ರಾಷ್ಟ್ರೀಯ

ಉರ್ದು ವಿದ್ವಾಂಸ ಶಮೀಮ್ ಹನಫಿಗೆ ಪ್ರಶಸ್ತಿ

Pinterest LinkedIn Tumblr

1shamim-hanafiಹೊಸದಿಲ್ಲಿ, ಸೆ.20: ಖ್ಯಾತ ಉರ್ದು ವಿದ್ವಾಂಸ ಶಮೀಮ್ ಹನಫಿಯವರಿಗೆ ಭಾರತೀಯ ಜ್ಞಾನಪೀಠವು ಇಂದು ಅವರ ನಿವಾಸದಲ್ಲಿ ಜ್ಞಾನಗರಿಮಾ ಮಾನದ ಅಲಂಕರಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆಯೆಂದು ಸಾಹಿತ್ಯ ಸಂಸ್ಥೆಯ ಹೇಳಿಕೆಯೊಂದು ತಿಳಿಸಿದೆ.

ಸಂಸ್ಥೆಗೆ 70 ವರ್ಷ ತುಂಬಿದ ಉತ್ಸವದ ವೇಳೆ, ಈ ವರ್ಷ ಆಗಸ್ಟ್ ನಲ್ಲಿ ಅದು ಆಯೋಜಿಸಿದ್ದ-ಕವಿಗಳಿಂದ ಹಿಂದಿ ಹಾಗೂ ಉರ್ದು ಕವನ ವಾಚನ ಸಂಜೆ-ವಾರ್ಷಿಕ ‘ಕವಿತಾ ಸಮಯ’ದ ವೇಳೆ ಈ ಪ್ರಶಸ್ತಿಯನ್ನು ಘೋಷಿಸ ಲಾಗಿತ್ತು.
ಈ ವರ್ಷಾರಂಭದಲ್ಲಿ ಸ್ಥಾಪಿತವಾದ ಜ್ಞಾನ ಗರಿಮಾ ಮಾನದ್ ಅಲಂಕರಣ ಪ್ರಶಸ್ತಿಯು ಭಾರತೀಯ ಭಾಷೆಗಳಲ್ಲಿ ಬರಹಗಾರರ ಕೊಡುಗೆಯನ್ನು ಗುರುತಿಸುತ್ತದೆ.
ಉತ್ತರಪ್ರದೇಶದ ಸುಲ್ತಾನ್‌ಪುರ ಮೂಲದವರಾದ ಹನಫಿ ಉನ್ನತ ವಿದ್ಯಾಭ್ಯಾಸಕ್ಕಾಗಿ ಅಲಹಾಬಾದಿಗೆ ಹೋದರು. ಅವರಲ್ಲಿ ಸಮಕಾಲೀನ ಅತ್ಯಂತ ವಿಖ್ಯಾತ ಉರ್ದು ಕವಿ ಫಿರಕ್ ಗೋರಖಪುರಿಯವರನ್ನು ಭೇಟಿಯಾದರು. ಹನಫಿ ಕ್ರಮೇಣ ಅವರಿಂದಲೇ ಕವಿಯಾಗಿ ರೂಪುಗೊಂಡರು.

ಹನಫಿ ತನ್ನ ‘ಜಡಿದಿಯತ್ ಕೀ ಫಲ್ಸಫಿಯನಿ ಅಸಾಸ್’, ‘ಘಝಲ್ ಕಾ ನಯಾ ಮಂಝರ್ನಾಮಾ’ ಹಾಗೂ ‘ಇನ್ಫಿರಾದಿ ಶವೂರ್ ಔರ್ ಇಜ್ತೆಮಾಯಿ ಜಿಂದಗಿ’ಗಳಂತಹ ವಿಮರ್ಶೆಗಳಿಗಾಗಿ ಖ್ಯಾತರಾಗಿದ್ದಾರೆ. ಅವರು, ಅಲ್ಪಕಾಲ ಅಲಿಗಡ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಬಳಿಕ ಜಾಮಿಯಾ ಮಿಲಿಯಾ ಇಸ್ಲಾಮಿಯಾಕ್ಕೆ ಸೇರಿದರು. 2012ರಲ್ಲಿ ಅವರು ಅದರ ಮಾನವತೆ ಹಾಗೂ ಭಾಷಾ ವಿಭಾಗದ ಡೀನ್ ಆಗಿ ನಿವೃತ್ತರಾದರು.
ಹನಫಿ ವಿವಿಧ ಹಿಂದಿ ಹಾಗೂ ಉರ್ದು ದಿನಪತ್ರಿಕೆ ಹಾಗೂ ನಿಯತಕಾಲಿಕೆಗಳ ಹವ್ಯಾಸಿ ಅಂಕಣಕಾರರಾಗಿದ್ದರು. ರೇಡಿಯೊ ಹಾಗೂ ಟಿವಿಗಳಿಗೆ ಕಥೆ ಹಾಗೂ ನಾಟಕಗಳನ್ನು ಬರೆದಿದ್ದಾರೆ.
ಹನಫಿಯವರಿಗೆ ಸರಸ್ವತಿಯ ವಿಗ್ರಹ, ರಜತಫಲಕ ಹಾಗೂ ಶಾಲು ನೀಡಿ ಗೌರವಿಸಲಾಯಿತು. ಅವರು ಮುಂದಿನ ಒಂದು ವರ್ಷ ಭಾರತೀಯ ಜ್ಞಾನಪೀಠದ ಮಾಸಿಕ ರೂ. 11 ಸಾವಿರ ಸ್ಟೈಪೆಂಡ್ ಪಡೆಯಲಿದ್ದಾರೆ.

Write A Comment