ಅಂತರಾಷ್ಟ್ರೀಯ

ಅನಾರೋಗ್ಯದ ಗೂಡು ಈ ಏಸಿ

Pinterest LinkedIn Tumblr

Air-Conditionersಏರ್ ಕಂಡೀಶನ್ ರೂಮ್ ಅಂದ್ರೆ ಹಿಮಾಲಯದ ಸುಖ ಅಂತ ಅಂದುಕೊಂಡಿದ್ದೀರಿ. ಆದರೆ ಅದು ಸುಳ್ಳು. ಈ ಎಸಿ ನಮ್ಮ ದೇಹವನ್ನೇನೋ ತಂಪಾಗಿಡುತ್ತೆ. ಜೊತೆಜೊತೆಗೆ ಬಿಸಿಬಿಸಿ ಅನಾರೋಗ್ಯಗಳನ್ನೂ ನಮ್ಮ ದೇಹದೊಳಗೇ ಬಚ್ಚಿಟ್ಟಿರುತ್ತದೆ. ಏರ್ ಕಂಡೀಶನರಿಂದ ಆಗುವ ಅಂಥ ಅಪಾಯಗಳು ಇವು…

ಬಳಲಿಕೆ, ತಲೆನೋವು

ನೀವು ಎಸಿ ರೂಮಿಗೆ ಹೊಸಬರಾದರೆ ಆರಂಭದಲ್ಲಿ ಕಾಣಿಸಿಕೊಳ್ಳುವ ಅನಾರೋಗ್ಯಗಳಿವು. ನಿಮ್ಮ ಶ್ವಾಸಕೋಶಕ್ಕೆ ಈ ತಣ್ಣನೆ ಹವಾ ಕಿರಿಕಿರಿ ಎನಿಸಿದರೆ, ಉಸಿರಾಟಕ್ಕೂ ಸಮಸ್ಯೆ ಆದೀತು. ಎಸಿರೂಮಿ ನಲ್ಲಿದ್ದವರು ಹೆಚ್ಚು ನೀರು ಕುಡಿ ದರೆ ಆಗಾಗ್ಗೆ ಕಾಣಿಸಿಕೊಳ್ಳುವ ಬಳಲಿಕೆ ದೂರವಾಗುತ್ತದೆ.

ವಂಶವಾಹಿ ರೋಗಗಳು

ಏರ್ ಕಂಡೀಶನರ್ ಕೆಲವು ವಂಶವಾಹಿ ರೋಗಗಳಿಗೆ ಪ್ರಚೋದಕ ಎಂಬುದೂ ಸಾಬೀತಾಗಿದೆ. ನಿಮ್ಮ ಪೂರ್ವಜರಲ್ಲಿ ಕಡಿಮೆ ರಕ್ತದೊತ್ತಡ, ವಾತರೋಗವಿದ್ದರೆ ಅದು ನಿಮಗೂ ವರ್ಗಾವಣೆಯಾದಂತೆ.

ಡ್ರೈ ಸ್ಕಿನ್

ನೀವು ಕೈಯನ್ನು ಎಷ್ಟೇ ಒದ್ದೆಮಾಡಿಕೊಳ್ಳಿ. 1 ತಾಸಿನ ನಂತರ ಮತ್ತೆ ಅದು ತೀರಾ ಒರಟಾಗುತ್ತದೆ. ಕೃತಕ ತಂಪನ್ನು ಚರ್ಮ ಸ್ವೀಕರಿಸಲು ನಿರಾಕರಿಸುವುದೇ ಇದಕ್ಕೆ ಕಾರಣ.

ಬಿಸಿಲು ಭಯ

ಸುದೀರ್ಘವಾಗಿ ಎಸಿ ರೂಮಿನಲ್ಲಿ ಕೆಲಸ ಮಾಡಿದವರು ಬಿಸಿಲಿಗೆ ಅಂಜುತ್ತಾರೆ. ಚರ್ಮಕ್ಕೆ ಅಗತ್ಯವಾದ ವಿಟಮಿನ್‍ಗಳು ಸೂರ್ಯನ ಕಿರಣದಿಂದ ಸಿಕ್ಕರೂ, ಅದರ ಪ್ರಯೋಜನ ಪಡೆಯಲು ಹಿಂಜರಿಯುತ್ತಾರೆ.

ಸಾಂಕ್ರಾಮಿಕ ರೋಗ

ಎಸಿ ಕೋಣೆಯಲ್ಲಿ ಹಲವರೊಟ್ಟಿಗೆ ಕೆಲಸ ಮಾಡುತ್ತಿದ್ದರೆ ಪಕ್ಕದವರ ಶೀತಜ್ವರದಂಥ ಸಾಂಕ್ರಾಮಿಕ ರೋಗಗಳೂ ಬಹುಬೇಗನೆ ನಿಮಗೂ ಅಟ್ಯಾಕ್ ಆಗುತ್ತವೆ.

Write A Comment