆಯದು.
ಸ್ವಚ್ಛವಾದÀ ಹಲ್ಲುುಗಳನ್ನು ಹೊಂದುವ ಆಸೆ ನಿಮಗಿದ್ದರೆ ಸಿಹಿ ತಿಂಡಿಗಳು, ಚಾಕೊಲೆಟ್‍ಗಳಿಂದ ದೂರವಿರಿ.
ಬ್ರೆಡ್, ದ್ವಿದಳ ಧಾನ್ಯಗಳು, ರೋಟಿ, ಪರೋಟಾಗಳು ಮತ್ತು ದಾಲಿಯಾ, ಕಾರ್ನ್‍ಪ್ಲೆಕ್ಸ್, ಜೊತೆಗೆ ಸಂಸ್ಕರಿಸಿದ ಧಾನ್ಯಗಳಿಂದ ಮಾಡಿದ ನೂಡಲ್ಸï, ಪಾಸ್ತಾಗಳು, ಬಿಸ್ಕೆಟ್, ಬೇಕರಿ ಪದಾರ್ಥಗಳು ಇದರ ಜೊತೆಗೆ ಪಿಷ್ಟ ಪದಾರ್ಥಗಳು ಮತ್ತು ಸಕ್ಕರೆ ಅಂಶವಿರುವ ಕಾರ್ಬೋಹೈಡ್ರೆಟ್ ಒಳಗೊಂಡಿರುವ ಪದಾರ್ಥಗಳು ನಮ್ಮ ದಂತ ಕುಳಿಗಳಿಗೆ ಪ್ರಮುಖ ಕಾರಣವಾಗುತ್ತವೆ.
ಹಲ್ಲುಗಳು ಬಿಳುಪಾಗಲು ಕೇವಲ ಟೂಥ್‍ಫೇಸ್ಟ್ ಮಾತ್ರ ಸಾಲದು. ಈ ನಿಟ್ಟಿನಲ್ಲಿ ಸಹಕರಿಸಲು ಮನೆ ಮದ್ದುಗಳು ಸಹ ಪರಿಣಾಮಕಾರಿಯಾದ ಫಲಿತಾಂಶಗಳನ್ನು ನೀಡುತ್ತವೆ. ನಿಮ್ಮ ಹಲ್ಲುಗಳ ಪಾಲಿಗೆ ಸುರಕ್ಷಿತವಾಗಿರುವ ಹಲವಾರು ಸ್ವಾಭಾವಿಕವಾದ ಮನೆ ಮದ್ದುಗಳು ದೊರೆಯುತ್ತವೆ. ಆದರೂ ಉಪ್ಪಿನಂತಹ ಪದಾರ್ಥವನ್ನು ನೀರಿನಲ್ಲಿ ಮಿಶ್ರಣ ಮಾಡಿಕೊಂಡು, ನಂತರ ಹಲ್ಲುಗಳ ಮೇಲೆ ಲೇಪಿಸಬೇಕು. ಇದರಿಂದ ನಿಮ್ಮ ಹಲ್ಲುಗಳ ಮೇಲೆ ಇರುವ ಎನಾಮೆಲï ಹಾಳಾಗುವುದನ್ನು ತಡೆಯಬಹುದು. ಉಪ್ಪು ಮತ್ತು ಇದ್ದಿಲುಗಳ ಮಿಶ್ರಣವನ್ನು ಹಿಂದಿನ ಕಾಲದಲ್ಲಿ ಹಲ್ಲುಗಳನ್ನು ಬಿಳುಪು ಮಾಡುವ ಟೂಥ್‍ಪೇಸ್ಟ್ ಆಗಿ ಬಳಸುತ್ತಿದ್ದರು.
ಆಲೀವ್ ಮತ್ತು ಬಾದಾಮಿ ಎಣ್ಣೆಯ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಬೆಳಗ್ಗೆ ಎದ್ದ ಕೂಡಲೆ ನಿಮ್ಮ ಹಲ್ಲುಗಳಿಗೆ ಲೇಪಿಸಿ ಉಜ್ಜಿ. ಇದನ್ನು 5 ದಿನ ಸತತವಾಗಿ ಮಾಡುವುದರಿಂದ ನಿಮ್ಮ ಹಲ್ಲುಗಳು ಫಳಫಳ ಹೊಳೆಯುತ್ತವೆ.
ಒಂದು ಹಿಡಿಯಷ್ಟು ಸ್ಟ್ರಾಬೆರಿಗಳನ್ನು ಹಿಂಡಿ ರಸದಂತೆ ಮಾಡಿಕೊಳ್ಳಿ. ಈ ರಸವನ್ನು ಹಲ್ಲುಗಳಿಗೆ ಲೇಪಿಸಿ. ಬಾಯಿ ತೆಗೆದು, ಆ ರಸ ಹಲ್ಲುಗಳ ಮೇಲೆಯೇ ಒಣಗಲು ಬಿಡಿ. ಯಾವಾಗ ಇದು ಒಣಗುತ್ತದೆಯೋ, ಆಗ ಅದನ್ನು ನೀರಿನಿಂದ ಮುಕ್ಕಳಿಸಿ ತೊಳೆಯಿರಿ. ಈ ಪರಿಹಾರವು ನಿಮ್ಮ ಹಲ್ಲುಗಳನ್ನು ಬೆಳ್ಳಗೆ ಮಾಡುವುದರ ಜೊತೆಗೆ, ಉಸಿರಿನ ದುರ್ವಾಸನೆಯನ್ನು ಸಹ ನಿವಾರಿಸುತ್ತದೆ.
ಒಂದು ನಿಂಬೆ ಹಣ್ಣನ್ನು ಎರಡು ಭಾಗವಾಗಿ ಕತ್ತರಿಸಿ. ನಂತರ ಈ ತುಂಡುಗಳನ್ನು ನೀರಿನಲ್ಲಿ ಮುಳುಗಿಸಿ. ಆ ನಂತರ ಈ ಮಿಶ್ರಣವನ್ನು ಹಲ್ಲುಗಳನ್ನು ಉಜ್ಜಲು ಬಳಸಿ. ಈ ಪರಿಹಾರವನ್ನು ವಾರಕ್ಕೊಮ್ಮೆ ಬಳಸುವುದರಿಂದ ನಿಮ್ಮ ಹಲ್ಲುಗಳು ಬೆಳ್ಳಗಾಗುತ್ತವೆ
ನಿಮ್ಮ ಹಲ್ಲುಗಳನ್ನು ಬಿಳಿಯಾಗಿಸಲು ಇರುವ ಅತ್ಯಂತ ಪರಿಣಾಮಕಾರಿಯಾದ ಉಪಾಯವೆಂದರೆ ಕ್ಯಾರಟ್ ಜ್ಯೂಸ್. ಇದು ಸಹ ನಿಮಗೆ ನೆರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇದನ್ನು ಲೇಪಿಸುವ ಮುನ್ನ ಒಂದು ಚಿಟಿಕೆ ಉಪ್ಪನ್ನು ಬೆರೆಸಿಕೊಂಡರೆ ಮತ್ತಷ್ಟು ಒಳ್ಳೆಯದು.
ಬೇವಿನ ಎಲೆಗಳು ಒಂದು ಹಿಡಿ ಬೇವಿನ ಎಲೆಗಳನ್ನು ಜಜ್ಜಿ, ಅದನ್ನು ಹಾಲಿನೊಂದಿಗೆ ಬೆರೆಸಿ. ಇದನ್ನು ಒಂದು ದಪ್ಪವಾದ ಪೇಸ್ಟ್‍ನಂತೆ ಮಾಡಿಕೊಳ್ಳಿ ಮತ್ತು ಇದನ್ನು ನಿಮ್ಮ ಟೂಥ್‍ಪೇಸ್ಟಿನಿಂದ ಹಲ್ಲುಜ್ಜುವ ಮೊದಲು ಬಳಸಿ.
ಪ್ರತಿ ನಿತ್ಯ ಸೇಬನ್ನು ಕಚ್ಚಿ ತಿನ್ನುವುದರಿಂದ ನಿಮ್ಮ ಹಲ್ಲುಗಳ ಮೇಲೆ ಇರುವ ಹಳದಿ ಟಾರನ್ನು ನಿವಾರಿಸಿಕೊಳ್ಳಬಹುದು ಹಾಗೂ ಮುಂದೆ ಇದರಿಂದ ನಿಮ್ಮ ಹಲ್ಲುಗಳು ಸದೃಢವಾಗುತ್ತವೆ.
ಕಿತ್ತಳೆ ಹಣ್ಣಿನ ಸಿಪ್ಪೆಗಳನ್ನು ಬಳಸುವುದರಿಂದ ಸಹ ನಿಮ್ಮ ಹಲ್ಲುಗಳನ್ನು ನೀವು ಬೆಳ್ಳಗೆ ಮಾಡಿಕೊಳ್ಳಬಹುದು. ಈ ಸಿಪ್ಪೆಗಳನ್ನು ನಿಮ್ಮ ಹಲ್ಲುಗಳ ಮೇಲೆ ವಾರಕ್ಕೆ ಎರಡು ಬಾರಿ ಉಜ್ಜಿ, ಇದರಿಂದ ಸಿಗುವ ಫಲಿತಾಂಶವನ್ನು ನೀವೇ ನೋಡಿ.
**********
ಹಲ್ಲುಜ್ಜುವ ಬ್ರಷ್ ಬಗ್ಗೆ ಇರಲಿ ಎಚ್ಚರ ..!
ರೋಗಗಳಿಗೆ ಆಹ್ವಾನ ನೀಡುವ ಹಲವು ಕ್ರಿಮಿ ಮತ್ತು ಜಂತುಗಳನ್ನು ಸುಲಭವಾಗಿ ಶರೀರಕ್ಕೆ ಸೇರಿಸುವ ಸಾಧನವಾಗಿ ಹಲ್ಲುಜ್ಜುವ ಬ್ರಷ್ ಬಳಕೆಯಾಗುತ್ತಿದೆ ಎಂದು ಇತ್ತೀಚಿನ ಸಂಶೋಧನೆಗಳು ಎಚ್ಚರಿಸಿವೆ.
ಹೌದು… ಇದಕ್ಕೆ ಪ್ರಮುಖ ಕಾರಣ ಇದನ್ನು ನಾವು ಉಪಯೋಗಿಸುವ ಸ್ಥಳ ಅಂದರೆ ಶೌಚಾಲಯ. ಇಲ್ಲಿ ತೆರೆದ ಸ್ಥಿತಿಯಲ್ಲಿಟ್ಟ ಬ್ರಷ್‍ನ ಕೂದಲುಗಳ ಮೇಲೆ ಗಾಳಿಯಲ್ಲಿ ತೇಲಾಡಿಕೊಂಡಿದ್ದ ವಿವಿಧ ಕ್ರಿಮಿ, ಬ್ಯಾಕ್ಟೀರಿಯಾಗಳು ಸುಲಭವಾಗಿ ಕುಳಿತು ಮುಂದಿನ ಬಾರಿ ಹಲ್ಲುಜ್ಜುವಾಗ ಬ್ರಷ್ ಮೂಲಕ ಬಾಯಿಯೊಳಗೆ ಪ್ರವೇಶ ಪಡೆಯುತ್ತವೆ.
ಪ್ರತಿ ಬಾರಿ ಬ್ರೆಷ್ ಮಾಡಿದ ನಂತರ ಮುಚ್ಚಳವನ್ನು ಹಾಕುವುದನ್ನು ಮರೆಯದಿರಿ.
ಬಾಯಿಯ ದುರ್ವಾಸನೆ ಹೋಗಲೆಂದು ಹಲ್ಲುಗಳನ್ನು ಬಲವಾಗಿ ಉಜ್ಜುವುದರಿಂದ ಪ್ರಯೋಜನವಿಲ್ಲ. ಬಾಯಿಯ ದುರ್ಗಂಧಕ್ಕೆ ಕಾರಣ ನಿಮ್ಮ ನಾಲಿಗೆಯೇ ಹೊರತು ಹಲ್ಲುಗಳಲ್ಲ ಎಂಬುದನ್ನು ನೆನಪಿನಲ್ಲಿಡಿ.
ಮಲಗುವಾಗ ಹಲ್ಲು ಉಜ್ಜದೇ ಮಲಗುವುದರಿಂದ ಮುಂದಿನ 6-8 ಗಂಟೆಗಳ ಸಮಯದಲ್ಲಿ ಬಾಯಲ್ಲಿ ಸೂಕ್ಷ್ಮಾಣುಗಳ ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ.
ಮೃದುವಾದ ಬ್ರಶ್‍ಗಳು ಹಾಗೂ ಗಟ್ಟಿ ಬ್ರಷ್‍ಗಳನ್ನು ನಿಮ್ಮ ಹಲ್ಲುಗಳಿಗೆ ಬಳಸುವುದು ಸೆನ್ಸಿಟೀವ್ ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ. ನಿಮ್ಮ ಹಲ್ಲು ಹಾಗೂ ವಸಡನ್ನು ಕಾಳಜಿ ವಹಿಸುವ ಮೃದುವಾದ ಬ್ರಷ್‍ಗಳನ್ನು ಬಳಸುವುದು ಉತ್ತಮ.
ಒಂದು ಬ್ರಷ್ ಅನ್ನು ಪ್ರತಿ 3 – 4 ತಿಂಗಳಿಗೆ ಬದಲಾಯಿಸಿ.
ಆಂಟಿಬ್ಯಾಕ್ಟೀರಿಯ ಮೌತ್ ವಾಶ್ ಉಪಯೋಗಿಸಿದರೆ ಬ್ಯಾಕ್ಟೀರಿಯಾ ನಿಮ್ಮ ಬ್ರಷ್ ಗೆ ಸೇರುವುದನ್ನು ತಡೆಯಬಹುದು.
********************
ಹಲ್ಲು ನೋವು ಕಾಣಿಸಿಕೊಂಡರೆ ಹೀಗೆ ಮಾಡಿ
ಹಲ್ಲು ಹಾಗೂ ವಸಡುಗಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸದಿದ್ದರೆ ನಾನಾ ಸಮಸ್ಯೆಗಳನ್ನು ಎದುರಿಸಲೇಬೇಕಾಗುತ್ತೆ. ಸಾಮಾನ್ಯವಾಗಿ ಕಾಡುವ ಹಲ್ಲು ನೋವು ಹಾಗೂ ವಸಡುಗಳ ರಕ್ತಸ್ರಾವದ ಕೆಲವು ಸಮಸ್ಯೆಗಳು ಕಾಣಿಸಿಕೊಂಡಾಗ ನಿಮ್ಮ ಅಡುಗೆ ಮನೆಯಲ್ಲಿಯೇ ಇರುವ ಹಲವಾರು ಮದ್ದುಗಳಿಂದ ನಿಮ್ಮ ಹಲ್ಲು ನೋವಿಗೆ ಅಗತ್ಯವಾದ ಪರಿಹಾರವನ್ನು ಕಂಡುಕೊಳ್ಳಬಹುದು.
ಬೆಳ್ಳುಳ್ಳಿಯು ಒಂದು ಪ್ರಾಕೃತಿಕವಾದ ಬ್ಯಾಕ್ಟೀರಿಯಾ ನಿರೋಧಕವಾಗಿದೆ. ಬೆಳ್ಳುಳ್ಳಿಯ ರಸವು ಇನ್‍ಫೆಕ್ಷನ್ ಹೋಗಲಾಡಿಸುತ್ತದೆ. ಬೆಳ್ಳುಳ್ಳಿಯನ್ನು ಜಜ್ಜಿ ರಸವನ್ನು ತೆಗೆಯಿರಿ. ಈ ರಸವನ್ನು ಸೋಂಕು ಇರುವ ಭಾಗಕ್ಕೆ ಲೇಪಿಸಿ. ಈ ಮನೆ ಮದ್ದು ನಿಮ್ಮ ಹಲ್ಲು ನೋವನ್ನು ನಿವಾರಿಸಲು ಪರಿಣಾಮಕಾರಿಯಾಗಿ ನೆರವಾಗುತ್ತದೆ.
ಲವಂಗದ ಎಣ್ಣೆಯು ಇನ್‍ಫೆಕ್ಷನ್ ನಿವಾರಿಸಲು ಹೇಳಿ ಮಾಡಿಸಿದ ಔಷಧಿಯಾಗಿದೆ. ಇದು ದವಡೆಗಳ ನೋವು ಮತ್ತು ಹಲ್ಲು ನೋವುಗಳಿಗೆ ರಾಮ ಬಾಣದಂತೆ ಕೆಲಸ ಮಾಡುತ್ತದೆ. ಸ್ವಲ್ಪ ಪ್ರಮಾಣದ ಲವಂಗದ ಎಣ್ಣೆಯನ್ನು ತೆಗೆದುಕೊಳ್ಳಿ. ಅದರಿಂದ ಮೃದುವಾಗಿ ಬ್ರಷ್ ಮಾಡಿ. ಇದನ್ನು ನೋವಿರುವ ಭಾಗಕ್ಕೆ ಬಳಸುವಾಗ ಸ್ವಲ್ಪ ಜಾಗರೂಕರಾಗಿರಿ. ಹೆಚ್ಚು ಒತ್ತಡವನ್ನು ನೀಡದೆ ಬ್ರಷ್ ಮಾಡಿ. ಇಲ್ಲವಾದಲ್ಲಿ ನಿಮ್ಮ ನೋವು ಮತ್ತಷ್ಟು ಹೆಚ್ಚಾಗಬಹುದು. ಲವಂಗದ ಎಣ್ಣೆಯನ್ನು ದವಡೆಗಳ ಮೇಲೆ ಹಾಕಿ ಮೃದುವಾಗಿ ಮಸಾಜï ಮಾಡಿ.
ಹಲ್ಲು ನೋವಿಗೆ ಉಪ್ಪು ತಕ್ಷಣದ ನೋವು ನಿವಾರಕವಾಗಿ ಕೆಲಸಕ್ಕೆ ಬರುವ ಅಂಶವಾಗಿದೆ. ಬೆಚ್ಚನೆಯ ನೀರಿಗೆ ಸ್ವಲ್ಪ ಉಪ್ಪುನ್ನು ಬೆರೆಸಿ ಅದರಿಂದ ಬಾಯಿಯನ್ನು ಮುಕ್ಕುಳಿಸಿ. ಮೊದಲೆರಡು ಬಾರಿ ಬಾಯಿಯನ್ನು ಮುಕ್ಕುಳಿಸುವಾಗ ನಿಮಗೆ ನೋವಿನ ಅನುಭವವಾಗಬಹುದು. ಆದರೆ ನಂತರ ನಿಮಗೆ ನೋವಿನಿಂದ ಉಪಶಮನ ದೊರೆಯುವುದು ಸುಳ್ಳಲ್ಲ. ಇದನ್ನು ಕೆಲವು ಬಾರಿ ಪುನರಾವರ್ತಿಸಿ ಮತ್ತು ಶೇ.90ರಷ್ಟು ನೋವನ್ನು ಕಡಿಮೆಯಾಗುವುದು.
ಹಸಿ ತರಕಾರಿಗಳನ್ನು ಅಗಿಯುವುದರಿಂದ ಹಲ್ಲುಗಳು ಸ್ವಚ್ಚವಾಗುವುದಲ್ಲದೇ, ವಸಡುಗಳಲ್ಲಿ ರಕ್ತ ಪರಿಚಲನೆ ಸುಗಮವಾಗುವುದು. ಆದ್ದರಿಂದ ದಿನವೂ ಹಸಿ ತರಕಾರಿಗಳನ್ನು ಅಗಿಯುವುದು ಒಳ್ಳೆಯದು.
ಅಡುಗೆ ಸೊಡಾವು ಬಾಯಿಯ ವಾತಾವರಣವನ್ನು ಆಮ್ಲಿಯವಾಗಿಸುವ ಮೂಲಕ ಬಾಯಿಯಲ್ಲಿನ ಬ್ಯಾಕ್ಟಿರಿಯಾಗಳನ್ನು ಕೊಲ್ಲುತ್ತದೆ. ಇದನ್ನು ಬೆರಳುಗಳ ಸಹಾಯದಿಂದ ವಸಡುಗಳ ಮೇಲೆ ಲೇಪಿಸಿಕೊಳ್ಳಬಹುದು.