ಅಂತರಾಷ್ಟ್ರೀಯ

ಸಿಖ್ ವ್ಯಕ್ತಿ ಮೇಲೆ ಹಲ್ಲೆ ಮಾಡಿದ್ದ ಅಮೆರಿಕ ಪ್ರಜೆಗೆ 13ವರ್ಷ ಜೈಲು ಶಿಕ್ಷೆ

Pinterest LinkedIn Tumblr

jailವಾಷಿಂಗ್ಟನ್, ಸೆ.16-ಕಳೆದ ಎರಡು ವರ್ಷಗಳ ಹಿಂದೆ ಕ್ಯಾಲಿಪೋರ್ನಿಯದ  ಗುರುದ್ವಾರದ ಬಳಿ 82 ವರ್ಷದ ಸಿಖ್ ವ್ಯಕ್ತಿಯ ಮೇಲೆ ಜನಾಂಗೀಯ ದ್ವೇಷದ ಹಿನ್ನೆಲೆಯಲ್ಲಿ ರಾಡ್‌ನಿಂದ ಅಮಾನವೀಯ ಹಲ್ಲೆ ನಡೆಡಿದ್ದ ಅಮೆರಿಕ ಪ್ರಜೆಯೊಬ್ಬನಿಗೆ ಇಲ್ಲಿನ ನ್ಯಾಯಾಲಯ 13 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದೆ. ಪಿಯಾರಾಸಿಂಗ್ ಎಂಬ ವ್ಯಕ್ತಿ ಗುರುದ್ವಾರದಲ್ಲಿ ಸಮುದಾಯದ ಅಡಿಗೆ ಶಾಲೆಯಲ್ಲಿ ಆಹಾರ ತಯಾರಿಸಿಟ್ಟು ಹೊರ ಬಂದ ಸಂದರ್ಭ,

ಗುರುದ್ವಾರದಿಂದ ಹೊರಕ್ಕೆ ಎಳೆತಂದು ರಾಡ್‌ನಿಂದ ಹಲ್ಲೆ ಮಾಡಿದ್ದ ಗಿಲ್ಬರ್ಟ್ ಗ್ರೇಷಿಯಾ ಎಂಬ ವ್ಯಕ್ತಿ ಬಾಯಿಗೆ ಬಂದಂತೆ ನಿಂದಿಸಿ ಹಲ್ಲೆ ಮಾಡಿದ್ದ. 2013ರ ಮೇ 5ರಂದು ನಡೆದಿದ್ದ ಈ ಹಲ್ಲೆಯನ್ನು ಜನಾಂಗೀಯ ದ್ವೇಷದ ಪ್ರಕರಣ ಎಂದು ಪೊಲೀಸರು ಕೇಸು ದಾಖಲಿಸಿದ್ದರು.

ತಲೆಯಲ್ಲಿ ಗಂಭೀರ ಗಾಯಗೊಂಡಿದ್ದ ಪಿಯಾರಾಸಿಂಗ್ ಒಂದು ವಾರ ಕಾಲ ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆದಿದ್ದರು. ಇದೊಂದು ಭೀಕರವಾದ ಜನಾಂಗೀಯ ದ್ವೇಷದ ವರ್ತನೆ ಎಂದು ನ್ಯಾಯಾಧೀಶ ಅಲ್ಲಿನ್ ಹರೇಲ್-3 ಅವರು ಈ ಅಪರಾಧಕ್ಕೆ ಶಿಕ್ಷೆ ಆಗಲೇಬೇಕು ಎಂದಿದ್ದಾರೆ.

Write A Comment