ಅಂತರಾಷ್ಟ್ರೀಯ

ನಿಮ್ಮ ಫೇಸ್ಬುಕ್ ಜಾತಕ ಸ್ವೀಡನ್ ಕಾಡಲ್ಲಿ ಭದ್ರ!

Pinterest LinkedIn Tumblr

facebook-data-centre-fiಕ್ಯಾಲಿಫೋರ್ನಿಯಾ: ನಮ್ಮ ಪಾಪ ಪುಣ್ಯಲೆಕ್ಕವನ್ನೆಲ್ಲ ಯಮಧರ್ಮನ ಅಕೌಂಟೆಂಟ್  ಚಿತ್ರಗುಪ್ತ ಲೆಕ್ಕ ಇಟ್ಕೊಳ್ತಾನೆ ಅಂತ ಪುರಾಣಕಥೆಗಳಲ್ಲಿ ಕೇಳಿರ್ತೀವಿ. ಈ ಫೇಸ್‍ಬುಕ್ ಎಂಬ ವರ್ಚುವಲ್ ಜಗತ್ತಿನಲ್ಲೂ ನಮ್ಮೆಲ್ಲರ ಚಟುವಟಿಕೆಗಳು ಚಾಚೂ ತಪ್ಪದೆ ದಾಖಲಾಗುತ್ತವೆ.

ನಿಜ. ನಿಮ್ಮ ಪ್ರತಿ ಲೈಕು ಕಮೆಂಟುಗಳೂ, ಫೊಟೋ, ಪೋಸ್ಟುಗಳೂ, ಇನ್‍ಬಾಕ್ಸಲ್ಲಿ ನಡೆಯುವ ಸಂಭಾಷಣೆಗಳೂ ಎಲ್ಲವೂ ಒಂದು ಗುಪ್ತಜಾಗದಲ್ಲಿ ಸ್ಟೋರ್ ಆಗ್ತವೆ. ನೀವು ಡಿಲೀಟ್ ಮಾಡಿದರೂ  ಬ್ಯಾಕಪ್ ಡಿಲೀಟ್ ಆಗುವುದಿಲ್ಲ! ಆದರೆ ಅದು ನಿಮ್ಮ ಫೇಸ್‍ಬುಕ್ ಖಾತೆಯೊಳಗೇ ಇರುತ್ತದೆ ಎಂದು ಭಾವಿಸಿದ್ದರೆ ತಪ್ಪು. ಇವೆಲ್ಲ ಭದ್ರವಾಗಿರುವ ಲಾಕರ್ ಇಲ್ಲಿಂದ ಸಾವಿರಾರು ಕಿಲೋಮೀಟರ್  ದೂರವಿರೋ ಉತ್ತರ ಸ್ವೀಡನ್ ದೇಶದಲ್ಲಿದೆ. ಅಂದರೆ ಆಕ್ರ್ಟಿಕ್ ವೃತ್ತದಿಂದ ಕೇವಲ 70 ಮೈಲುಗಳೀಚೆಗೆ!

ಅಸಲಿಗೆ ಹೇಳಬೇಕಿರುವ ವಿಶೇಷವೇ ಇದು. ನಮ್ಮ ಯಾವುದೇ ಆನ್‍ಲೈನ್ ಖಾತೆಗಳ ಬ್ಯಾಕಪ್ ಎಲ್ಲಿ ಜಮೆಯಾಗಿರುತ್ತದೆ ಎಂಬುದನ್ನು ಯಾವ ಕಂಪನಿಗಳೂ ಬಹಿರಂಗ ಪಡಿಸುವುದಿಲ್ಲ. ಆದರೆ  ಇಂಡಿ ಪೆಂಡೆನ್ಸ್  ಪತ್ರಿಕೆಗೆ ಫೇಸ್‍ಬುಕ್ ಸರ್ವರ್ ರೂಮ್  ನೋಡುವ ಭಾಗ್ಯ ಲಭ್ಯವಾಗಿದೆ. ಈವರೆಗೂ ಫೇಸ್‍ಬುಕ್ ವೇರ್ ಹೌಸ್ ಎಲ್ಲಿದೆ ಎಂಬುದು ಯಾರಿಗೂ ಗೊತ್ತಿರಲಿಲ್ಲ. ಇಂಡಿಪೆಂಡೆನ್ಸ್   ಹೊರತಾಗಿ ಈ ಮುನ್ನ ಯಾರಿಗೂ ಯಾವುದೇ ಸಂಸ್ಥೆಗೂ ಫೇಸ್‍ಬುಕ್‍ದಾಗಲೀ ಗೂಗಲ್ , ಟ್ವಿಟರ್ ಇನ್ಯಾವುದೇ ಜಾಲತಾಣಗಳದ್ದಾಗಲೀ ಸರ್ವನ್ ಜಾಡು ಹಿಡಿಯಲು  ಸಾಧ್ಯವಾಗಿಲ್ಲ. ಫೇಸ್  ಬುಕ್ ಸರ್ವರ್ ಇರುವುದು ಜನಸಂಪರ್ಕವೇ ಇಲ್ಲದ ಮೈನಸ್ 40 ಡಿಗ್ರಿ ಶೀತಮಾನಕ್ಕೆ ಹೋಗಬಲ್ಲಂಥ ಹಿಮಾವೃತ ದಟ್ಟಾರಣ್ಯದಲ್ಲಿ  ಎಂಬುದು ಅತಿ ದೊಡ್ಡ ಅಚ್ಚರಿ.

ಅಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಸರ್ವರ್ ಗಳು ಎಡೆ ಬಿಡದೆ ಕಾರ್ಯನಿರ್ವಹಿಸುತ್ತಾ ಜಗತ್ತಿನ ಎಲ್ಲ ಫೇಸ್ ಬುಕ್ ಖಾತೆಗಳ ಡೇಟಾಗಳನ್ನು ಸಂಗ್ರಹಸಿಡುತ್ತವೆ.84 ಎಕರೆಗಳಷ್ಟು ಎಕರೆಗಳಷ್ಟು  ಜಾಗದಲ್ಲಿರುವ ಈ ಲೋಹ ಗೋಡೆಗಳ ಸರ್ವರ್ ಹೌಸ್‍ಗಳಲ್ಲಿ 500 ಬೃಹತ್ ಫ್ಯಾನ್‍ಗಳು ತಿರುಗುತ್ತವೆ. ಫೇಸ್‍ಬುಕ್, ವಾಟ್ಸ್‍ಆ್ಯಪ್, ಇನ್ ಸ್ಟಾಗ್ರಾಂನ ಡೇಟಾ ಗಳೂ ಇಲ್ಲಿನ ಸರ್ವರ್‍ಗಳಲ್ಲೇ  ಸಂಗ್ರಹ ವಾಗುತ್ತವೆ. ಅಕಸ್ಮಾತ್ ಈ 84 ಎಕರೆಯ ಜಾಗದಲ್ಲಿ ಆಗಬಾರದ್ದು ಆಗಿಹೋದರೆ, ಜಗತ್ತಿನ ಎಲ್ಲ ಫೇಸ್‍ಬುಕ್ ಖಾತೆಗಳೂ ಕ್ಷಣ ಮಾತ್ರದಲ್ಲಿ ಸರ್ವನಾಶ.ಇದು ಫೇಸ್ ಬುಕ್ ಡಿಪಾಸಿಟ್  ಲಾಕರ್ ಕಥೆ!

Write A Comment