ಅಂತರಾಷ್ಟ್ರೀಯ

ಜೈಲನ್ನೇ ಬ್ರೇಕ್ ಮಾಡಿದ ತಾಲಿಬಾನ್ ಸಂಘಟನೆ: 355 ಉಗ್ರರ ಪರಾರಿ

Pinterest LinkedIn Tumblr

terroristಘಜ್ನಿ: ಆಫ್ಘಾನಿಸ್ತಾನದಲ್ಲಿ ಭಾರಿ ಜೈಲ್ ಬ್ರೇಕ್ ನಡೆದಿದೆ. ಕಂದಹಾರ್ ಪ್ರಾಂತ್ಯದ ಘಜ್ನಿ ಪಟ್ಟಣದ ಜೈಲಲ್ಲಿ ಈ ಘಟನೆ ನಡೆದಿದೆ. ಅದಕ್ಕೆ ನೆರವಾದದ್ದು ತಾಲಿಬಾನ್ ಸಂಘಟನೆ.

ಭಾನುವಾರ ತಡರಾತ್ರಿ 10 ಉಗ್ರರು ಸೇನಾ ಸಮವಸ್ತ್ರ ಧರಿಸಿ ಜೈಲಿನ ಆವರಣಕ್ಕೆ ನುಗ್ಗಿ, ಕಾರ್ ಬಾಂಬ್ ಸ್ಫೋಟಿಸಿದ್ದಲ್ಲದೆ, ನಾಲ್ವರು ಪೊಲೀಸರನ್ನು ಹತ್ಯೆ ಮಾಡಿದ್ದಾರೆ. ಸ್ಫೋಟದಲ್ಲಿ ಒಬ್ಬ ಉಗ್ರ ಅಸುನೀಗಿದರೆ, ಇತರ ಮೂವರು ಪೊಲೀಸರ ಜತೆಗಿನ ಗುಂಡಿನ ಚಕಮಕಿಯಲ್ಲಿ ಸತ್ತಿದ್ದಾರೆ.

ಗುಂಡಿನ ಚಕಮಕಿಯಲ್ಲಿ 7 ಪೊಲೀಸರು ಗಾಯಗೊಂಡಿದ್ದಾರೆ. ಇದಾದ ಬಳಿಕ ಕಾರಾಗೃಹದ ವಿವಿಧ ಬ್ಯಾರೆಕ್‍ಗಳಿಗೆ ನುಗ್ಗಿ ಬಂದಿಗಳನ್ನು ಬಿಡುಗಡೆ ಮಾಡಿದರು. ಕಂದಹಾರ್‍ನ ಡೆಪ್ಯುಟಿ ಗವರ್ನರ್ ಅಹ್ಮದಿ ಪ್ರಕಾರ 355 ಮಂದಿ ಉಗ್ರರ ನೆರವಿಂದ ಪರಾರಿಯಾಗಿದ್ದಾರೆ.

Write A Comment