ಅಂತರಾಷ್ಟ್ರೀಯ

ತಾನು ಪ್ರೀತಿಸುತ್ತಿದ್ದ ಹುಡುಗಿಗೆ ಪ್ರಪೋಸ್ ಮಾಡುದಕ್ಕಾಗಿ ಈ ಪ್ರೇಮಿ ಏನು ಮಾಡಿದ ಗೊತ್ತೇ …? ಈ ಸುದ್ದಿ ಓದಿ ನಿಮಗೆ ಆಶ್ಚರ್ಯ ಆಗಬಹುದು ….

Pinterest LinkedIn Tumblr

car

ಗುವಾಂಗಜೋ: ಹುಡುಗಿ ಸಿಕ್ಕಾಗ ಪ್ರಪೋಸ್ ಮಾಡೋಕೆ ಹುಡುಗ್ರು ಏನೆಲ್ಲಾ ಯೋಚನೆ ಮಾಡ್ತಾರೆ ಗೊತ್ತಲ್ವಾ.. ಚೀನಾದಿಂದ ಒಂದು ಸ್ಟೋರಿ ಇದೆ ನೋಡಿ. ಯಾರದ್ರೂ ಇಂಪ್ರೆಸ್ ಆಗಲೇಬೇಕು.

ಈ ಮಹಾಶಯ ತನ್ನ ಇನಿಯೆಯನ್ನು ಇಂಪ್ರೆಸ್ ಮಾಡೋಕೆ ಮಾಡಿದ್ದೇನು ಗೊತ್ತಾ..? 11 ಲಕ್ಷುರಿ ಕಾರುಗಳನ್ನು ತಂದು ಅದನ್ನು ಲವ್ ಸಿಂಬಲ್ ಹೃದಯ ರೂಪದಲ್ಲಿ ಇರಿಸಿ ನೀ ನನ್ನ ಮದುವೆಯಾಗ್ತೀಯಾ ಎಂದು ಕೇಳಿದ್ದಾನೆ. ಈತನ ಹೊಸ ಸ್ಟೈಲ್ಗೆ ಇಂಪ್ರೆಸ್ ಆದ ಹುಡುಗಿ ಯಸ್ ಎಂದು ಬಿಟ್ಟಿದ್ದಾಳೆ.

ಚೀನಾದ ಗುವಾಂಗಜೋನಲ್ಲಿ ವಾಸವಾಗಿರುವ ಇವರಿಬ್ಬರೂ ಶಾಲಾ ದಿನಗಳಿಂದಲೇ ಜೊತೆಯಾಗೇ ಓದ್ತಿದ್ರು. ಹೇಗದ್ರೂ ಮಾಡಿ ಆಕೆಯನ್ನು ಮದುವೆಯಾಗಲೇ ಬೇಕು ಎಂದಿದ್ದ ಹುಡುಗನ ತಲೆಗೆ ಹೊಳೆದಿದ್ದೇ ಈ ಪ್ಲ್ಯಾನ್. 10ನೇ ಕ್ಲಾಸ್ ಕಳೆದ ನಂತರ ಇಬ್ಬರೂ ಡೇಟಿಂಗ್ ಮಾಡ್ತಿದ್ರಂತೆ. ಮದುವೆಯಾಗೋ ಪ್ಲ್ಯಾನ್ ಹೊಳೆದಿದ್ದೇ ತಡ 11 ಲಕ್ಷುರಿ ಕಾರುಗಳನ್ನು ಬಾಡಿಗೆಗೆ ಪಡೆದು ಅದನ್ನು ಗರ್ಲ್ಫ್ರೆಂಡ್ ಕಾಲೇಜು ಬಳಿ ತಂದು ಹೃದಯದಾಕಾರದಲ್ಲಿ ನಿಲ್ಲಿಸಿದ್ದಾನೆ. ಹುಡುಗಿ ಕಾಲೇಜಿನಿಂದ ಹೊರಗೆ ಬರುತ್ತಿದ್ದಂತೆ ಹುಡುಗ ಡೈಮಂಡ್ ರಿಂಗ್ ತೋರಿಸಿದ. ಹುಡುಗನ ಪ್ರಪೋಸಲ್ಗೆ ಒಪ್ಪಿದ ಹುಡುಗಿ ಪದವಿ ಮುಗಿದ ತಕ್ಷಣ ಅಂದ್ರೆ 4 ವರ್ಷದ ಬಳಿಕ ಮದುವೆಯಾಗೋದಾಗಿ ಹೇಳಿದ್ದಾಳಂತೆ.

Write A Comment