ಅಂತರಾಷ್ಟ್ರೀಯ

ಆಕೆಯ ದೊಡ್ಡ ಕರುಳಿನಲ್ಲಿತ್ತು 2,78,000 ಅಮೆರಿಕ ಡಾಲರ್ ಬೆಲೆಯ ಡೈಮಂಡ್

Pinterest LinkedIn Tumblr

vajraಬ್ಯಾಂಕಾಕ್: ಆ ಮಹಿಳೆಯ ದೊಡ್ಡ ಕರುಳಿನಲ್ಲಿ ಸೇರಿ ಭಾರೀ ನೋವುಂಟು ಮಾಡಿ, ಮಲ ವಿಸರ್ಜನೆಗೆ ಅಡ್ಡಿಯಾಗಿ ನರಳಿಸುತ್ತಿದ್ದ ಡೈಮಂಡ್ ಒಂದನ್ನು ವೈದ್ಯರು ಹೊರತೆಗೆದಿದ್ದು, ಅದರ ಬೆಲೆ ಬರೋಬ್ಬರಿ 2,78,000 ಅಮೆರಿಕ ಡಾಲರ್ (1,66,80,000). ಅಚ್ಚರಿ ಎಂದರೆ ಈ ಮಹಿಳೆ ಅದನ್ನು ಇಲ್ಲಿನ ಡೈಮಂಡ್ ಅಂಗಡಿಯೊಂದರಲ್ಲಿ ಕಳವು ಮಾಡಿ ನುಂಗಿಬಿಟ್ಟಿದ್ದಳು.

ನಂತರ ಭಾರೀ ನೋವಿನಿಂದ ನರಳುತ್ತಿದ್ದ ಅವಳು ವೈದ್ಯರ ಬಳಿ ಹೋದಾಗ ಕರುಳಿನಲ್ಲಿ ಏನೋ ಸಿಕ್ಕಿಹಾಕಿಕೊಂಡಿದೆ ಎಂದರು ಆಕೆ ಒಪ್ಪಿರಲಿಲ್ಲ. ಆದರೆ ಎಕ್ಸ್‌ರೆ ತೆಗೆದಾಗ ಗೊತ್ತಾಯಿತು. ಕೊನೆಗೆ ಮಹಿಳೆ  ತಾನು ಡೈಮಂಡ್ ಕದ್ದಿದ್ದನ್ನು ಒಪ್ಪಿಕೊಂಡಳು. ನಂತರ ವೈದ್ಯರು ಆಕೆಯ ಗುದದ್ವಾರದಲ್ಲಿ ಅತ್ಯಂತ ಸೂಕ್ಷ್ಮವಾದ  ಕೊಲೋನೊಸ್ಕೊಪ್ ಮೂಲಕ ಇಕ್ಕಳ ತೂರಿಸಿ ಅದನ್ನು ಹೊರತೆಗೆದರು.

39ವರ್ಷದ ಜಿಯಾಂಗ್ ಜುಲಿಯನ್ ಹಾಗೂ ಇನ್ನೊಬ್ಬ ಪುರುಷ ಸೇರಿ ಈ ಡೈಮಂಡ್ ಕಳವು ಮಾಡಿದ್ದರೆಂದು ಡೈಮಂಡ್ ಅಂಗಡಿಯವರು ದೂರು ನೀಡಿದ್ದರು. ಇವರ ಕೈ ಚಳಕ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಡೈಮಂಡ್‌ನಂಥದೇ ಇನ್ನೊಂದು ಹರಳನ್ನು ಕೊಂಡೊಯ್ದು ಅದನ್ನು ಬಾಕ್ಸ್‌ನಲ್ಲಿಟ್ಟು, ಒರಿಜಿನಲ್ ಡೈಮಂಡ್ ಕಳವು ಮಾಡಿದ್ದುರು.ಇದೆಲ್ಲಾ ಕ್ಯಾಮರದಲ್ಲಿ ಸ್ಪಸ್ಟವಾಗಿತ್ತು. ಕೊನೆಗೆ ಇಬ್ಬರನ್ನು ಇಲ್ಲಿನ ಸುವರ್ಣಭೂಮಿ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದರು.

Write A Comment