ಅಂತರಾಷ್ಟ್ರೀಯ

ಹಜ್‌ ದುರಂತ: 16 ಭಾರತೀಯರ ಸಾವು

Pinterest LinkedIn Tumblr

hajjಮಿನಾ, ಸೌದಿ ಅರೇಬಿಯಾ (ಪಿಟಿಐ): ಮೆಕ್ಕಾ ಬಳಿ ಹಜ್‌ ಯಾತ್ರೆ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ ಮೃತಪಟ್ಟ 719 ಯಾತ್ರಿಕರಲ್ಲಿ 16 ಮಂದಿ ಭಾರತೀಯರು ಸೇರಿದ್ದಾರೆ.

ದುರ್ಘಟನೆಯಲ್ಲಿ 863 ಮಂದಿ ಗಾಯಗೊಂಡಿದ್ದಾರೆ. ಮೃತ ಭಾರತೀಯರಲ್ಲಿ ಒಂಬತ್ತು ಮಂದಿ ಗುಜರಾತ್‌ ರಾಜ್ಯಕ್ಕೆ ಸೇರಿದವರಾಗಿದ್ದಾರೆ. ತಮಿಳುನಾಡಿನ ಮೂವರು, ಜಾರ್ಖಂಡ್‌ನ ಇಬ್ಬರು, ಹೈದರಾಬಾದ್‌ ಮತ್ತು ಮಹಾರಾಷ್ಟ್ರದ ತಲಾ ಒಬ್ಬರು ಮೃತಪಟ್ಟವರಲ್ಲಿ ಸೇರಿದ್ದಾರೆ.

ಟೀಕೆ: ಸೌದಿ ಸರ್ಕಾರ ಸರಿಯಾಗಿ ಸುರಕ್ಷತಾ ಕ್ರಮ ತೆಗೆದುಕೊಂಡಿಲ್ಲ. ಆದ ಕಾರಣ ಈ ದುರಂತ ನಡೆಯಿತು ಎಂಬ ಮಾತು ಕೇಳಿಬರುತ್ತಿದೆ. ಈ ದುರಂತದಲ್ಲಿ ತನ್ನ ದೇಶದ 90 ಪ್ರಜೆಗಳನ್ನು ಕಳೆದುಕೊಂಡಿರುವ ಇರಾನ್‌ ಈ ಆರೋಪ ಮಾಡಿದೆ.

ಇತ್ತ ಯಾತ್ರಿಕರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಯಾತ್ರೆ ಮುಂದುವರಿಸಲು ಭಯವಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಆದರೆ ಸೌದಿ ಸಚಿವರೊಬ್ಬರು ಯಾತ್ರಿಕರತ್ತಲೇ ಬೆಟ್ಟು ಮಾಡಿ ತೋರಿಸಿದ್ದು, ಅವರು ಹಜ್‌ ನಿಯಮ ಪಾಲಿಸಿದ್ದರೆ, ವೇಳಾಪಟ್ಟಿ ಅನುಸರಿಸಿದ್ದರೆ, ಶಿಸ್ತಿನಿಂದ ನಡೆದುಕೊಂಡಿದ್ದರೆ ಈ ದುರಂತ ಘಟಿಸುತ್ತಿರಲಿಲ್ಲ ಎಂದಿದ್ದಾರೆ.

Write A Comment