ಅಂತರಾಷ್ಟ್ರೀಯ

ಮೊದಲ ಫ್ರೆಂಚ್ ದಾಳಿ; ಸಿರಿಯಾದಲ್ಲಿ ೩೦ ಇಸ್ಲಾಮಿಕ್ ಸ್ಟೇಟ್ ಜಿಹಾದಿಗಳ ಹತ್ಯೆ

Pinterest LinkedIn Tumblr

France-Syria-Airstrik_Rಬೀರತ್: ಫ್ರಾನ್ಸ್ ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರ ಮೇಲೆ ನಡೆಸಿದ ಮೊದಲ ದಾಳಿಯಲ್ಲಿ ೧೨ ಜಿಹಾದಿ ಮಕ್ಕಳೂ ಒಳಗೊಂದಂತೆ ಒಟ್ಟು ೩೦ ಜಿಹಾದಿಗಳನ್ನು ಹತ್ಯೆ ಮಾಡಲಾಗಿದೆ ಎಂದು ಇಂದು ವರದಿಯಾಗಿದೆ.

“ಪೂರ್ವ ಸಿರಿಯಾದ ಇಸ್ಲಾಮಿಕ್ ಸ್ಟೇಟ್ ತರಬೇತಿ ಶಿಬರದ ಮೇಲೆ ನಡೆಸಿದ ಫ್ರೆಂಚ್ ವೈಮಾನಿಕ ದಾಳಿಯಲ್ಲಿ (ಭಾನುವಾರ) ೩೦ ಐಎಸ್ ಉಗ್ರರು ಹತ್ಯೆಯಾಗಿದ್ದಾರೆ. ಇವರಲ್ಲಿ ‘ಕಬ್ಸ್ ಆಫ್ ಕ್ಯಾಲಿಫತ್’ ಎಂದು ಕರೆಯಲಾಗುವ ೧೨ ಜಿಹಾದಿ ಮಕ್ಕಳು ಕೂಡ ಸೇರಿದ್ದಾರೆ” ಎಂದು ಸಿರಿಯಾದ ಮಾನವ ಹಕ್ಕುಗಳ ಪರಿವೀಕ್ಷಕ ಅಬ್ದೆಲ್ ರಹಮಾನ್ ತಿಳಿಸಿದ್ದಾರೆ.

ಹತ್ಯೆಯಾದವರಲ್ಲಿ ವಿದೇಶಿ ಐಎಸ್ ಹೋರಾಟಗಾರರು ಸೇರಿದ್ದಾರೆ ಮತ್ತು ಈ ದಾಳಿಯಲ್ಲಿ ಸುಮಾರು ೨೦ ಜನ ಗಾಯಗೊಂಡಿದ್ದಾರೆ ಎಂದು ರಹಮಾನ್ ತಿಳಿಸಿದ್ದಾರೆ.

ಆರು ಫ್ರೆಂಚ್ ಯುದ್ಧ ವಿಮಾನಗಳು ಡೇರ್ ಎಜ್ಜಾರ್ ನಗರದ ಐಎಸ್ ತರಬೇತಿ ಶಿಬಿರದ ಮೇಲೆ ದಾಳಿ ನಡೆಸಿದವು ಎಂದು ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹಾಲ್ಲೆಂಡೆ ಭಾನುವಾರ ತಿಳಿಸಿದ್ದರು. ಮುಂದಿನ ವಾರಗಳಲ್ಲಿ ಹೆಚ್ಚಿನ ದಾಳಿ ನಡೆಯುವ ಸೂಚನೆಯನ್ನು ಕೂಡ ನೀಡಿದ್ದಾರೆ.

ಇದು ಸಿರಿಯಾದಲ್ಲಿ ಫ್ರಾನ್ಸ್ ನಡೆಸಿದ ಮೊದಲ ದಾಳಿಯಾಗಿದ್ದರೂ, ಇರಾಕಿನಲ್ಲಿ ಐಎಸ್ ವಿರುದ್ಧ ನಡೆದಿರುವ ೪೫೦೦ ವೈಮಾನಿಕ ದಾಳಿಗಳಲ್ಲಿ ೨೧೫ ಫ್ರಾನ್ಸ್ ನವು.

Write A Comment