ಅಂತರಾಷ್ಟ್ರೀಯ

ಪ್ಯಾರಿಸ್ ನಲ್ಲಿ ಇಸ್ಲಾಮಿ ಮಹಿಳೆಯರ ಬಗ್ಗೆ ನಡೆದಿದ್ದ ಮುಸ್ಲಿಂ ಸಮಾವೇಶಕ್ಕೆ ಲಗ್ಗೆಯಿಟ್ಟ ಅರೆನಗ್ನ ಮಹಿಳಾ ಕಾರ್ಯಕರ್ತೆಯರು !

Pinterest LinkedIn Tumblr

ww2

ಪ್ಯಾರಿಸ್: ಪ್ಯಾರಿಸ್ ನಲ್ಲಿ ಇಸ್ಲಾಮಿ ಮಹಿಳೆಯರ ಬಗ್ಗೆ ನಡೆದಿದ್ದ ಮುಸ್ಲಿಂ ಸಮಾವೇಶಕ್ಕೆ ಲಗ್ಗೆಯಿಟ್ಟು ಕಾರ್ಯಕ್ರಮವನ್ನು ಹಾಳುಗೆಡವಲು ನೋಡಿದ ಇಬ್ಬರು ಅರೆನಗ್ನ ಸ್ವಯಂಘೋಷಿತ ಮಹಿಳಾ ಕಾರ್ಯಕರ್ತೆಯರನ್ನು ವೇದಿಕೆಯಿಂದ ಹೊರಗೆಳೆದು ಹಾಕಿದ ಘಟನೆಯನ್ನು ಮಾಧ್ಯಮವೊಂದು ಸೋಮವಾರ ವರದಿ ಮಾಡಿದೆ.

ಶನಿವಾರ ಸಂಜೆ ಪ್ಯಾರಿಸ್ ನ ಪಾಂಟೋಯಿಸ್ ನಲ್ಲಿ ಈ ಸಮಾವೇಶ ಜರುಗುತ್ತಿತ್ತು. ಇಬ್ಬರು ಇಮಾಂ ಗಳು ವೇದಿಕೆ ಮೇಲೆ ಭಾಷಣ ಮಾಡುತ್ತಿದ್ದಾಗ ಈ ಮಹಿಳೆಯರು ಅಚಾನಕ್ಕಾಗಿ ವೇದಿಕೆಗೆ ನುಗ್ಗಿದ್ದಾರೆ. ಅಲ್ಜೀರಿಯಾ ಮತ್ತು ಟುನ್ಸಿಯಾ ಮೂಲದ ಈ ಮಹಿಳೆಯರು ತಮ್ಮ ಎದೆಯ ಮೇಲೆ ಮುಸ್ಲಿಂ ವಿರೋಧಿ ಹೇಳಿಕೆಗಳನ್ನು ಬರೆದುಕೊಂಡಿದ್ದು, ವೇದಿಕೆ ಮೇಲೆ ಹತ್ತಿ ಮೈಕ್ ಕಸಿದು ಅವಗಳನ್ನು ಜೋರಾಗಿ ಕೂಗಿದ್ದರಿಂದ ಬೆದರಿದ ಇಮಾಂ ಗಳು ಕೆಳಗಿಳಿದಿದ್ದಾರೆ.

ನಂತರ ಭದ್ರತಾ ಸಿಬ್ಬಂದಿ ಮತ್ತಿತರು ಈ ಪ್ರತಿಭಟನೆಯನ್ನು ತಡೆಯಲು ಯಶಸ್ವಿಯಾಗಿದ್ದಾರೆ. ಈ ಮಹಿಳೆಯರಿಗೆ ಕೆಲವು ಪುರುಷರು ಹಲ್ಲೆ ಮಾಡಲು ನೋಡಿದ್ದು, ಅವರು ನಂತರ ತಪ್ಪಿಸಿಕೊಂಡಿದ್ದಾರೆ. ನಂತರ ಪೊಲೀಸರು ಮಧ್ಯೆ ಬಂದು ಆ ಮಹಿಳೆಯರನ್ನು ಕರೆದೊಯ್ದಿದ್ದಾರೆ. ಆ ಸಮಾವೇಶದ ಆಯೋಜಕರು ಆ ಮಹಿಳೆಯರ ಮೇಲೆ ಮೊಕದ್ದಮೆ ಹೂಡಲು ಚಿಂತಿಸುತ್ತಿದ್ದಾರೆ.

Write A Comment