ಅಂತರಾಷ್ಟ್ರೀಯ

ಹೂಡಿಕೆದಾರರಿಗೆ ಭಾರತದಿಂದ ಹೆಚ್ಚಿನ ಪ್ರತಿಫಲ: ಜೇಟ್ಲಿ

Pinterest LinkedIn Tumblr

3-299398-arun-jaitley-2ಹಾಂಗ್‌ಕಾಂಗ್, ಸೆ.20: ಬಂಡವಾಳ ಹೂಡಿಕೆದಾರರಿಗೆ ಭಾರತವು ಇತರ ರಾಷ್ಟ್ರಗಳಿಗಿಂತ ಅಧಿಕ ಪ್ರತಿಫಲವನ್ನು ನೀಡಲಿದೆ ಎಂದು ಭಾರತದ ಹಣಕಾಸು ಸಚಿವ ಅರುಣ್ ಜೇಟ್ಲಿ ಪ್ರತಿಪಾದಿಸಿದ್ದಾರೆ.
ಮೂಲಸೌಲಭ್ಯಗಳು ಹಾಗೂ ಇತರ ವಲಯಗಳಿಗೆ ವಿದೇಶಿ ಬಂಡವಾಳವು ಹೆಚ್ಚಿನ ಸಂಪನ್ಮೂಲ ಒದಗಿಸಲಿದೆ ಎಂದವರು ಹೇಳಿದ್ದಾರೆ.
ಹೆಚ್ಚಿನ ಸಾಮರ್ಥ್ಯವುಳ್ಳ ಉತ್ಪಾದನಾ ವಲಯವನ್ನು ಬಲಪಡಿಸುವಂತೆ ವಿನ್ಯಾಸಗೊಳಿಸಲಾಗಿರುವ ‘ಮೇಕ್ ಇನ್ ಇಂಡಿಯಾ’ದಂತಹ ಯೋಜನೆಗಳ ಮೂಲಕ ರಾಷ್ಟ್ರದಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ಸರಳಗೊಳಿಸುವಲ್ಲಿ ಭಾರತ ಸರಕಾರವು ವಿಶೇಷ ಗಮನ ಹರಿಸಿದೆ ಎಂದವರು ಹೇಳಿದ್ದಾರೆ.
ಇತರ ಹಲವು ರಾಷ್ಟ್ರಗಳಿಗಿಂತಲೂ ಹೆಚ್ಚಿನ ಪ್ರತಿಫಲವನ್ನು ಭಾರತವು ನೀಡಲಿದೆ ಎಂದು ರವಿವಾರ ಹಾಂಗ್‌ಕಾಂಗ್‌ನಲ್ಲಿ ಏರ್ಪಡಿಸಲಾಗಿದ್ದ ಹೂಡಿಕೆದಾರರ ಹಾಗೂ ವ್ಯಾಪಾರ ಮುಖಂಡರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ವೇಳೆ ಅವರು ತಿಳಿಸಿದರು.
”ರೈಲ್ವೆ, ಹೆದ್ದಾರಿಗಳು ಹಾಗೂ ವಿದ್ಯುತ್ ವಲಯಗಳು ಹೆಚ್ಚಿನ ಬಂಡವಾಳವನ್ನು ಅಪೇಕ್ಷಿಸುವ ವಲಯಗಳಾಗಿವೆ ಮತ್ತು ಈ ವಲಯಗಳಲ್ಲಿನ ಯಶಸ್ಸು ಬಹುತೇಕ ಹಣಕಾಸಿನ ಲಭ್ಯತೆಯನ್ನು ಅವಲಂಬಿಸಿರುತ್ತದೆ” ಎಂದು ಜೇಟ್ಲಿ ಅಭಿಪ್ರಾಯಿಸಿದರು.
ವಿದೇಶಿ ಬಂಡವಾಳ ಹೂಡಿಕೆದಾರರನ್ನು ಭಾರತದತ್ತ ಆಕರ್ಷಿಸುವ ಯತ್ನವಾಗಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಎರಡು ದಿನಗಳ ಪ್ರವಾಸಕ್ಕಾಗಿ ಇಲ್ಲಿಗೆ ಆಗಮಿಸಿದ್ದಾರೆ.
”ಡಿಜಿಟಲ್ ಇಂಡಿಯಾ ಹಾಗೂ ಮೇಕ್ ಇನ್ ಇಂಡಿಯಾ ಉಪಕ್ರಮಗಳು ಉತ್ಪಾದನಾ ವಲಯವನ್ನು ಬಲಪಡಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲ್ಪಟ್ಟಿವೆ ಮತ್ತು ಈ ಕ್ಷೇತ್ರಗಳಲ್ಲಿ ಭಾರತವು ವಿಪುಲ ಅವಕಾಶಗಳನ್ನು ಹೊಂದಿದೆ” ಎಂದವರು ಹೇಳಿದ್ದಾರೆ.

Write A Comment