ಅಂತರಾಷ್ಟ್ರೀಯ

ವಯಸ್ಸಿನ ಮಿತಿಯಿಲ್ಲದ ಹಾರ್ಟ್ ಅಟ್ಯಾಕ್ ಟೆಸ್ಟ್ ಮಾಡುವುದು ಹೇಗೆ?

Pinterest LinkedIn Tumblr

heart-attackಹೃದಯಾಘಾತ ಎಂಬುದು ಯಾರಿಗೆ ಯಾವಾಗ ಯಾವ ಕ್ಷಣದಲ್ಲಿ ಬರುತ್ತದೆ ಎಂಬುದನ್ನು ಹೇಳುವುದು ಕಷ್ಟಸಾಧ್ಯ. ಹಿಂದೆಲ್ಲಾ ಹೃದಯಾಘಾತ ವಯಸ್ಸಾದ ನಂತರವಷ್ಟೇ ಬರುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಹೃದಯಾಘಾತವಾಗುವುದಕ್ಕೆ ವಯಸ್ಸಿನ ಮಿತಿಯೇ ಇಲ್ಲ ಎಂಬಂತೆ ಅನೇಕ ಘಟನೆಗಳು ನಮ್ಮ ಕಣ್ಣೆದುರು ಕಾಣಸಿಗುತ್ತದೆ. ವಯಸ್ಸಾದವರಿಗಷ್ಟೇ ಅಲ್ಲದೇ, ತಾರುಣ್ಯದಲ್ಲಿರುವ ಯುವಕ-ಯುವತಿಯರಿಗೂ ಹೃದಯಾಘಾತ ಕಾಣಿಸಿಕೊಳ್ಳಬಹುದು. ಹೀಗಾಗಿ ಪ್ರತಿಯೊಬ್ಬರೂ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವುದು ಅತ್ಯಂತ ಅವಶ್ಯಕ.

ಹೃದಯಾಘಾತ ಎಂಬುದು ಅತ್ಯಂತ ಗಂಭೀರ ಸಮಸ್ಯೆಯಾಗಿದ್ದು, ಈ ಬಗ್ಗೆ ಮೊದಲೇ ಮುನ್ನೆಚ್ಚರಿಕೆ ತೆಗೆದುಕೊಂಡು ನಮ್ಮ ದೇಹ ಹಾಗೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೆ ಹೃದಯಾಘಾತದಿಂದ ಕೊಂಚ ಮಟ್ಟಿಗಾದರೂ ದೂರವಿರಬಹುದು. ಇಷ್ಟಕ್ಕೂ ಹೃದಯಾಘಾತ ನಮಗೆ ಬರುತ್ತದೆಯೋ ಇಲ್ಲವೋ ಎಂಬುದನ್ನು ಹೇಗೆ ಪತ್ತೆ ಹಚ್ಚುವುದು…? ಇದಕ್ಕೆ ಇಲ್ಲಿದೆ ಉತ್ತರ. ಹೃದಯಾಘಾತ ಬರುತ್ತದೆಯೋ ಇಲ್ಲವೋ ಎಂಬುದನ್ನು ಇದೀಗ ಸುಲಭವಾಗಿ ಪತ್ತೆ ಹಚ್ಚಬಹುದು. ವೈದ್ಯರ ಬಳಿ ಹೋಗಿ ಸಾವಿರಾರು ರುಪಾಯಿ ಹಣ ಖರ್ಚು ಮಾಡುವುದಕ್ಕಿಂತ ಮೊದಲು ಪ್ರಾಥಮಿಕವಾಗಿ ನಮ್ಮಲ್ಲೇ ಪರೀಕ್ಷೆ ಮಾಡಿಕೊಳ್ಳಬೇಕು. ಅಂದರೆ ಹೃದಯಾಘಾತದ ಕೆಲವು ಲಕ್ಷಣಗಳನ್ನು ತಿಳಿದುಕೊಂಡು ಅದಕ್ಕೆ ನಮ್ಮಲ್ಲೇ ಉತ್ತರ ಕಂಡುಕೊಳ್ಳಬೇಕು. ಈ ಪ್ರಶ್ನೆಗಳಿಗೆ ನಮ್ಮಲ್ಲಿನ ಉತ್ತರ ಹೌದು ಎಂದಾದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಹೃದಯಾಘಾತ ಸಂಭವ ಕುರಿತಂತೆ ಪ್ರಾಥಮಿಕ ಪರೀಕ್ಷೆ ಮಾಡಿಕೊಳ್ಳಲು ಕೆಲವು ಪ್ರಶ್ನೆಗಳ ಸಲಹೆ ಇಲ್ಲಿದೆ.

ಈ ಕೆಳಕಂಡ 10 ಪ್ರಶ್ನೆಗಳಿಗೆ ನಿಮ್ಮಲ್ಲೇ ಉತ್ತರ ಕಂಡುಕೊಳ್ಳಿ. ಪ್ರಶ್ನೆಯ ಮೊದಲ ಆಯ್ಕೆಗೆ 5 ಅಂಕಗಳು ಹಾಗೂ ಎರಡನೇ ಆಯ್ಕೆ 10 ಅಂಕಗಳನ್ನು ನೀಡಲಾಗಿದೆ.

ಉದಾಹರಣೆಗೆ ನೀವು ಮೊದಲನೇ ಪ್ರಶ್ನೆಗೆ ಮೊದಲನೇ ಆಯ್ಕೆ ಮಾಡಿದಿದಾರೆ ನಿಮಗೆ 5 ಅಂಕಗಳು ಸಿಗುತ್ತದೆ. ಎರಡನೇ ಆಯ್ಕೆಯನ್ನು ಸೂಚಿಸಿದರೆ 10 ಅಂಕ ಸಿಗುತ್ತದೆ. ಇದರಂತೆ ಎಲ್ಲಾ ಪ್ರಶ್ನೆಗೂ ಉತ್ತರಿಸಿ. ನಂತರ ಅಂಕಗಳನ್ನು ಲೆಕ್ಕ ಹಾಕಿ. ಇದರಲ್ಲಿ ನಿಮ್ಮ ಒಟ್ಟು ಅಂಕ 75ಕ್ಕಿಂತ ಜಾಸ್ತಿ ಬಂದರೆ ನಿಮಗೆ ಹೃದಯಾಘಾತ ಸಂಭವಿಸುವ ಅವಕಾಶ ಹೆಚ್ಚಿರುವುದು ಇದರಿಂದ ತಿಳಿಯುತ್ತದೆ. ನಂತರ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಆರೋಗ್ಯಕ್ಕೆ ಉತ್ತಮವಾಗಿರುತ್ತದೆ.

ನೀವು ತುಂಬಾ ದಪ್ಪಗಿದ್ದೀರಾ?

ಇಲ್ಲ     ಹೌದು

ದೈಹಿಕವಾಗಿ ಆ್ಯಕ್ಟಿವ್ ಆಗಿದ್ದೀರಾ?

ಹೌದು     ಇಲ್ಲ

ನಿಮಗೆ ಡಯಾಬಿಟೀಸ್ ಇದೆಯಾ?

ಇಲ್ಲ      ಹೌದು

ನೀವು ಧೂಮಪಾನಿಗಳಾ?

ಅಲ್ಲ     ಹೌದು

ನಿಮ್ಮ ದೇಹದಲ್ಲಿ ಸಿಕ್ಕಾಪಟ್ಟೆ ಕೊಬ್ಬಿದೆಯಾ?

ಇಲ್ಲ     ಹೌದು

ನೀವು ಅಧಿಕ ರಕ್ತದೊತ್ತಡದವರಾ?

ಅಲ್ಲ     ಹೌದು

ನಿಮಗೆ 55ಕ್ಕಿಂತ ಜಾಸ್ತಿ ವಯಸ್ಸಾಗಿದೆಯಾ?

ಇಲ್ಲ    ಹೌದು

ನೀವು ತುಂಬಾ ಡಿಪ್ರೆಷನ್ ಆಗ್ತೀರಾ?

ಕೆಲವೊಂದು ಸಲ

ಯಾವಾಗಲೂ

ನಿಮ್ಮ ಫ್ಯಾಮಿಲಿ ಹಿಸ್ಟರಿಯಲ್ಲಿ ಹೃದ್ರೋಗ ಇತ್ತಾ?

ಇಲ್ಲ     ಹೌದು

ಬರ್ತ್ ಕಂಟ್ರೋಲ್ ಮಾತ್ರೆ ತಗೊಂಡಿದ್ದೀರಾ?

ಒಂದೆರಡು ಅಷ್ಟೇ.

ಐದಾರು ಸಲ

Write A Comment